ಅಜೀರ್ಣ ಸಮಸ್ಯೆನಾ ಹೀಗೆ ಮಾಡಿ ನೋಡಿ!

ಹಸಿಶುಂಠಿ, ಲಿಂಬೆ, ಪುದೀನಾ ಸೊಪ್ಪುಗಳನ್ನು ಗೊಟಾಯಿಸಿ ತಯಾರಿಸಿದ ಜ್ಯೂಸ್ ಸಹಾ ಉತ್ತಮ. ಶುಂಠಿಯ ಚಿಕ್ಕ ತುಂಡಿಗೆ ಕಪ್ಪು ಉಪ್ಪು ಮತ್ತು ಲಿಂಬೆರಸದ ಕೆಲವು ಹನಿಗಳನ್ನು ಚಿಮುಕಿಸಿ ಸೇವಿಸಿದರೆ ಹೊಟ್ಟೆಯುಬ್ಬರ ತಕ್ಷಣ ಕಡಿಮೆಯಾಗುತ್ತದೆ. ಮಜ್ಜಿಗೆ ನೀರಿಗೆ ಹುರಿದು ಪುಡಿಮಾಡಿದ ಜೀರಿಗೆ ಮತ್ತು ಕೊತ್ತಂಬರಿ ಪುಡಿಗಳನ್ನು ಸೇರಿಸಿ ಕುಡಿದರೂ ಹೊಟ್ಟೆಯುರಿ ಕಡಿಮೆಯಾಗುತ್ತದೆ. ಇಂತಹ ಇನ್ನೂ ಹಲವಾರು ಸುಲಭ ಪರಿಹಾರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಮುಂದೆ ಓದಿ…
#ಅಗತ್ಯವಾದಷ್ಟು ಹುರುಳಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ, ಕಟ್ಟು ಬಸಿಯಿರಿ. ಒಂದು ಬಟ್ಟಲು ಬಿಸಿ ಕಟ್ಟಿಗೆ ಸ್ವಲ್ಪ ತುಪ್ಪ ಸೇರಿಸಿ, ಸೇವಿಸಿ. ದಿನದಲ್ಲಿ ಎರಡು ಬಾರಿ ಸೇವಿಸಿದರೆ ಹೊಟ್ಟೆ ನೋವು ಪರಿಹಾರವಾಗುವುದು.
#ಬೆಳಗ್ಗೆ ಬಿಸಿ ನೀರಿನ ಸೇವನೆ:ಬೆಳಗ್ಗೆ ತಿಂಡಿ ತಿನ್ನುವ ಒಂದು ಗಂಟೆ ಮೊದಲು ಉಗುರುಬೆಚ್ಚಗಿನ ನೀರುವ ಸೇವಿಸಿ. ಇದು ನಿಮ್ಮ ಹೊಟ್ಟೆಯನ್ನು ಶುದ್ಧವಾಗುವಂತೆ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಊಟಕ್ಕೆ ಅರ್ಧಗಂಟೆ ಮೊದಲೂ ಕೂಡ ಬಿಸಿ ನೀರಿನ ಸೇವನೆ ಉತ್ತಮ ಅಭ್ಯಾಸವಾಗಿದೆ. ಬಿಸಿನೀರು ನಿಮ್ಮ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಹಾಗೂ ದೇಹವನ್ನೂ ಕೂಡ ಬೆಚ್ಚಗಿರಿಸುತ್ತದೆ.
#ಅರ್ಧ ಕಲ್ಲುಪ್ಪಿನ ಜತೆಗೆ ಒಂದು ಚಮಚ ಓಮ ಕಾಳುಗಳನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿಕೊಂಡು ಸೇವನೆ ಮಾಡಿ. ಇದರಿಂದ ವಾಯು ಮತ್ತು ಹೊಟ್ಟೆಯ ಸಮಸ್ಯೆಗಳು ದೂರವಾಗುವುದು.
#ಜೇನುತುಪ್ಪ ವಿಶೇಷ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದರಲ್ಲಿ ಉರಿಯೂತದಗುಣವನ್ನು ಶಮನ ಮಾಡುವ ಗುಣಗಳಿವೆ. ಅದರಲ್ಲಿರುವ ಖನಿಜಗಳು ಹೊಟ್ಟೆಯ ಆಮ್ಲೀಯತೆಯನ್ನು ಶಮನ ಮಾಡಿ ಅಜಿರ್ಣವನ್ನು ತಡೆಯುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಟೀ ಚಮಚ ಉತ್ತಮ ಗುಣಮಟ್ಟದ ಜೇನುತುಪ್ಪವನ್ನು ಸೇರಿಸಿಕೊಂಡು ಊಟಕ್ಕೆ ಮುಂಚೆ ಮತ್ತು ಮಲಗುವುದಕ್ಕೂ ಮುನ್ನ ಸೇವಿಸುವುದರಿಂದ ಉತ್ತಮ ಆರೋಗ್ಯ ಪರಿಣಾಮಗಳನ್ನು ಪಡೆಯಬಹುದಾಗಿದೆ.
#ಒಂದು ಲೋಟ ಬಿಸಿ ನೀರಿಗೆ 5 ಗ್ರಾಂನಷ್ಟು ಇಂಗು ಹಾಕಿ. ಇದಕ್ಕೆ ಒಂದು ಚಮಚ ಸಕ್ಕರೆ ಹಾಕಿಕೊಂಡರೆ ರುಚಿಯು ಚೆನ್ನಾಗಿರುವುದು. ಇದರ ಘಾಟು ವಾಸನೆ ಕುಡಿಯುವ ವೇಳೆ ತೊಂದರೆ ನೀಡಬಹುದು. ಆದರೆ ಇದು ವಾಯು ಮತ್ತು ಅಜೀರ್ಣ ಸಮಸ್ಯೆ ದೂರ ಮಾಡುವುದು.