ಅತಿಯಾಗಿ ಮರ ಸೇಬನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ!

ಈ ಹಣ್ಣು ಎಲ್ಲರಿಗೂ ಉತ್ತಮವಾಗಿದೆ, ಆದರೆ ಈ ಹಣ್ಣು ಕೆಲವು ಜನರಿಗೆ ಹಾನಿಕಾರಕವಾಗಿದೆ. ಹಾಗಿದ್ರೆ ಮರಸೇಬು ಹಣ್ಣನ್ನು ಯಾರೆಲ್ಲಾ ತಿನ್ಬಾರ್ದು ಎಂದು ಈ ಲೇಖನದ ಮೂಲಕ ತಿಳಿಯಿರಿ.

#ಅಜೀರ್ಣ ಸಮಸ್ಯೆ ಇದ್ದರೆ ಮರಸೇಬು ಹಣ್ಣುಗಳನ್ನು ತಿನ್ನದೇ ಇರುವುದೇ ಉತ್ತಮ. ಏಕೆಂದರೆ ಈ ಹಣ್ಣನ್ನು ತಿನ್ನುವುದರಿಂದ ಗ್ಯಾಸ್, ಸೆಳೆತ, ಹೊಟ್ಟೆ ಉಬ್ಬುವುದು ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.

#ಅಧಿಕ ರಕ್ತದೊತ್ತಡ(ಬಿಪಿ) ಹೊಂದಿರುವ ರೋಗಿಗಳಿಗೆ ಪೇರಳೆ ಹಣ್ಣುಗಳು ತುಂಬಾ ಪ್ರಯೋಜನಕಾರಿಯಾಗಿದ್ದರೂ, ಅವುಗಳನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಿ. ಇಲ್ಲದಿದ್ದರೆ ಅದು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನೇ ಮಾಡುತ್ತದೆ.

#ದೇಹದಲ್ಲಿ ಸಕ್ಕರೆ ಮಟ್ಟವು ಹೆಚ್ಚುವುದರಿಂದ ನಿಮ್ಮ ಶಕ್ತಿ- ಸಾಮರ್ಥ್ಯ ಕುಂಠಿತವಾಗುತ್ತದೆ. ಇದರಿಂದ ದೇಹ ದಣಿವಿನ ಸಮಸ್ಯೆಯನ್ನು ಎದುರಿಸುತ್ತದೆ.

#ಇತರ ಹಣ್ಣುಗಳಂತೆ ಮರಸೇಬು ಕೂಡ ದೇಹದ ಆರೋಗ್ಯಕ್ಕೆ ಒಳ್ಳೆಯದು. ಆದರೆ ನೆಗಡಿ, ಕೆಮ್ಮು ಇದ್ದರೆ ಈ ಹಣ್ಣನ್ನು ತಿನ್ನಲೇಬಾರದು. ಏಕೆಂದರೆ ಇದು ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿದೆ ಮತ್ತು ಇದನ್ನು ತಿನ್ನುವುದರಿಂದ ಕೆಮ್ಮು, ನೆಗಡಿ ಇನ್ನಷ್ಟು ಜೋರಾಗುತ್ತದೆ.

#ಇನ್ನು ಈ ಮರಸೇಬು ಹಣ್ಣನ್ನು ಹೆಚ್ಚು ತಿನ್ನುವುದರಿಂದ ನೀವು ಅಧಿಕ ಹೃದಯ ಬಡಿತ, ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆಗಳನ್ನು ಸಹ ಅನುಭವಿಸಬಹುದು.

#ಸಕ್ಕರೆ ಅಂಶವಿರುವ ಆಹಾರಗಳನ್ನು ಹೆಚ್ಚೆಚ್ಚು ಸೇವಿಸುದರಿಂದ ದೇಹದ ಟೇಸ್ಟ್​ ಬಡ್ಸ್​ ಸೆಲ್​ಗಳು ಸಾಯುತ್ತದೆ. ಕಾಲಕ್ರಮೇಣ ಇದು ಇಂದ್ರೀಯಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಮಧುಮೇಹ ರೋಗಕ್ಕೆ ಒಳಗಾಗುತ್ತೀರಿ.

#ಅತಿಯಾದ ಸಕ್ಕರೆ ಅಂಶ ದೇಹ ಸೇರುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟವು ಹೆಚ್ಚುತ್ತದೆ. ಇದರಿಂದ ಹಸಿವು ಕೂಡ ಹೆಚ್ಚಾಗುತ್ತದೆ. ಆದರೆ ನಾವು ಆಹಾರ ಸೇವಿಸಿದರೂ, ನಮ್ಮ ಮನಸ್ಸಿನಲ್ಲಿ ಆಹಾರ ಸೇವಿಸಿದ ತೃಪ್ತಿ ಇರುವುದಿಲ್ಲ.

ಗಮನಿಸಿ :ತೂಕ ಹೆಚ್ಚಾಗುವುದನ್ನ ತಡೆಯಲು ಈ ಮರಸೇಬು ಹಣ್ಣು ಸಹಾಯ ಮಾಡುತ್ತದೆ ಏಕೆಂದರೆ ಈ ಹಣ್ಣು ಕಡಿಮೆ ಕ್ಯಾಲೋರಿಯ ಆಹಾರ ಎಂದು ಪ್ರಸಿದ್ಧವಾಗಿದೆ. ಮಧ್ಯಮ ಗಾತ್ರದ ಮರಸೇಬು ಹಣ್ಣು ಸುಮಾರು 96 ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ದೊಡ್ಡ ಹಣ್ಣು ಸುಮಾರು 130 ಕ್ಯಾಲೋರಿ ಹೊಂದಿರುತ್ತದೆ ಎಂದು ತಿಳಿದುಬಂದಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group