ಧೂಮಪಾನ ಬಿಡಲು ಕೆಲವು ಸಲಹೆಗಳು!

ಅನೇಕ ವಿಧಾನಗಳ ಮೂಲಕ ಧೂಮಪಾನಕ್ಕೆ ಗುಡ್ ಬೈ ಹೇಳ್ಬಹುದು. ಇಂದು ನಾವು ಧೂಮಪಾನ ಬಿಡಲು ದೃಢಸಂಕಲ್ಪ ಮಾಡಿರುವವರು ಏನು ಮಾಡ್ಬೇಕು ಎಂಬುದನ್ನು ನೀಡಿದ್ದೇವೆ
#ಮನಸ್ಸನ್ನು ಶಾಂತವಾಗಿರಿಸಿ:ಧೂಮಪಾನವನ್ನು ತ್ಯಜಿಸುವ (Quit Smoking) ನಿಮ್ಮ ಉದ್ದೇಶದ ಬಗ್ಗೆ ಚಿಂತಿಸಬೇಡಿ. ನಿಮ್ಮ ಮೆಚ್ಚಿನ ಸಂಗೀತವನ್ನು ಕೇಳುವ ಮೂಲಕ, ಚಲನಚಿತ್ರಗಳನ್ನು ನೋಡುವ ಮೂಲಕ, ಸ್ನೇಹಿತರೊಂದಿಗೆ ತಮಾಷೆ ಮಾಡುವುದರ ಮೂಲಕ, ನಿಮ್ಮ ಮನಸ್ಸಿಗೆ ಸಿಗರೇಟ್ ಇಲ್ಲದೆಯೂ ನೀವು ಆರಾಮವಾಗಿರಬಹುದು ಎಂಬ ಸಂದೇಶವನ್ನು ನೀಡುತ್ತಾ ಇರಿ
#ವ್ಯಾಯಾಮ ಮಾಡಿ: ಹತ್ತು ನಿಮಿಷಗಳ ಸೈಕ್ಲಿಂಗ್ ಅಥವಾ ಜಾಗಿಂಗ್‌ನಿಂದ ಸಿಗರೇಟು ತ್ಯಜಿಸಲು ಸಾಕಷ್ಟು ನೆರವಾಗಬಹುದು ಎನ್ನುತ್ತಾರೆ ತಜ್ಞರು. ದೈಹಿಕ ವ್ಯಾಯಾಮದಿಂದ ಮಿದುಳಿನ ಚಟುವಟಿಕೆಗಳಲ್ಲಿ ಆಗುವ ಬದಲಾವಣೆಗಳು ಧೂಮಪಾನದ ಚಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಎಕ್ಸೆಟರ್ ವಿಶ್ವವಿದ್ಯಾಲಯದ ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ವ್ಯಾಯಾಮ ಪೂರ್ಣಗೊಳಿಸುವುದರಿಂದ ಡೋಪಮೈನ್ ಪ್ರಮಾಣ ಹೆಚ್ಚುತ್ತದೆ. ಇದರಿಂದ ಸಿಗರೇಟು ಬೇಕೆಂಬ ಹಂಬಲ ಕಡಿಮೆಯಾಗುತ್ತದೆ.
#ಕಚೇರಿಯಲ್ಲಿ ಡೆಡ್‌ಲೈನ್ ಒಳಗೆ ಕೆಲಸ ಮುಗಿಸಲು ತುಂಬಾ ಒತ್ತಡ, ವೈಯಕ್ತಿಕ ಬದುಕಿನಲ್ಲಿ ಅತೃಪ್ತಿ ಇದೆಯೆ? ನೀವು ಸಿಗರೇಟು ಸೇದಲು ಇವು ಯಾವುದಾದರೂ ಕಾರಣವೆ? ಹಾಗಿದ್ದರೆ ಒಬ್ಬ ಜವಾಬ್ದಾರಿಯುತ ಹಿರಿಯನಂತೆ ಯೋಚಿಸಿ. ದುಶ್ಚಟ ದೂರ ಮಾಡಲು ನೀವು ನಿಮ್ಮೊಳಗೆ ಚಿಂತಿಸಬೇಕು ಮತ್ತು ಮನೆಮಂದಿಯ ಜತೆ ಚರ್ಚಿಸಬೇಕು. ನೀವು ಸಿಗರೇಟು ಕೈಗೆತ್ತಿಕೊಳ್ಳುವುದರಿಂದ ನಿಮ್ಮ ಸಮಸ್ಯೆ ಪರಿಹಾರವಾಗುವುದಿಲ್ಲ. ನಿಜ ಹೇಳಬೇಕೆಂದರೆ ಇದರಿಂದ ನಿಮ್ಮ ಸಮಸ್ಯೆಗಳು ಹಲವು ಪಟ್ಟು ಹೆಚ್ಚಾಗಬಹುದು ಅಷ್ಟೆ! ಆಸ್ಟ್ರೇಲಿಯದ ಧೂಮಪಾನ ಮತ್ತು ಆರೋಗ್ಯ ಕಾರ್ಯಪಡೆಯ ಮುಖ್ಯಸ್ಥ ಪ್ರೊ. ಮ್ಯಾಥ್ಯೂ ಪೀಟರ್ಸ್ ಹೇಳುವಂತೆ, ಬಹಳಷ್ಟು ಮಂದಿ ಸಿಗರೇಟು ಸೇದಲು ಒತ್ತಡವೇ ಕಾರಣ.
#ಭಾವನಾತ್ಮಕ ಬೆಂಬಲ:ಧೂಮಪಾನವನ್ನು ತ್ಯಜಿಸಿದ ನಂತರ ಕೆಲವರಿಗೆ ಉದ್ವಿಗ್ನತೆ ಹೆಚ್ಚಾಗುತ್ತದೆ, ಆದ್ದರಿಂದ ನೀವು ನಿಮ್ಮ ಪ್ರೀತಿಪಾತ್ರರ ಹತ್ತಿರ ಉಳಿಯುವುದು ಮತ್ತು ಅವರಿಂದ ಭಾವನಾತ್ಮಕ ಬೆಂಬಲವನ್ನು ಪಡೆಯುವುದು ಮುಖ್ಯವಾಗಿದೆ. ಇದಲ್ಲದೇ ಕೌನ್ಸೆಲಿಂಗ್‌ನ ಸಹಾಯವನ್ನೂ ಪಡೆಯಬಹುದು.
#ವಿಟಮಿನ್ ಸಿ : ವಿಟಿಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು ಕೂಡ ಧೂಮಪಾನದಿಂದ ದೂರವಿರಲು ನೆರವಾಗುತ್ತವೆ. ಕಿತ್ತಳೆ, ಬಾಳೆಹಣ್ಣು, ಪೇರಲ, ಕಿವಿ, ಪ್ಲಮ್, ಸ್ಟ್ರಾಬೆರಿ ಮುಂತಾದ ಹಣ್ಣುಗಳನ್ನು ಸೇವಿಸಬೇಕು.