ಹುಳುಕು ಹಲ್ಲಿನ ಸಮಸ್ಯೆಗೆ ಸರಳ ಪರಿಹಾರ!

ಹುಳುಕು ಹಲ್ಲಿನ ಸಮಸ್ಯೆ ಇತ್ತೀಚೆಗೆ ಸಾಮಾನ್ಯವಾಗಿದೆ. ಅದರಲ್ಲೂ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ನಮ್ಮ ಹಲ್ಲಿನ ರಚನೆ, ಬಾಯಿಯಲ್ಲಿರುವ ಸೂಕ್ಷ್ಮಜೀವಿ, ತಿನ್ನುವ ಆಹಾರ -ಇವೆಲ್ಲವೂ ಹುಳುಕು ಹಲ್ಲಿಗೆ ಕಾರಣವಾಗುತ್ತವೆ ಇಂತಹ ಸಮಸ್ಯೆಗೆ ಇಲ್ಲಿವೆ ಕೆಲವು ಪರಿಹಾರಗಳು.
#ಈ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಲು ಮನೆಯಲ್ಲೇ ಮಾಡಿ ಸರಳ ಪರಿಹಾರ ಪ್ರತಿದಿನ 2 ಬಾರಿ ತಪ್ಪದೆ ಹಲ್ಲು ಉಜ್ಜಿ ಇದರಿಂದ ಹಲ್ಲು ನೋವು ನಿವಾರಣೆಯಾಗುತ್ತದೆ ಹಲ್ಲು ಹುಳುಕು ಆಗುವುದಿಲ್ಲ ಜೊತೆಗೆ ಹಲ್ಲುಗಳ ಮೇಲೆ ಕುಳಿತಿದ್ದರೆ ಆ ಸಮಸ್ಯೆ ಪರಿಹಾರವಾಗುತ್ತೆ ನೀವು ಹಲ್ಲು ಉಜ್ಜುವ ಸಮಯದಲ್ಲಿ ವಾರಕ್ಕೊಮ್ಮೆಯಾದರೂ ನೀವು ಬಳಸುವ ಪೇಸ್ಟ್ ಗೆ ಚಿಟಿಕೆ ಉಪ್ಪು ಮತ್ತು ಅರಿಶಿಣ ಮಿಶ್ರಣ ಮಾಡಿ ಹಲ್ಲನ್ನು ಉಜ್ಜಬೇಕು, ಇದರಿಂದ ಹಲ್ಲಿನ ಮೇಲಿರುವ ಸುಲಭವಾಗಿ ತೆಗೆದು ಹಾಕಬಹುದು.
#ಯಾವುದೇ ಸಕ್ಕರೆ, ಸಿಹಿ ಅಂಶದ ಸೇವನೆ ನಂತರ ಬಾಯನ್ನು ನೀರಿನಿಂದ ಮುಕ್ಕಳಿಸಬೇಕು. ಸಣ್ಣ ಪ್ರಮಾಣದ ಹುಳುಕು ಹಲ್ಲುಗಳಿಗೆ ವೈದ್ಯರಿಂದ ಬೆಳ್ಳಿ, ಸಿಮೆಂಟ್ ಮುಂತಾದವನ್ನು ಚಿಕಿತ್ಸೆಗನುಸಾರವಾಗಿ ತುಂಬಿಸಬೇಕು. ಹಲ್ಲುಗಳ ಮೇಲೆ, ನಡುವೆ ಆಹಾರಕಣ ಸಿಕ್ಕಿ ಬೀಳದಂತೆ ಜಾಗ್ರತೆವಹಿಸಬೇಕು.
#ಹಣ್ಣು, ತರಕಾರಿ, ಹಾಲು, ಧಾನ್ಯ ಎಲ್ಲವನ್ನೂ ಒಳಗೊಂಡ ಉತ್ತಮ ಆಹಾರ ಸೇವನೆ, ದಿನಕ್ಕೆರಡು ಬಾರಿ ಸರಿಯಾಗಿ ಬ್ರಷ್ ಮಾಡುವುದು, ದಿನಕ್ಕೊಂದು ಬಾರಿ ದಂತ ದಾರ ಬಳಸುವುದು ನಿಯಮಿತವಾಗಿ ಆರು ತಿಂಗಳಿಗೆ ದಂತ ವೈದ್ಯರ ಭೇಟಿ ಮಾಡುವುದು.
#ಕುಪ್ಪಿ ಗಿಡದ ಚೂರ್ಣ ಹಲ್ಲಿನ ಮೇಲಿರುವ ಕೊಳೆಯನ್ನು ತೆಗೆದು ಹಾಕಲು ಸಹಕಾರಿ ಮತ್ತು ಹಲ್ಲು ನೋವಿನ ಶಮನಕ್ಕೆ ಸಹಕಾರಿ ಹಾಗಾಗಿ ಹಲ್ಲು ನೋವಿನ ಶಮನಕ್ಕೆ ಮತ್ತು ಹಲ್ಲಿನ ಮೇಲಿರುವ ಕಲೇನ ತೆಗೆದು ಹಾಕುವುದಕ್ಕೆ ಮಾಡಿ ಈ ಸರಳ ಉಪಾಯ.
#ಚಿಟಕಿ ಉಪ್ಪು ಮತ್ತು ಚಿಟಕಿ ಅರಿಶಿನ. ನಿಮಗೆ ಬೇಕಾದಷ್ಟು ಒರಮನದಲ್ಲಿ ಎರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್ ಮಾಡಿ ನಂತರ ಅದನ್ನ ಒಸಡಿನ ಸುತ್ತಲೂ ಹಚ್ಚಿ ತಿಕ್ಕುವುದರಿಂದ ಒಸಡಿನ ಸುತ್ತ ಇರುವ ಹೊಲಸು ಗಲೀಜು, ಕೀವು ಏನೇ ಇದ್ದರೂ ಸಹ ಹೊರಗೆ ಬರತ್ತೆ ಒಸಡು ಕ್ಲೀನ್ ಆಗಿರತ್ತೆ.