ಹಸಿರು ಬಟಾಣಿ ಸೇವನೆಯ ಆರೋಗ್ಯಕಾರಿ ಪ್ರಯೋಜನಗಳು

ಈ ಸಸ್ಯವು ವೇಗವಾಗಿ ಬೆಳೆಯುತ್ತದೆ ಮತ್ತು ಇದನ್ನು ಬೆಳೆಯುವುದು ಸುಲಭ. ಯೋಗ್ಯ ಮಣ್ಣು ಮತ್ತು ತಂಪಾದ ವಾತಾವರಣಕ್ಕೆ ಅಗತ್ಯ. ಮಳೆಗಾಲ/ ಚಳಿಗಾಲವು ಫಸಲು ಬರುವ ಕಾಲ ಸಮಯ. ಈ ಗಿಡವನ್ನು ಪೋಷಿಸಿದರೆ ಇದರ ಫಲ ಬರುತ್ತದೆ. ಕಾಯಿಗಳು-3 ಇಂಚು ಉದ್ದವಿರುತ್ತದೆ. ಈ ಕಾಯಿಯ ಒಳಗಿನ ಬೀಜಗಳು ತಿನ್ನಲು ಯೋಗ್ಯವಾದ ಆಹಾರ. ಈ ಬೀಜಗಳನ್ನು ಅಥವಾ ಕಾಳುಗಳನ್ನು ಸೇವಿಸುವುದರಿಂದ ನಾವು ಹಲವಾರು ರೋಗ-ರುಜಿನಗಳಿಂದ ಪಾರಾಗಬಹುದು. ಹೇಗೆ ಈ ಕಾಳುಗಳು ನಮಗೆ ಉಪಕಾರಿ ಎಂದು ವಿವರಿಸಲಾಗಿದೆ ಓದಿ ತಿಳಿಯಿರಿ.

#ಪ್ರೋಟೀನ್ ಅತ್ಯುತ್ತಮ ಮೂಲಬಟಾಣಿ ಕಾಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಪ್ರೋಟೀನ್ ಮಾತ್ರ ಸಸ್ಯ ಆಧಾರಿತ ಪ್ರೋಟೀನ್ಗಳನ್ನು ಅವಲಂಬಿಸಿರುವವರಿಗೆ ಬಟಾಣಿ ಕಾಳು ಅತ್ಯುತ್ತಮ ಆಯ್ಕೆ ಆಗಿದೆ. ಬಟಾಣಿ ಕಾಳುಗಳಲ್ಲಿ ನಾರಿನ ಪ್ರಮಾಣವೂ ಉತ್ತಮ ಆಗಿದೆ. ಪ್ರಾಣಿ ಮೂಲದ ಪ್ರೊಟೀನ್ ತೆಗೆದುಕೊಳ್ಳದವರು ಬಟಾಣಿ ಕಾಳು ತಿನ್ನುವುದರಿಂದ ಸಾಕಷ್ಟು ಪ್ರೊಟೀನ್ ಸಿಗುವುದು ಇದೇ ಕಾರಣಕ್ಕೆ ಆಗಿದೆ.

#ರೋಗನಿರೋಧಕ ಶಕ್ತಿಗಾಗಿ ಬೆಸ್ಟ್ ಆಯ್ಕೆ!• ಹಚ್ಚ ಹಸಿರು ಬಟಾಣಿ ಕಾಳುಗಳಲ್ಲಿ ಆಂಟಿ ಆಕ್ಸಿಡೆಂಟ್ ಹೇರಳವಾಗಿದೆ. ಇದು ದೇಹವನ್ನು ಗಂಭೀರವಾದ ಆರೋಗ್ಯ ಸಮಸ್ಯೆಗಳಿಂದ ರಕ್ಷಣೆ ಮಾಡುತ್ತದೆ.

#ಕಣ್ಣುಗಳ ಆರೋಗ್ಯ ಕಾಪಾಡುತ್ತದೆ:ವಯಸ್ಸಾದಂತೆ ಎದುರಾಗುವ ಕಣ್ಣಿನ ಪೊರೆ ಸಮಸ್ಯೆ ಕೆಲವರನ್ನ ನಾನಾ ಸಂಕಷ್ಟಗಳಿಗೆ ಗುರಿ ಮಾಡುತ್ತದೆ.ಇನ್ನು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಹಾಗೂ ವಯಸ್ಕರಿಗೆ ಕಣ್ಣಿಗೆ ಸಂಬಂಧ ಪಟ್ಟ ಹಲವಾರು ಸಮಸ್ಯೆಗಳು ಎದುರಾಗುತ್ತವೆ.ಲ್ಯೂಟೀನ್ ಅಂಶ ಹಸಿ ಬಟಾಣಿ ಕಾಳುಗಳಲ್ಲಿ ಸಾಕಷ್ಟು ಇದೆ ಎಂದು ಹೇಳುತ್ತಾರೆ. ಇದರ ನಿರಂತರ ಸೇವನೆಯಿಂದ ದೂರದೃಷ್ಟಿ ಅಥವಾ ಹತ್ತಿರದ ದೃಷ್ಟಿ ಸಮಸ್ಯೆಯನ್ನು ಕೂಡ ಇದು ಪರಿಹಾರ ಮಾಡುವಲ್ಲಿ ಕಾರ್ಯ ನಿರ್ವಹಿಸುತ್ತದೆ.

#ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು• ಮನುಷ್ಯನ ಹೃದಯ ಆತನ ಜೀವನಾಡಿ ಎಂದು ಹೇಳಬಹುದು. ಏಕೆಂದರೆ ಅದು ಬಡಿದು ಕೊಳ್ಳದಿದ್ದರೆ ಮನುಷ್ಯ ಜೀವಂತವಾಗಿರಲು ಸಾಧ್ಯವೇ ಇಲ್ಲ. ಅತ್ಯುತ್ತಮ ಹೃದಯದ ಆರೋಗ್ಯಕ್ಕೆ ಹೃದಯಕ್ಕೆ ಸಹಕಾರಿ ಆದಂತಹ ಆಹಾರಗಳನ್ನು ಸೇವನೆ ಮಾಡಬೇಕು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group