ಮೊಟ್ಟೆಯ ಸಿಪ್ಪೆಯನ್ನು ಬಿಸಾಡುವ ಮುನ್ನ ಅದರ ಪ್ರಯೋಜನ ತಿಳಿಯಿರಿ!

ಮೊಟ್ಟೆ ಪೌಷ್ಟಿಕಾಂಶಗಳ ಗಣಿ. ಮೊಟ್ಟೆಗಳು ದೇಹಕ್ಕೆ ಅಗತ್ಯವಿರುವ ಒಂಬತ್ತು ರೀತಿಯ ಪ್ರೊಟೀನ್‌ಗಳನ್ನು ಒದಗಿಸುತ್ತದೆ. ವಿಶೇಷವಾಗಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅವುಗಳಲ್ಲಿರುವ ಪ್ರೋಟೀನ್ ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಬೇಯಿಸಿದ ಮೊಟ್ಟೆಯಿಂದ ಮಾತ್ರವಲ್ಲದೆ ಚಿಪ್ಪಿನಿಂದಲೂ ಅನೇಕ ಪ್ರಯೋಜನಗಳಿವೆ. . ಅವುಗಳಿಂದ ಮೊಟ್ಟೆಯನ್ನು ಬೇರ್ಪಡಿಸಿದ ನಂತರ ಹೆಚ್ಚಿನ ಚಿಪ್ಪುಗಳನ್ನು ಕಸದ ಬುಟ್ಟಿಗೆ ಎಸೆಯಲಾಗುತ್ತದೆ. ಈ ಚಿಪ್ಪುಗಳನ್ನು ವಿವಿಧ ಮನೆಮದ್ದುಗಳು ಮತ್ತು ಕಾಸ್ಮೆಟಿಕ್ ಚಿಕಿತ್ಸೆಗಳಿಗೆ ಬಳಸಬಹುದು. ಮೊಟ್ಟೆಯ ಚಿಪ್ಪಿನ ಪ್ರಯೋಜನಗಳೇನು ಎಂಬುದನ್ನು ಈಗ ತಿಳಿದುಕೊಳ್ಳೋಣ.

#ಮೊಟ್ಟೆಯ ಚಿಪ್ಪುಗಳು ಸುಮಾರು ಶೇ. 95 ರಷ್ಟು ಕ್ಯಾಲ್ಸಿಯಂನಿಂದ ಕೂಡಿದ್ದು, ಗುಲಾಬಿಗಳಿಗೆ ಬೇಕಾದ ಕ್ಯಾಲ್ಸಿಯಂ ಅಗತ್ಯವನ್ನು ಪೂರೈಸಲಿದೆ

#ಮೊಟ್ಟೆಯ ಚಿಪ್ಪನ್ನು ಪಕ್ಷಿಗಳಿಗೆ ಆಹಾರವಾಗಿಯೂ ಬಳಸಬಹುದು. ಮೊಟ್ಟೆಯ ಚಿಪ್ಪನ್ನು ಪುಡಿಮಾಡಿ ಮನೆಯ ಮೇಲ್ಛಾವಣಿಯ ಮೇಲೆ ಒಂದು ಪಾತ್ರೆಯಲ್ಲಿ ಇರಿಸಿ.

#ಮೊಟ್ಟೆಗಳ ಗಾತ್ರ ಸಣ್ಣದಾಗಿರಬಹುದು. ಆದರೆ ಮೊಟ್ಟೆಗಳು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿವೆ ಮತ್ತು ಸಮತೋಲಿತ ಆಹಾರಕ್ಕೆ ಅತ್ಯುತ್ತಮವಾದ ಸೇರ್ಪಡೆಯಾಗಿದೆ.ಮನೆಯಲ್ಲಿ ಬೆಳೆಸುವ ಗಿಡಗಳಿಗೆ ಮಣ್ಣಿನ ಸಂಯೋಜಕವಾಗಿ, ಇವು ಖನಿಜಗಳನ್ನು ಸೇರಿಸುತ್ತವೆ ಮತ್ತು ಮಣ್ಣನ್ನು ಸಡಿಲವಾಗಿಸಿ ಮತ್ತು ಗಾಳಿಯಲ್ಲಿಡಲು ಸಹಾಯ ಮಾಡುತ್ತವೆ.

#ಮೊಟ್ಟೆಯ ಸಿಪ್ಪೆಯನ್ನು ಪುಡಿ ಮಾಡಿ ವಿನೆಗರ್ ಅಥವಾ ನಿಂಬೆ ರಸದ ಜೊತೆ ಸಹ ಅಪ್ಲೇ ಮಾಡಬಹುದು. ಇದು ಮುಖದಲ್ಲಿರುವ ಹಳೆಯ ಕಲೆಗಳನ್ನೂ ನಿವಾರಿಸುತ್ತದೆ. ಮೊಟ್ಟೆ ಕೇವಲ ಆರೋಗ್ಯ, ಸೌಂದರ್ಯ ನೀಡುವುದಷ್ಟೇ ಅಲ್ಲ, ಗಿಡಗಳಿಗೂ ಜೀವ ತುಂಬುವ ಕೆಲಸ ಮಾಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group