ಸಾಸಿವೆ ಎಣ್ಣೆಯನ್ನು ಬಳಸುವುದರಿಂದ ಸಿಗುವ ಪ್ರಯೋಜನ

ಒಡೆದ ತುಟಿಗಳ ಸಮಸ್ಯೆಯಿಂದ ಬಳಲುತ್ತಿದ್ದರೆ,ರಾತ್ರಿ ಮಲಗುವ ಮೊದಲು ಸಾಸಿವೆ ಎಣ್ಣೆಯನ್ನು ತುಟಿಗಳ ಮೇಲೆ ಹಚ್ಚಿ. ಇದು ಬಿರುಕು ಬಿಟ್ಟ ತುಟಿಗಳನ್ನು ಮೃದುಗೊಳಿಸುತ್ತದೆ.
ಸಾಸಿವೆ ಎಣ್ಣೆ (Mustard Oil), ಪ್ರತಿಯೊಂದು ಅಡುಗೆಮನೆಯಲ್ಲಿಯೂ ಕಂಡುಬರುತ್ತದೆ. ಇದು ಆಹಾರವನ್ನು ರುಚಿಯಾಗಿ ಮಾಡುವುದಲ್ಲದೆ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಉತ್ತರ ಭಾರತದಲ್ಲಿ ಈ ತೈಲವನ್ನು ಆಹಾರದ ಹೊರತಾಗಿ ಅನೇಕ ವಿಷಯಗಳಲ್ಲಿ ಬಳಸಲಾಗುತ್ತದೆ. ಅ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುವ ಸಾಸಿವೆ ಎಣ್ಣೆಯು ಔಷಧೀಯ ಗುಣಗಳಿಂದ ಕೂಡಿದೆ. ಹಾಗಿದ್ರೆ ಸಾಸಿವೆ ಎಣ್ಣೆ ಬಳಕೆಯಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳೇನು ನೋಡೋಣ.
#ಸಾಸಿವೆ ಎಣ್ಣೆಯಲ್ಲಿ ಥಯಾಮಿನ್, ಫೋಲೇಟ್ ಮತ್ತು ನಿಯಾಸಿನ್ ನಂತಹ ವಿಟಮಿನ್ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ದೇಹ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ದೇಹದ ಹೆಚ್ಚುವರಿ ಕೊಬ್ಬನ್ನು ಕೂಡ ಕಡಿಮೆಯಾಗುತ್ತದೆ.
#1 ಟೀಸ್ಪೂನ್ ಸಾಸಿವೆ ಎಣ್ಣೆಯನ್ನು ಕುಡಿಯುವುದರಿಂದ ಕೆಮ್ಮು ಮತ್ತು ಗಂಟಲು ನೋವಿನಲ್ಲಿ ಸಾಕಷ್ಟು ಪರಿಹಾರ ಸಿಗುತ್ತದೆ.
#ಒಡೆದ ತುಟಿಗಳ ಸಮಸ್ಯೆಯಿಂದ ಬಳಲುತ್ತಿದ್ದರೆ,ರಾತ್ರಿ ಮಲಗುವ ಮೊದಲು ಸಾಸಿವೆ ಎಣ್ಣೆಯನ್ನು ತುಟಿಗಳ ಮೇಲೆ ಹಚ್ಚಿ. ಇದು ಬಿರುಕು ಬಿಟ್ಟ ತುಟಿಗಳನ್ನು ಮೃದುಗೊಳಿಸುತ್ತದೆ.
#ಶೀತ, ಗೊಣ್ಣೆ ಸೋರುವಿಕೆಯಿದ್ದರೆ 2 ಹನಿ ಸಾಸಿವೆ ಎಣ್ಣೆಯನ್ನು ಮೂಗಿಗೆ ಹಾಕಿ. ಹಾಗೆಯೇ ಮೂಗಿನ ತುರಿಕೆ ಮತ್ತು ಶುಷ್ಕತೆಯಂತಹ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ.
#ಕರ್ಪೂರವನ್ನು ಬಿಸಿ ಸಾಸಿವೆ ಎಣ್ಣೆಯಲ್ಲಿ ಹಾಕಿ ಮಸಾಜ್ ಮಾಡುವುದರಿಂದ ಅಸ್ತಮಾ ಸಮಸ್ಯೆಗೆ ಪರಿಹಾರ ಕಾಣಬಹುದು.
#ಸಾಸಿವೆ ಎಣ್ಣೆಯಲ್ಲಿ ಥಯಾಮಿನ್, ಫೋಲೇಟ್ ಮತ್ತು ನಿಯಾಸಿನ್ ನಂತಹ ವಿಟಮಿನ್ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ದೇಹ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ದೇಹದ ಹೆಚ್ಚುವರಿ ಕೊಬ್ಬನ್ನು ಕೂಡ ಕಡಿಮೆಯಾಗುತ್ತದೆ.