ಬೇಸಿಗೆಯಲ್ಲಿ ನಿಮ್ಮ ಸ್ಕಿನ್ ಕೇರ್ ಹೀಗಿರಲಿ..!

ವಾತಾವರಣ ಬದಲಾದಂತೆ ಚರ್ಮದ ಗುಣವೂ ಬದಲಾಗುತ್ತದೆ. ಚಳಿಗಾಲದಲ್ಲಿ ಚರ್ಮ ಒಣಗಿದಂತಿರುತ್ತದೆ. ಆದರೆ ಬೇಸಿಗೆ ಬಂತೆಂದರೆ ಚರ್ಮದ ಸ್ವಭಾವವೂ ಬದಲಾಗುತ್ತದೆ. ಈಗಷ್ಟೇ ಬೇಸಿಗೆ ಆರಂಭವಾಗಿದೆ. ಅತಿಯಾದ ಶಾಖ ಹಾಗೂ ಆರ್ದ್ರತೆಯ ಚರ್ಮಕ್ಕೆ ಹಾನಿಯುಂಟು ಮಾಡಬಹುದು. ಈ ಕಾಲದಲ್ಲಿ ಸನ್‌ಬರ್ನ್, ಮೊಡವೆ, ದದ್ದು, ತುರಿಕೆಯಂತಹ ಸಮಸ್ಯೆಗಳು ಚರ್ಮವನ್ನು ಕಾಡುತ್ತವೆ. ಆ ಕಾರಣದಿಂದ ಚರ್ಮದ ಆರೋಗ್ಯವನ್ನು ಕಾಳಜಿ ಮಾಡುವುದು ಅಗತ್ಯ. ಹಾಗಾದರೆ ಬೇಸಿಗೆಯಲ್ಲಿ ಚರ್ಮದ ಕಾಳಜಿ ಮಾಡುವುದು ಹೇಗೆ? ತಿಳಿಯಿರಿ
#ಎರಡು ಬಾರಿ ಸ್ನಾನ ಮಾಡಿ:ಬೇಸಿಗೆಯಲ್ಲಿ ಎರಡು ಬಾರಿ ಸ್ನಾನ ಮಾಡುವುದು ಉತ್ತಮ. ಅತಿಯಾಗಿ ಬೆವರುವ ಕಾರಣ ಎರಡು ಬಾರಿ ಸ್ನಾನ ಅಗತ್ಯ, ಇದರಿಂದ ದೂಳು, ವಾತಾವರಣ ಕಲ್ಮಶವನ್ನು ಚರ್ಮದಿಂದ ಸ್ವಚ್ಛ ಮಾಡಬಹುದು.
#ಸನ್‌ಸ್ಕ್ರೀನ್ ಬಳಕೆ:ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ಸನ್‌ಸ್ಕ್ರೀನ್ ಬಳಕೆ ಮಾಡುವುದನ್ನು ಮರೆಯಬಾರದು. ಬೇಸಿಗೆಯಲ್ಲಿ ಸನ್‌ಟ್ಯಾನ್ ಆಗುವ ಸಾಧ್ಯತೆ ಹೆಚ್ಚು. ಸೂರ್ಯನ ಯುವಿ ಕಿರಣಗಳು ಚರ್ಮಕ್ಕೆ ಹಾನಿಯುಂಟು ಮಾಡುತ್ತವೆ. ಇದು ಚರ್ಮದಲ್ಲಿ ಸುಕ್ಕು, ವಯಸ್ಸಾದಂತೆ ಕಾಣಿಸುವುದು, ಕಪ್ಪು ಕಲೆಗಳು ಉಂಟಾಗಲು ಕಾರಣವಾಗಬಹುದು. ಆ ಕಾರಣಕ್ಕೆ ಎಸ್‌ಫಿಎಸ್ ಅಧಿಕವಾಗಿರುವ ಸನ್‌ಸ್ಕ್ರೀನ್ ಲೋಷನ್ ಬಳಕೆಯನ್ನು ತಪ್ಪಿಸಬಾರದು. ನಾವು ರೆಗ್ಯೂಲರ್ ಬಳಸುವ ಸನ್‌ಸ್ಕ್ರೀನ್ ಹಚ್ಚಿಕೊಂಡ ನಂತರ ಸನ್‌ಸ್ಕ್ರೀನ್ ಬಳಸಬೇಕು.
#ದೇಹ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಿ:ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಅಧಿಕವಾಗಿರುವಂತೆ ನೋಡಿಕೊಳ್ಳುವುದು ಬಹಳ ಅಗತ್ಯ. ದೇಹದಲ್ಲಿನ ನೀರಿನಂಶ ಚರ್ಮದ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಸಾಧ್ಯವಾದಷ್ಟು ನೀರಿನಂಶ ಹೆಚ್ಚಿರುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಬೇಕು. ದಿನದಲ್ಲಿ ಕನಿಷ್ಠ 3 ರಿಂದ 4 ಲೀಟರ್ ನೀರು ಕುಡಿಯಬೇಕು.
#ಮುಖ ತೊಳೆಯುವುದು:ಬೇಸಿಗೆಯಲ್ಲಿ ಪದೇ ಪದೇ ಮುಖ ತೊಳೆಯಬೇಕು. ಇದರಲ್ಲಿ ಎಣ್ಣೆ ಚರ್ಮದವರಲ್ಲಿ ಎಣ್ಣೆಯಂಶ ಮುಖದಲ್ಲಿ ಎದ್ದು ಕಾಣುತ್ತದೆ. ಅಲ್ಲದೇ ದೂಳು ಎಣ್ಣೆಯೊಂದಿಗೆ ಸೇರಿ ಮೊಡವೆ, ಕಜ್ಜಿ ತುರಿಕೆಯಂತಹ ಸಮಸ್ಯೆಗೆ ಕಾರಣವಾಗಬಹುದು. ಒಣ ಚರ್ಮದ ಸಮಸ್ಯೆ ಇರುವವರು ಕಡಿಮೆ ನೊರೆ ಇರುವ, ಪಿಎಚ್ ಅಂಶ ಸಮತೋಲನದಲ್ಲಿರುವ ಫೇಸ್‌ವಾಶ್‌ದಿಂದ ಮುಖ ತೊಳೆಯಬೇಕು.