ಬಿಳಿ ಕೂದಲು ಬೆಳೆಯದಂತೆ ತಡೆಯಲು ಈ ಸಲಹೆ

ಶಿಸ್ತುಬದ್ಧ ಜೀವನಶೈಲಿ ಮತ್ತು ಆರೋಗ್ಯಕರ ಆಹಾರವನ್ನು ಅನುಸರಿಸಿದರೆ, ದೇಹದಲ್ಲಿ ನಿರ್ದಿಷ್ಟ ವಿಟಮಿನ್ ಕೊರತೆಯನ್ನು ನಿವಾರಿಸಿದರೆ ಕೂದಲು ಬೆಳ್ಳ ಗಾಗುವುದನ್ನು ತಡೆಯಬಹುದು.

ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಬೆಳೆಯುವುದು ಇಂದಿನ ದಿನಗಳಲ್ಲಿ ಸುಮಾರು 25 ರಿಂದ 30 ವರ್ಷ ವಯಸ್ಸಿನ ಯುವಕರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ಇದಕ್ಕೆ ಕಾರಣಗಳು ಅನೇಕ. ಅನುವಂಶಿಕ ಕಾರಣವೂ ಇದಕ್ಕೆ ಒಂದು. ಇದರ ಜೊತೆಗೆ ಹದಗೆಡುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಕೂಡಾ ಇದಕ್ಕೆ ಪ್ರಮುಖ ಕಾರಣ. ಕೂದಲು ಅಕಾಲಿಕವಾಗಿ ಬೂದು ಬಣ್ಣಕ್ಕೆ ಕಾರಣವಾಗುತ್ತವೆ. ಶಿಸ್ತುಬದ್ಧ ಜೀವನಶೈಲಿ ಮತ್ತು ಆರೋಗ್ಯಕರ ಆಹಾರವನ್ನು ಅನುಸರಿಸಿದರೆ, ದೇಹದಲ್ಲಿ ನಿರ್ದಿಷ್ಟ ವಿಟಮಿನ್ ಕೊರತೆಯನ್ನು ನಿವಾರಿಸಿದರೆ ಕೂದಲು ಬೆಳ್ಳ ಗಾಗುವುದನ್ನು ತಡೆಯಬಹುದು.

ವಿಟಮಿನ್ ಬಿ ಕೊರತೆ :ದೇಹದಲ್ಲಿ ವಿಟಮಿನ್ ಬಿ ಕೊರತೆಯಾದಾಗ ಅದರ ನೇರ ಪರಿಣಾಮವು ನಮ್ಮ ಕೂದಲಿನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ವಿಟಮಿನ್ ಬಿ ಇರುವ ಆಹಾರ ಸೇವಿಸದಿದ್ದರೆ ಚಿಕ್ಕ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು ಮಾತ್ರವಲ್ಲ, ಕೂದಲು ಉದುರುವ ಸಮಸ್ಯೆಯೂ ಎದುರಾಗುತ್ತದೆ. ವಿಟಮಿನ್ ಬಿ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ.

ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಬಿ ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ :ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬೆಳ್ಳಗಾಗಲು ಪ್ರಾರಂಭಿಸಿದ್ದರೆ, ತಕ್ಷಣ ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಬಿ, ವಿಟಮಿನ್ ಬಿ 6 ಮತ್ತು ವಿಟಮಿನ್ 12 ಸೇರಿಸಿ. ವಿಶೇಷವಾಗಿ ನೀವು ಡೈರಿ ಉತ್ಪನ್ನಗಳನ್ನು ಸೇವಿಸುವ ಮೂಲಕ ಈ ಪೋಷಕಾಂಶಗಳ ಅಗತ್ಯವನ್ನು ಪೂರೈಸಬಹುದು.

ವಿಟಮಿನ್ ಬಿ ಪಡೆಯಲು ಏನು ತಿನ್ನಬೇಕು?

ಮೊಟ್ಟೆ ಓಟ್ಸ್ ಹಾಲು ಚೀಸ್ಬ್ರೊಕೊಲಿ ಸಾಲ್ಮನ್ ಮೀನು ಚಿಕನ್ ಹಸಿರು ಎಲೆಗಳ ತರಕಾರಿಗಳು ಧಾನ್ಯಗಳು

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group