ಕೂದಲು ಒದ್ದೆಯಾಗಿದ್ದಾಗ ನಾವು ಮಾಡುವ ಕೆಲ ತಪ್ಪುಗಳು

ಒದ್ದೆಯಾಗಿದ್ದಾಗ ತುಂಬಾ ಕೂದಲು ದುರ್ಬಲವಾಗಿರುತ್ತದೆ. ಆ ಸಮಯದಲ್ಲಿ ನಾವು ಮಾಡುವ ಕೆಲ ತಪ್ಪುಗಳು ಕೂದಲಿನ ಹಾನಿಗೆ ಕಾರಣವಾಗಬಹುದು. ಇದರಿಂದ ಕೂದಲು ಉದುರುವುದು, ಸೀಳುವುದು, ತಲೆಹೊಟ್ಟು ಮುಂತಾದ ಸಮಸ್ಯೆಗಳು ಕಾಣಿಸಬಹುದು. ಹಾಗಾದರೆ ಆ ತಪ್ಪುಗಳು ಯಾವುವು?
#ಒದ್ದೆ ಕೂದಲನ್ನು ಬಾಚಣಿಕೆಯಿಂದ ಗಟ್ಟಿಯಾಗಿ ಬಾಚುವುದು, ಬ್ರಷ್‌ನಿಂದ ಗಟ್ಟಿಯಾಗಿ ತೀಡುವುದು ಮಾಡಬಾರದು. ಇದರಿಂದ ಕೂದಲು ಸೀಳುವುದು, ಉದುರುವುದು, ತುದಿ ಸೀಳುವಿಕೆ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಕೂದಲು ಒದ್ದೆಯಿದ್ದಾಗ ಬಾಚುವುದು ಅನಿವಾರ್ಯ ಎನ್ನಿಸಿದರೆ ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸಿ, ನಿಧಾನವಾಗಿ ಬಾಚಿ.
#ಒದ್ದೆ ಕೂದಲು ಒಣ ಕೂದಲಿಗಿಂತ ಸುಲಭವಾಗಿ ಉತ್ಪನ್ನಗಳನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ಕೂದಲು ಒದ್ದೆಯಿದ್ದಾಗ ಸೀರಮ್, ಕಂಡೀಷನರ್‌ನಂತಹ ಉತ್ಪನ್ನಗಳನ್ನು ಬಳಸದೇ ಇರುವುದು ಉತ್ತಮ. ಇದು ಕೂದಲಿನಲ್ಲಿ ಜಿಡ್ಡಿನ ಅಂಶ ಉಳಿಯುವಂತೆ ಮಾಡಬಹುದು. ಇದರಿಂದ ತುರಿಕೆ, ತಲೆಹೊಟ್ಟಿನಂತಹ ಸಮಸ್ಯೆ ಉಂಟಾಗಲು ಕಾರಣವಾಗಬಹುದು.
#ಹೇರ್ ಡ್ರೈಯರ್, ಸ್ಟ್ರೈಟ್‌ನರ್ ಹಾಗೂ ಗುಂಗುರು ಕೂದಲು ಮಾಡಿಕೊಳ್ಳುವ ಕರ್ಲಿಂಗ್ ಐರನ್‌ಗಳಂತ ಹೆಚ್ಚು ಉಷ್ಣಾಂಶವಿರುವ ಉಪಕರಣಗಳನ್ನು ಒದ್ದೆ ಕೂದಲಿಗೆ ಹಾನಿ ಮಾಡುತ್ತವೆ. ಯಾಕೆಂದರೆ ಇದು ಕೂದಲಿನಲ್ಲಿರುವ ನೀರು ಬಿಸಿಯಾಗುವಂತೆ ಮಾಡಬಹುದು, ಇದರಿಂದ ಕೂದಲು ಸೀಳುವುದು, ಸುಕ್ಕುಗಟ್ಟುವುದು ಮುಂತಾದ ಸಮಸ್ಯೆಗೆ ಕಾರಣವಾಗಬಹುದು. ಶೇ 80ರಷ್ಟು ಕೂದಲು ಒಣಗಿದ ಮೇಲೆ ಇಂತಹ ಸಾಧನಗಳನ್ನು ಬಳಸಿ
#ಕೂದಲು ಒದ್ದೆ ಇರುವು ಜುಟ್ಟು ಅಥವಾ ಜಡೆ ಹೆಣೆದುಕೊಳ್ಳುವುದು ಬಹಳ ದೊಡ್ಡ ತಪ್ಪು. ಪೋನಿಟೇಲ್‌ನಿಂದ ಬಿಗಿಯವುದು, ಹೇರ್‌ಬನ್ ಬಳಕೆ ಸಲ್ಲ. ಇದರಿಂದ ಕೂದಲು ಬುಡದಿಂದಲೇ ದುರ್ಬಲಗೊಂಡು ಉದುರಲು ಆರಂಭವಾಗಬಹುದು. ಬೇಕೆನಿಸಿದರೆ ಸಡಿಲವಾಗಿ ಜುಟ್ಟು ಹಾಕಿ.