ಹೃದಯ ಸಂಬಂಧಿ ಕಾಯಿಲೆಗೆ ಇವುಗಳನ್ನು ಸೇವಿಸಿ!

ಹೃದಯ ಸಂಬಂಧಿ ಕಾಯಿಲೆ ಇರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ವೇಗವಾಗಿ ಹೆಚ್ಚುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಲ್ಲಿ ಸಂಪೂರ್ಣ ಅರಿವಿನ ಕೊರತೆ ಇದಕ್ಕೆ ಪ್ರಮುಖ ಕಾರಣ. ಹೃದಯ ವೈಫಲ್ಯ ಹಲವು ಲಕ್ಷಣಗಳನ್ನು ತೋರಿಸುತ್ತದೆ. ಇವುಗಳ ಸೇವನೆಯು ಅವುಗನ್ನೆಲ್ಲಾ ತಡೆಯಲು ಸಹಕರಿಸುವುದು.

#ಬ್ರೊಕೊಲಿ: ಬ್ರೊಕೊಲಿಯನ್ನು ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಪೋಷಕಾಂಶಗಳು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ನಿವಾರಿಸುತ್ತದೆ. ಬ್ರೊಕೋಲಿ ತಿನ್ನುವುದರಿಂದ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ.

#ಬಾದಾಮಿಆಮ್ಲೀಯ ಹಿಮ್ಮುಖ ಹರಿವು ಎದೆನೋವಿಗೆ ಕಾರಣವಾಗಿದ್ದರೆ ಆಗ ಕೆಲವು ಬಾದಾಮಿ ತಿನ್ನಬಹುದು ಅಥವಾ ಒಂದು ಕಪ್ ಬಾದಾಮಿ ಹಾಲು ಕುಡಿದರೆ ಅದರಿಂದ ನೆರವಾಗುವುದು. ಇದನ್ನು ಸಾಬೀತು ಮಾಡಲು ವೈಜ್ಞಾನಿಕವಾಗಿ ಯಾವುದೇ ಸಾಕ್ಷ್ಯಗಳು ಇಲ್ಲ. ಆದರೆ ಹೆಚ್ಚಿನ ಜನರು ಇದನ್ನು ಬಳಸಿಕೊಂಡು ಅದು ಒಳ್ಳೆಯ ಪರಿಹಾರ ನೀಡಿದ ಕಾರಣದಿಂದಾಗಿ ಅದನ್ನು ಬೇರೆಯ ವರಿಗೂ ಹೇಳುತ್ತಿದ್ದಾರೆ. ಬಾದಾಮಿಯಲ್ಲಿ ಉನ್ನತ ಮಟ್ಟದ ಪೌಸ್ಟಿಕಾಂಶಗಳು ಇವೆ ಇದನ್ನು ಓದಿದ ಬಳಿಕ ಖಂಡಿತ ನೀವು ನೆನೆಸಿಟ್ಟ ಬಾದಾಮಿ ಸೇವಿಸುವಿರಿ! ಅದಾಗ್ಯೂ, ಕೆಲವೊಂದು ಅಧ್ಯಯಗಳು ಹೇಳುವಂತೆ ಬಾದಾಮಿ ಸೇವಿಸಿದರೆ ಅದರಿಂದ ಹೃದಯದ ಕಾಯಿಲೆ ನಿವಾರಿಸಬಹುದು. ಬಾದಾಮಿಯು ತಕ್ಷಣವೇ ನೋವನ್ನು ಕಡಿಮೆ ಮಾಡುವುದಿಲ್ಲ. ಆದರೆ ಇದು ಹೃದಯದ ಸಂಪೂರ್ಣ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

#ನೇರಳೆ ಹಣ್ಣು: ನೇರಳೆ ಹಣ್ಣುಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇವುಗಳನ್ನು ತಿನ್ನುವುದು ಹೃದ್ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ನೇರಳೆ ಹಣ್ಣುಗಳಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳ ಅಪಾಯವನ್ನು ತೆಗೆದುಹಾಕುತ್ತದೆ.

ಒಣಹಣ್ಣುಗಳು: ಒಣಹಣ್ಣುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವುಗಳಲ್ಲಿ ವಿಟಮಿನ್, ಖನಿಜಾಂಶಗಳು, ಆ್ಯಂಟಿ ಆಕ್ಸಿಡೆಂಟ್ ಗಳು ಮತ್ತು ಒಮೆಗಾ ಫ್ಯಾಟಿ ಆಸಿಡ್ ಗಳಿವೆ. ಬಾದಾಮಿ ಮತ್ತು ವಾಲ್ನಟ್ಸ್ ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಇವುಗಳ ಸಹಾಯದಿಂದ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳಬಹುದು.

#ಹೃದಯ ಅಥವಾ ಎದೆ ನೋವು ತುಂಬಾ ತೀವ್ರ, ಬಿಗಿ, ಉಸಿರುಕಟ್ಟಿದಂತೆ ಮತ್ತು ಅತಿಯಾಗಿದ್ದರೆ ಆಗ ತಕ್ಷಣವೇ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ.*ಹೃದಯಾಘಾತವೆಂಬ ಸಂಶಯವಿದ್ದರೆ ಆಗ ನೀವು ಪರೀಕ್ಷೆ ಮಾಡಿಸಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group