ಕಫ ಸಮಸ್ಯೆ ನಿವಾರಣೆ ಆಗಲು ಸಲಹೆ!

ಚಳಿಗಾಲದಲ್ಲಿ, ಶೀತ ಗಾಳಿ ಎದೆ ಮೇಲೆ ದಾಳಿ ಮಾಡುತ್ತವೆ. ಇದರಿಂದ ಶೀತ, ಕೆಮ್ಮು, ಉಸಿರಾಟದ ತೊಂದರೆ, ಕಫ, ಸೈನಸ್‌ನಂತಹ ಸಮಸ್ಯೆಗಳು ಕಾಡಬಹುದು. ಅಮೆರಿಕದ ವೈದ್ಯರು ಇದನ್ನು ನಿವಾರಿಸಲು ಮನೆಮದ್ದೊಂದರ ಬಗ್ಗೆ ಮಾಹಿತಿ ನೀಡಿದ್ದಾರೆ. ಅದನ್ನ ಬಳಸಿದ್ರೆ ನೀವೂ ಕೂಡ ಸುಲಭವಾಗಿ ಕಫದ ಸಮಸ್ಯೆಯನ್ನು ನಿವಾರಿಸಬಹುದು.
#ನಿಂಬೆ, ಕಲ್ಲು ಸಕ್ಕರೆ ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.
#ನಿರಂತರ ಕಫದ ಸಮಸ್ಯೆ ಕಾಡುತ್ತಿದ್ದರೆ ನಿಂಬೆ ಹಣ್ಣಿನ ರಸಕ್ಕೆ ಕಪ್ಪು ಉಪ್ಪು ಅಥವಾ ಸೈಂಧವ ಉಪ್ಪು ಸೇರಿಸಿ. ಅದರೊಂದಿಗೆ ಕರಿಮೆಣಸಿನ ಪುಡಿ ಮಿಶ್ರಣ ಮಾಡಿ ಆ ರಸವನ್ನು ಸೇವಿಸಿದ್ರೆ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.
#ಜೇನು ಮತ್ತು ನಿಂಬೆರಸದೊಂದಿಗೆ ದಾಲ್ಚಿನಿಯನ್ನು ಸೇರಿಸಿ ಸೇವಿಸಿದರೂ ನೆಗಡಿ ಮತ್ತು ಕಫದ ಸಮಸ್ಯೆ ದೂರವಾಗುತ್ತದೆ
#ಕಫ ಕರಗಲು ಹಸಿ ಶುಂಠಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ 3 – 4 ಬಾರಿ ಸೇವಿಸಿ. ಇದರಿಂದ ಶೀಘ್ರದ ಕಫ ಕರಗುವುದು
#ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಮತ್ತು ಬೆಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಬಿಸಿ ಆರುವ ಮುನ್ನವೇ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.