ಈ ತರಕಾರಿಗಳನ್ನು ಹಸಿ ಹಸಿ ತಿಂದರೆ ಪೋಷಕಾಂಶಗಳು ಬೇಕಾದಷ್ಟು ಸಿಗುತ್ತವೆ!

ಬೇಯಿಸಿದ ತರಕಾರಿ ಖಂಡಿತಾ ಆರೋಗ್ಯಕ್ಕೆ ಹಿತಕರ. ಆದರೆ, ನಿಮ್ಮ ತರಕಾರಿಗಳನ್ನು ಹಸಿ ಹಸಿ ತಿಂದು ಮುಗಿಸಬೇಕು. ಯಾಕೆ ಗೊತ್ತಾ. ಹಸಿ ತಿನ್ನುವುದರಿಂದ ವಿಶೇಷ ಪೋಷಕಾಂಶಗಳು ಸಿಗುತ್ತವೆ. ತರಕಾರಿಗಳನ್ನು ಬೇಯಿಸಿ, ತಿನ್ನಬೇಕೆಂದೇನೂ ಇಲ್ಲ. ಕೆಲವು ತರಕಾರಿಗಳನ್ನು ಹಸಿ ಹಸಿ ತಿಂದರೆ ಅದರಲ್ಲಿ ಪೋಷಕಾಂಶಗಳು ಬೇಕಾದಷ್ಟು ಸಿಗುತ್ತವೆ ಅಂತಹ ಕೆಲವು ಪ್ರಯೋಜನಗಳ ಪಟ್ಟಿ ಇಲ್ಲಿ ನೀಡಿದೆ!
#ಬ್ರೊಕೋಲಿ: ಈ ತರಕಾರಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಷಿಯಮ್ ಮತ್ತು ಪ್ರೋಟೀನ್ ಸಮೃದ್ಧವಾಗಿರುವುದಲ್ಲದೆ ಸಲ್ಫೋರಾಫೆನ್ ಕೂಡ ಇದೆ. ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವ, ರಕ್ತದೊತ್ತಡವನ್ನು ಕಡಿಮೆ ಮಾಡುವ, ಹೃದಯದ ಆರೋಗ್ಯವನ್ನು ಸುಧಾರಿಸುವ ಮತ್ತು ವಯಸ್ಸಾಗುವಿಕೆ ಮತ್ತು ರೋಗ ನಿರೋಧಕ ಶಕ್ತಿಗೆ ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಒದಗಿಸುವ ಸಂಯುಕ್ತವಾಗಿದೆ. ಯಾರು ಬೇಕಾದರೂ ಅದನ್ನು ತಮ್ಮ ಸಲಾಡ್ ಅಥವಾ ಬಿಸಿ ಸೂಪ್‌ನಲ್ಲಿ ಸೇರಿಸಬಹುದು. ಉಗುರು ಬೆಚ್ಚಗಿನ ನೀರಿನಲ್ಲಿ ಇದನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಹಸಿಯಾಗಿ ತಿನ್ನಬಹುದು.
#ಕೆಂಪು ಮೆಣಸು:ಮೆಣಸಿನಲ್ಲಿ (ಕೆಂಪು ಮೆಣಸಿನಕಾಯಿ) ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಬಿ 16, ಇದು ಕೂಡ ಉತ್ತಮವಾಗಿರುತ್ತದೆ. ಮೆಣಸು ಹಸಿ ತಿಂದರೆ ಸಿ ದಂಡಿಯಾಗಿ ಸಿಗುತ್ತದೆ. ಬೇಯಿಸಿದರೆ ಅದರ ವಿಟಮಿನ್ಗಳು ನಷ್ಟವಾಗುತ್ತದೆ.
#ಹಸಿರು ತರಕಾರಿಗಳನ್ನು ಕುದಿಸಿ ಅಥವಾ ಕೆಲವು ಮಸಾಲೆಗಳೊಂದಿಗೆ ಬೇಯಿಸಿ ಸೇವಿಸಬೇಕು. ಅಡುಗೆ ಮಾಡುವುದರಿಂದ ಪೋಷಕಾಂಶಗಳು ಕಡಿಮೆಯಾಗಬಹುದು ಎಂದು ಕೆಲವರು ತಿಳಿಯುತ್ತಾರೆ. ಆದರೆ ನೀವು ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅವು ನಿಮ್ಮ ವ್ಯವಸ್ಥೆಗೆ ಯಾವುದೇ ಪ್ರಯೋಜನವಿಲ್ಲ.ನಿಮ್ಮ ಬೇಳೆ ಕಾಳು, ಸೂಪ್, ಧಾನ್ಯಗಳು ಅಥವಾ ಇತರ ತರಕಾರಿಗಳೊಂದಿಗೆ ನೀವು ಎಲೆಗಳ ತರಕಾರಿಗಳನ್ನು ಬೇಯಿಸಬಹುದು. ತರಕಾರಿಗಳನ್ನು ಅಲ್ಯೂಮಿನಿಯಂ ಅಥವಾ ತಾಮ್ರದ ಪಾತ್ರೆಗಳಲ್ಲಿ ಬೇಯಿಸಬಾರದು.
#ಬೆಳ್ಳುಳ್ಳಿ. ಬೆಳ್ಳುಳ್ಳಿಯ ಪ್ರಯೋಜನದ ( ಬೆಳ್ಳುಳ್ಳಿಯ ಪ್ರಯೋಜನಗಳು ) ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬೆಳ್ಳುಳ್ಳಿಯನ್ನು ಹಸಿ ತಿನ್ನಬೇಕಂತೆ, ಬೆಳ್ಳುಳ್ಳಿಯಲ್ಲಿ ಕ್ಯಾಲ್ಸಿಯಂ, ಮ್ಯಾಂಗನೀಸ್, ಜರ್ಮೇನಿಯಂ, ಸೆಲೆನಿಯಂ ಮೊದಲಾದ ಪೋಷಕಾಂಶಗಳಿರುತ್ತವೆ. ಇವು ನಮ್ಮ ಆರೋಗ್ಯಕ್ಕೆ (ಬೆಳ್ಳುಳ್ಳಿ ಪ್ರಯೋಜನಗಳು) ತುಂಬಾ ಒಳ್ಳೆಯದು.