ಕಡಲೆ ಕಾಳಿನಲ್ಲಿದೆ ಈ ಆರೋಗ್ಯದಾಯಕ ಪ್ರಯೋಜನಗಳು!

:ಕಡಲೆ ಕಾಳುಗಳಲ್ಲಿ ಪ್ರೋಟೀನ್ ಅಂಶಗಳು ವಿಟಮಿನ್ ‘ ಸಿ ‘, ವಿಟಮಿನ್ ‘ ಬಿ6’, ಫೋಲೇಟ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ ಮತ್ತು ಮೆಗ್ನೀಸಿಯಮ್ ಪೋಷಕಾಂಶಗಳು ಸಮೃದ್ಧವಾಗಿದೆ. ಕಡಲೆಕಾಳುನ್ನು ಪ್ರತಿ ಸಾಂಬಾರಿಗೂ ರುಚಿ ಹಾಗೂ ಸ್ವಾದಿಷ್ಟವಾಗಿರುತ್ತದೆ. ಈ ಕಾಳಿನಿಂದ ಆರೋಗ್ಯಕ್ಕೆ ಯಾವೆಲ್ಲಾ ರೀತಿಯಲ್ಲಿ ಪ್ರಯೋಜನ ಇದೆ ತಿಳಿಯೋಣ.

#ತೂಕ ಇಳಿಕೆ: ಕಡಲೆ ಕಾಳಿನಲ್ಲಿ ಸಾಕಷ್ಟು ಪ್ರೊಟೀನ್ ಮತ್ತು ಫೈಬರ್ ಸಮೃದ್ದವಾಗಿರುವುದರಿಂದ ತೂಕ ಇಳಿಕೆಗೆ ಸಹಕಾರಿ ಹಾಗೂ ಆರೋಗ್ಯಕರ ಆಹಾರ ಕ್ರಮದಲ್ಲಿ ಸೂಕ್ತವಾಗಿದೆ. . ಪ್ರೊಟೀನ್ ಮತ್ತು ಫೈಬರ್ ಹಸಿವನ್ನು ನಿಯಂತ್ರಿಸುವ ಮೂಲಕ ತೂಕ ನಿಯಂತ್ರಣದಲ್ಲಿ ಇಡಲು ಉಪಯುಕ್ತವಾಗಿದೆ.

#ಮಧುಮೇಹ ನಿಯಂತ್ರಣ:ಕಡಲೆ ಕಾಳು ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ.ಕಡಲೆ ಕಾಳಿನಲ್ಲಿರುವ ಫೈಬರ್ , ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದ ಲಿಪಿಡ್ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸುವುದರ ಜೊತೆಗೆ , ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಅಧಿಕ ಫೈಬರ್ ಉಳ್ಳ ಆಹಾರ ಸೇವಿಸುವುದರಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

#ಸ್ನಾಯುಗಳ ಬಲ:ಕಡಲೆ ಕಾಳು ಮೂಳೆಗಳ ಬೆಳವಣಿಗೆ ಪ್ರಯೋಜನಕಾರಿಯಾಗಿದೆ. ಅದರಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಶಿಯಂ, ಪ್ರಾಸ್ಫರಸ್ ಮತ್ತು ವಿಟಮಿನ್ ಕೆ ಸೇರಿದಂತೆ ಹಲವಾರು ವಿಟಮಿನ್ ಇದರಲ್ಲಿ ಸಮೃದ್ಧವಾಗಿದೆ. 4. ಹೃದಯದ ಆರೋಗ್ಯಅಧ್ಯಯನ ವರದಿಯ ಪ್ರಕಾರ ಕಡಲೆ ಕಾಳಿನ ಬಳಕೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹತೋಟಿಯಲ್ಲಿರುತ್ತದೆ. ಅಧಿಕ ಕೊಲೆಸ್ಟ್ರಾಲ್‍ ಅಂಶವು ಹೃದಯ ಸಂಬಂಧಿ ಖಾಯಿಲೆಯಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಕಡಲೆ ಕಾಳು ಸೇವನೆ ಹೃದಯದ ಆರೋಗ್ಯ ಸುಧಾರಿಸುತ್ತದೆ.

#ನೀವು ಒಂದು ವೇಳೆ ನಿಮ್ಮ ದೇಹದ ಗ್ಲೈಸೆಮಿಕ್ ಸೂಚ್ಯಂಕವನ್ನು ಅಂದರೆ ಮಧುಮೇಹವನ್ನು ಸರಿಯಾಗಿ ನಿಯಂತ್ರಣ ಮಾಡಿಕೊಳ್ಳಬೇಕು, ನಿಮ್ಮ ದೇಹದ ಜೀರ್ಣ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಅಂದುಕೊಂಡರೆ, ನಾರಿನ ಅಂಶ ಹೆಚ್ಚಾಗಿರುವ ಕಪ್ಪು ಕಡಲೆಕಾಳು ಸೇವನೆಗೆ ಮುಂದಾಗಬಹುದು.ಏಕೆಂದರೆ ಇದರಲ್ಲಿ ಕರಗುವ ನಾರಿನ ಅಂಶ ಹೆಚ್ಚಾಗಿರುವುದರಿಂದ, ನಿಮ್ಮ ದೇಹದ ಭಾರತದಲ್ಲಿ ಕಂಡುಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಬಲ್ಲದು. ಜೊತೆಗೆ ದೇಹದಲ್ಲಿ ಅಗತ್ಯವಾಗಿ ಬೇಕಾದ ಒಳ್ಳೆಯ ಪ್ರಮಾಣದ ಉತ್ತಮ ಕೊಲೆಸ್ಟ್ರಾಲ್ ಅಂಶವನ್ನು ನಿರ್ವಹಣೆ ಮಾಡಬಲ್ಲದು.

#ಮಲಬದ್ಧತೆ ಸಮಸ್ಯೆ ದೂರ : ಇದರಲ್ಲಿನ ಪೊಟ್ಯಾಶಿಯಂ, ಮೇಗ್ನೀಶಿಯಂ ಅಂಶಗಳು ರಕ್ತದ ಒತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ, ಅಲ್ಲದೆ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಆಗಾಗ್ಗೆ ಕಡಲೆ ಕಾಳು ಸೇವಿಸಿದರೆ ಆ ಸಮಸ್ಯೆಯಿಂದ ಬೇಗ ಹೊರ ಬರಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group