ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಮುನ್ನ ಇದನ್ನು ಓದಿ!

ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಹಾ ಉತ್ಪಾದಕ ರಾಷ್ಟ್ರವಾಗಿದೆ. ಬ್ರಿಟಿಷ್ ವೈದ್ಯ ಆರ್ಥರ್ ಕ್ಯಾಂಪ್ಬೆಲ್ 1841 ರಲ್ಲಿ ಮೊದಲ ಚಹಾ ಸಸ್ಯವನ್ನು ಬೆಳೆಸಿದರು. ಟೀ ಇಲ್ಲದೇ ಎಷ್ಟೋ ಜನರು ತಮ್ಮ ದಿನವನ್ನು ಪ್ರಾರಂಭಿಸುವುದಿಲ್ಲ. ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಅನಾರೋಗ್ಯಗಳು ಕಾಡುತ್ತವೆ.
ಚಾಯ್ (ಚಹಾ) ಭಾರತದಲ್ಲಿ ಕೇವಲ ಪಾನೀಯವಲ್ಲ, ಅದು ಇಲ್ಲಿನ ಜನರ ಭಾವನೆಯಾಗಿದೆ. ಟೀ ಇಲ್ಲದೇ ಎಷ್ಟೋ ಜನರು ತಮ್ಮ ದಿನವನ್ನು ಪ್ರಾರಂಭಿಸುವುದಿಲ್ಲ. ಕೆಲವರಂತೂ ದಿನಕ್ಕೆ ಎಷ್ಟು ಬಾರಿ ಟೀ ಕುಡಿಯುತ್ತಾರೆಯೋ ಲೆಕ್ಕವೇ ಇಲ್ಲ. ಆದರೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದಲ್ಲ. ಇದಕ್ಕೆ ಕಾರಣಗಳನ್ನು ನಾವು ಪಟ್ಟಿ ಮಾಡಿದ್ದೇವೆ.
#ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಹೊಟ್ಟೆ ಉರಿ ಅಥವಾ ಎದೆಯುರಿ ಬರುವ ಸಾಧ್ಯತೆಯಿದೆ. ನೀವು ಜೀರ್ಣಕಾರಿ ಸಮಸ್ಯೆಗಳಿಗೆ ಗುರಿಯಾಗಿದ್ದರೆ, ನೀವು ಏನನ್ನಾದರೂ ತಿನ್ನುವವರೆಗೆ ಬೆಳಿಗ್ಗೆ ಚಹಾ ಕುಡಿಯುವುದನ್ನು ತಪ್ಪಿಸಬಹುದು.
#ಚಹಾದಲ್ಲಿನ ಕೆಲವು ಸಂಯುಕ್ತಗಳು ದೇಹವು ಕಬ್ಬಿಣದ ಅಂಶಗಳನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ. ನೀವು ಕಡಿಮೆ ಕಬ್ಬಿಣದ ಮಟ್ಟವನ್ನು ಹೊಂದಿದ್ದರೆ, ರಕ್ತಹೀನತೆಯಿಂದ ಬಳಲುತ್ತಿದ್ದರೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬೇಡಿ.
#ನಿರ್ಜಲೀಕರಣ: ಚಹಾವು ಹೆಚ್ಚಾಗಿ ನೀರಿನಿಂದ ಕೂಡಿದ್ದರೂ, ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ತಂದೊಡ್ಡುತ್ತದೆ.
#ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚಿಸುವುದು:ಖಾಲಿ ಹೊಟ್ಟೆಯಲ್ಲಿ ಅತಿಯಾಗಿ ಚಹಾ ಸೇವನೆ ಮಾಡಿದರೆ ಅದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಹೆಚ್ಚಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ. ದಿನಕ್ಕೆ ಏಳು ಅಥವಾ ಅದಕ್ಕಿಂತ ಹೆಚ್ಚು ಟೀ ಸೇವಿಸುವವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯವು ಶೇ.50ರದಷ್ಟು ಹೆಚ್ಚಾಗಿರುವುದು. ದಿನಕ್ಕೆ0-3 ಕಪ್ ಚಹಾಕುಡಿಯುವವರಲ್ಲಿ ಇದರ ಅಪಾಯ ತುಂಬಾ ಕಡಿಮೆ ಇದೆ. ದಿನಕ್ಕೆ4-6 ಕಪ್ ಚಹಾಕುಡಿಯುವವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಹೆಚ್ಚು ಎಂದು ಅಧ್ಯಯನಗಳು ಹೇಳಿವೆ.