ಬೀಟ್ರೂಟ್ ಜ್ಯೂಸ್ ನಿಮ್ಮ ಆರೋಗ್ಯವನ್ನು ವೃದ್ಧಿಸಲು ಸಹಕಾರಿ!

ಬೀಟ್ರೂಟ್ ದೈಹಿಕ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಹೆಚ್ಚು ಚುರುಕಾದ ಚಲನೆಗೆ ಸಹಾಯ ಮಾಡುತ್ತದೆ. ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಪ್ರಿಫ್ರಂಟಲ್ ಕಾರ್ಟೆಕ್ಸ್ನಲ್ಲಿ ರಕ್ತದ ಹರಿವು ಸುಧಾರಿಸುತ್ತದೆ, ಇದರಿಂದಾಗಿ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ.
#ಬೀಟ್ರೂಟ್ ಜ್ಯೂಸ್ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಈ ಜ್ಯೂಸ್ ಸೇವಿಸುವ ಜನರು ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂಬುದು ಸಾಬೀತಾಗಿದೆ. ಜ್ಯೂಸ್‌ನಲ್ಲಿರುವ ಸಂಯುಕ್ತಗಳು ರಕ್ತದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತವೆ ಮತ್ತು ರಕ್ತನಾಳಗಳನ್ನು ವಿಸ್ತರಿಸಲು ಮತ್ತು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತವೆ.
#ಕ್ಯಾನ್ಸರ್ ತಡೆಗಟ್ಟಬಹುದು:ನೀರಿನಲ್ಲಿ ಕರಗುವ ಆ್ಯಂಟಿ ಆಕ್ಸಿಡೆಂಟ್ಗಳು ಬೀಟಾಲೈನ್‌ಗಳಿಂದ ಬಣ್ಣವನ್ನು ಪಡೆಯುತ್ತವೆ. 2016 ರ ಅಧ್ಯಯನದ ಪ್ರಕಾರ, ಬೀಟಾಲೈನ್‌ಗಳು ಕೆಲವು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ. ಬೆಟಾಲೈನ್‌ಗಳನ್ನು ಸ್ವತಂತ್ರ ರಾಡಿಕಲ್ ಸ್ಕ್ಯಾವೆಂಜರ್‌ಗಳಾಗಿದ್ದು, ಗೆಡ್ಡೆಗಳ ನಾಶಕ್ಕೆ ಸಹಕಾರಿಯಾಗಿದೆ.
#ಪ್ರತೀ ನಿತ್ಯ ಒಂದು ಲೋಟ ಬೀಟ್ ರೂಟ್ ಜ್ಯೂಸ್ ಕುಡಿದರೆ ಅದರಿಂದ ತ್ರಾಣ ಹೆಚ್ಚಾಗುತ್ತದೆ. ನೈಟ್ರೇಟ್ ಅಂಶವು ನೈಟ್ರೇಟ್ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳೂವ ಮೂಲಕ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ ವೇಳೆ ಆಮ್ಲಜನಕದ ಸರಬರಾಜು ಹೆಚ್ಚಿಸುವುದು ಮತ್ತು ಆಯಾಸ ಕಡಿಮೆ ಮಾಡುವುದು. ಜ್ಯೂಶ್ ನ್ನು ನಿಯಮಿತವಾಗಿ ಕುಡಿದರೆ ಅದರಿಂದ ದೈಹಿಕವಾಗಿ ಶಕ್ತಿ ಬರುವುದು.
#ಬೀಟ್ ರೂಟ್ ನಲ್ಲಿ ಇರುವಂತಹ ಬೀಟೈನ್ ಎನ್ನುವ ಅಂಶವು ಯಕೃತ್ ಅದ್ಭುತವಾಗಿ ಕೆಲಸ ಮಾಡುವಂತೆ ಮಾಡುವುದು. ದೇಹದಲ್ಲಿ ಯಕೃತ್ ಶುದ್ಧೀಕರಿಸುವ ಗುಣ ಹೊಂದಿರುವ ಕಾರಣದಿಂದಾಗಿ ಇದು ವಿಷಕಾರಿ ಅಂಶವನ್ನು ಕಡಿಮೆ ಮಾಡುವುದು.ಯಕೃತ್ ನ ಶುದ್ದೀಕರಣವು ಸರಿಯಾಗಿ ಇಲ್ಲದೆ ಇದ್ದರೆ ಅದರಿಂದ ಕಾಯಿಲೆಗಳು ಬರುವುದು. ಇಂತಹ ಸಮಯದಲ್ಲಿ ಬೀಟ್ ರೂಟ್ ಜ್ಯೂಸ್ ಪರಿಣಾಮಕಾರಿ ಆಗಿರುತ್ತದೆ. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್, ವಿಟಮಿನ್ ಬಿ, ಕ್ಯಾಲ್ಸಿಯಂ, ಕಬ್ಬಿನಾಂಶ ಮತ್ತು ಬೀಟೈನ್ ದೇಹಕ್ಕೆ ತುಂಬಾ ಒಳ್ಳೆಯದು.