ಪುದೀನಾ ಎಲೆಯ ಬಳಕೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು!

ಆರೋಗ್ಯ ಹಾಳಾದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಮೊದಲೇ ಆರೋಗ್ಯಕರವಾದ ಆಹಾರ ಪದ್ಧತಿ ಹಾಗೂ ಹವ್ಯಾಸಗಳನ್ನು ರೂಢಿಸಿಕೊಂಡರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಇಲ್ಲವೇ ಅನಾರೋಗ್ಯದಿಂದ ದೂರ ಇರಬಹುದು. ಅದರಲ್ಲೂ ಕೆಲವು ಗಿಡಮೂಲಿಕೆಗಳು, ಔಷಧೀಯ ಗುಣವನ್ನು ಹೊಂದಿರುವ ತರಕಾರಿಗಳು, ಸೊಪ್ಪುಗಳು ಮತ್ತು ಹಣ್ಣುಗಳು ಅದ್ಭುತ ರೀತಿಯಲ್ಲಿ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸುತ್ತವೆ. ಅಂತಹ ಒಂದು ಉತ್ಪನ್ನ ಅಥವಾ ಘಟಕಗಳನ್ನು ನಿತ್ಯ ಬಳಕೆ ಮಾಡುವುದು ಅಥವಾ ಅವುಗಳಿಂದ ತಯಾರಿಸಿದ ಉತ್ಪನ್ನ ಅಥವಾ ಆಹಾರಗಳನ್ನು ಬಳಸುವುದರಿಂದ ಅದ್ಭುತ ರೀತಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಂತಹ ಒಂದು ವಿಶೇಷ ಔಷಧೀಯ ಗುಣವನ್ನು ಹೊಂದಿರುವ ತರಕಾರಿ ಹಾಗೂ ಗಿಡಮೂಲಿಕೆ ಎಂದರೆ ಪುದೀನ ಸೊಪ್ಪು.

#ಸೌತೆಕಾಯಿಯಂತೆ, ಪುದೀನಾವನ್ನು ಚರ್ಮವನ್ನು ಕಾಂತಿಯನ್ನು ಹೆಚ್ಚಿಸಲು ಸಹ ಬಳಸಲಾಗುತ್ತದೆ. ಪುದೀನಾ ಎಲೆಗಳ ರಸವನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮಕ್ಕೆ ತಾಜಾತನ ಮತ್ತು ತೇವಾಂಶ ಸಿಗುತ್ತದೆ. ಅಲ್ಲದೆ, ಪುದೀನಾ ಎಲೆಗಳ ರಸವನ್ನು ಮೊಸರು ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ತ್ವಚ್ಛೆಯ ಕ್ರೀಮ್​ ಆಗಿ ಬಳಸಬಹುದು.

#ವಿಪರೀತ ಕೆಮ್ಮಿನಿಂದ ಉಸಿರಾಡುವುದೇ ಕಷ್ಟದಿಂದ ಸ್ಟೀಮ್ ಮಾಡಲಾಗಿದೆ. ಆಗ ನೀರಿಗೆ ನಾಲ್ಕಾರು ಪುದೀನಾ ಸೊಪ್ಪುಗಳನ್ನು ಹಾಕಿ ಗಾಳಿಯನ್ನು ಒಳತೆಗೆದುಕೊಳ್ಳಿ. ಇದರಿಂದ ನಿಮ್ಮ ಗಂಟಲಿನ ಮತ್ತು ಸಿಂಬಳದ ಸಮಸ್ಯೆ ದೂರವಾಗುತ್ತದೆ.

#ಪುದೀನಾ ರಸಕ್ಕೆ ಅರಸಿಣ ಕಲಸಿ ಮೈಗೆ ಲೇಪನ ಮಾಡಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ನವೆ, ಉರಿ ಇನ್ನು ಮುಂತಾದ ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತವೆ. ದೇಹದಲ್ಲಿನ ಉಷ್ಣ ಕಡಿಮೆಯಾಗುತ್ತದೆ.

#ಪುದೀನದಲ್ಲಿರುವ ವಿಟಮಿನ್ ಸಿ, ಡಿ, ಇ ಮತ್ತು ಬಿ ಹಾಗೂ ಕ್ಯಾಲ್ಸಿಯಂ ಮತ್ತು ರಂಜಕವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಪ್ರತಿದಿನ ಪುದೀನ ಎಲೆಗಳ ಚಹಾ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸಬಹುದು.ಚರ್ಮದಲ್ಲಿ ತುರಿಕೆ ಸಮಸ್ಯೆ ಇದ್ದಾಗ, ಪುದೀನ ಎಲೆಗಳನ್ನು ತೊಳೆದು ತುರಿಕೆ ಇರುವ ಜಾಗದಲ್ಲಿ ಉಜ್ಜುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.ಕುದಿಯುತ್ತಿರುವ ನೀರಿಗೆ ಪುದೀನ ಎಲೆಗಳನ್ನು ಹಾಕಿ, ಸ್ವಲ್ಪ ಉಪ್ಪು ಬೆರೆಸಿ ಕಷಾಯ ತಯಾರಿಸಿ ಸೇವಿಸಿದರೆ ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group