ಅತಿಯಾದ ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ಈ ಸಮಸ್ಯೆಗಳೂ ಕಾಡುತ್ತವೆ!

ಎಲ್ಲಾ ಕಾಲದಲ್ಲೂ ಎಲ್ಲಾ ಕಡೆ ಸುಲಭವಾಗಿ ಸಿಗುವ ಹಣ್ಣು ಎಂದರೆ ಅದು ಪರಂಗಿ ಹಣ್ಣು ಅಥವಾ ಪಪ್ಪಾಯಿ ಹಣ್ಣು ಎಂದು ಹೇಳಬಹುದು. ಪರಂಗಿ ಹಣ್ಣು ಕಣ್ಣುಗಳಿಗೆ ಒಳ್ಳೆಯದು, ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ, ಮುಖದ ಕಾಂತಿಗೆ ಇದರ ಪ್ರಭಾವ ತುಂಬಾ ಆರೋಗ್ಯಕರವಾಗಿರುತ್ತದೆ ಎಂದು ಹಲವರು ಹೇಳಿದ್ದುಂಟು. ಆದರೆ ಇದರ ಅತಿಯಾದ ಸೇವನೆಯು ಈ ಸಂಕಷ್ಟಗಳನ್ನೂ ತಂಡಿಡಬಹುದು
ಅದೇನೆಂದರೆ ಪರಂಗಿ ಹಣ್ಣು ಯಥೇಚ್ಛವಾಗಿ ಅಥವಾ ನಿತ್ಯ ನಿರಂತರವಾಗಿ ಸೇವನೆ ಮಾಡುತ್ತಾ ಬಂದರೆ ಕೆಲವೊಂದು ಆರೋಗ್ಯದ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇರುತ್ತದೆ.
#ಇದು ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬು ಒಡೆಯಲು ಕೆಲಸಕ್ಕೆ ಸಹಾಯ ಮಾಡುತ್ತದೆ. ಆದರೆ ಇದರ ಅತಿಯಾದ ತಿಂದರೆ ಗಂಟಲಿನ ಆಹಾರ ಪೈಪ್ ಗೆ ಹಾನಿ ಮಾಡುತ್ತದೆ.
#ಪರಂಗಿ ಹಣ್ಣಿನಲ್ಲಿ (Papaya) ನಾರಿನ ಪ್ರಮಾಣವು ತುಂಬಾ ಹೆಚ್ಚಾಗಿದ್ದರೂ, ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಇದನ್ನು ರಾಮಬಾಣವೆಂದು ಪರಿಗಣಿಸಲಾಗುತ್ತದೆ, ಆದರೆ ಹೆಚ್ಚು ಪಪ್ಪಾಯ ಸೇವನೆಯಿಂದ ಹೊಟ್ಟೆ ಉಬ್ಬರ ಮತ್ತು ಅತಿಸಾರ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ಪಪ್ಪಾಯದಲ್ಲಿ ಲ್ಯಾಟೆಕ್ಸ್ ಕೂಡ ಇರುವುದರಿಂದ ಹೊಟ್ಟೆ ನೋವು ಮತ್ತು ಸೆಳೆತದ ಸಮಸ್ಯೆಯೂ ಉಂಟಾಗಬಹುದು.
#ಗರ್ಭಿಣಿ ಮಹಿಳೆಯರು ಪರಂಗಿ ಹೆಣ್ಣಿನಿಂದ ಸ್ವಲ್ಪ ದೂರವಿದ್ದರೆ ಒಳ್ಳೆಯದು. ಏಕೆಂದರೆ ಪರಂಗಿ ಹಣ್ಣಿನ ಬೀಜಗಳಲ್ಲಿ ಮತ್ತು ಪರಂಗಿ ಮರದ ಬೇರುಗಳಲ್ಲಿ ಗರ್ಭಾಶಯದ ಕುಗ್ಗಿಸುವಿಕೆಗೆ ಕಾರಣ ಆಗುವ ಅಂಶಗಳಿವೆ.ಹೀಗಾಗಿ ಗರ್ಭಪಾತ ಆಗುವ ಸಂಭವ ಹೆಚ್ಚಿರುತ್ತದೆ. ಆದ್ದರಿಂದ ಗರ್ಭಿಣಿ ಮಹಿಳೆಯರು ಈ ವಿಚಾರದಲ್ಲಿ ಎಚ್ಚರವಾಗಿ ಇರುವುದು ಒಳ್ಳೆಯದು.
#ವರದಿ ಪ್ರಕಾರ ಪಪ್ಪಾಯಿ ಮಧುಮೇಹ ವಿರೋಧಿ ಗುಣ ಹೊಂದಿದೆ. ಇದು ರಕ್ತದ ಹೆಚ್ಚಿದ ಸಕ್ಕರೆ ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದನ್ನು ಮಧುಮೇಹ ಔಷಧ ಜೊತೆ ತಿಂದರೆ ಕಡಿಮೆ ರಕ್ತದ ಸಕ್ಕರೆ ಸಮಸ್ಯೆಯ ಅಪಾಯ ಉಂಟಾಗುತ್ತದೆ.