ಜೀರಿಗೆ ಸೇವನೆಯು ರೋಗನಿರೋಧಕ ಶಕ್ತಿ ಹೆಚ್ಚಿಸುವುದು!

ಜೀರಿಗೆಯಲ್ಲಿ ಪೊಟ್ಯಾಷಿಯಂ ಮತ್ತು ಕಬ್ಬಿಣ ಅಂಶಗಳಿಂದ ಸಮೃದ್ಧವಾಗಿದೆ. ಜತೆಗೆ ಉತ್ಕರ್ಷಣ ನಿರೋಧಕ ಶಕ್ತಿಗಳನ್ನು ಹೊಂದಿದೆ. ನಮ್ಮ ದೇಹದಲ್ಲಿರುವ ಬೇಡದ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುತ್ತದೆ. ಮೆಗ್ನೀಶಿಯಂ, ಕ್ಯಾಲ್ಸಿಯಂ ಮತ್ತು ವಿಟಮಿನ್ ಎ, ಬಿ ಮತ್ತು ಸಿ ಇದ್ದು, ಸೋಂಕುಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ.
#ಅರ್ಧ ಚಮಚ ಜೀರಿಗೆಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆರಿಸಿ. ಪ್ರತಿನಿತ್ಯ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ.
##ಜೀರಿಗೆ ಕಷಾಯವು ಶೀತ ಮತ್ತು ಕೆಮ್ಮು ಹಾಗೂ ನಿರ್ವಿಶೀಕರಣ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಜೀರಿಗೆಯು ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರಿಗೆಯಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಮೈಕ್ರೋಬಿಯಲ್ ಮತ್ತು ಆ್ಯಂಟಿ ಇಂಫ್ಲಮೇಟರಿ ಗುಣವಿದೆ. ಜೀರಿಗೆಯು ಕಡಿಮೆ ಕೊಬ್ಬು, ಸೋಡಿಯಂ ಮತ್ತು ಕಡಿಮೆ ಕೊಲೆಸ್ಟ್ರಾಲ್ ಹೊಂದಿದೆ.
#ಅರ್ಧ ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಹಾಕಿ, ಕುದಿಸಿ ಶೋಧಿಸಿ ಹಾಲು ಬೆರೆಸಿ ಕಷಾಯ ತಯಾರಿಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ. ಜೀರಿಗೆ ನೀರು ಮತ್ತು ಜೀರಿಗೆ ಕಷಾಯ ರಕ್ತದ ಒತ್ತಡವನ್ನು ಸರಿ ಪಡಿಸುತ್ತದೆ.
# ಬಾಣಂತಿಯರು ಜೀರಿಗೆ ಹೆಚ್ಚಾಗಿ ಸೇವಿಸಿದರೆ ಎದೆಹಾಲು ವೃದ್ಧಿಸುತ್ತದೆ.
# ಎರಡು ಚಮಚ ಜೀರಿಗೆಗೆ ನೀರು ಬೆರೆಸಿ ರಾತ್ರಿ ಪೂರ್ತಿ ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುದಿಸಿ ಕುಡಿಯಿರಿ. ಜೊತೆಯಲ್ಲಿ ಜೀರಿಗೆಯನ್ನು ಅಗೆದು ನುಂಗಿ. ಹೀಗೆ ಮಾಡಿದ್ರೆ ನಿಮ್ಮ ತೂಕ ಕಡಿಮೆಯಾಗುತ್ತದೆ.
#ಬೆಳ್ಳುಳ್ಳಿ ಮತ್ತು ನಿಂಬೆ ಕೂಡ ನಿಮ್ಮ ತೂಕ ಕಡಿಮೆ ಮಾಡಲು ಸಹಕಾರಿ.
#ಜೀರಿಗೆ ನೀರು ಕುಡಿಯುವುದರಿನದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆ ಆಗುತ್ತದೆ.
# ಜೀರಿಗೆಯನ್ನು ಹುರಿದು ಪುಡಿ ಮಾಡಿ, ಬಿಸಿ ನೀರಿನಲ್ಲಿ ಹಾಕಿ ಕುಡಿಯುವುದರಿಂದ ಕೆಮ್ಮು, ಕಫಾ ನಿವಾರಣೆಯಾಗುತ್ತದೆ.