ನಿಮ್ಮ ಹಸಿವನ್ನೂ ನೀಗಿಸುವ ಆರೋಗ್ಯಕಾರಿ ಆಹಾರಗಳು!

ಸಡನ್ ಆಗಿ ಹೊಟ್ಟೆ ಹಸಿವು ಉಂಟಾದಾಗ, ಸಿಕ್ಕ-ಸಿಕ್ಕ ಆಹಾರಗಳನ್ನು ಸೇವಿಸುವ ಬದಲು, ಕೆಲವೊಂದು ಆರೋಗ್ಯಕಾರಿ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಹೊಟ್ಟೆ ಹಸಿವು ಕೂಡ ದೂರವಾಗುತ್ತದೆ ಅಂತಹ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ!

#ಒಂದು ದೊಡ್ಡ ಬಟ್ಟಲು ಸೂಪ್: ಸೂಪ್ ಹೆಚ್ಚಿನ ಪೌಷ್ಠಿಕಾಂಶಗಳಿರುವ ಆರೋಗ್ಯಕರ ಆಹಾರ. ಸೂಪ್ ನ್ನು ಸುಲಭವಾಗಿ ಮತ್ತು ಪ್ರತಿಯೊಂದು ತರಕಾರಿಯಿಂದಲೂ ಇದನ್ನು ತಯಾರಿಸಬಹುದು. ಕೆಲವೊಂದು ತರಕಾರಿಗಳನ್ನು ಕತ್ತರಿಸಿ ಅದನ್ನು ಉಪ್ಪು ಮತ್ತು ಕರಿಮೆಣಸಿನ ಹುಡಿ ಹಾಕಿ ನೀರಿನಲ್ಲಿ ಬೇಯಿಸಬೇಕು. ಇದು ತುಂಬಾ ಸರಳ ಮತ್ತು ಆರೋಗ್ಯಕರ ಸೂಪ್. ಇತರ ಆರೋಗ್ಯಕರ ಪರ್ಯಾಯವೆಂದರೆ ಬಾದಾಮಿ ಸೂಪ್, ಮೆಕ್ಕೆಜೋಳದ ಸೂಪ್, ಟೊಮೆಟೊ ಸೂಪ್ ಮತ್ತು ಇತ್ಯಾದಿಗಳು. ಇದನ್ನು ತುಂಬಾ ಕಡಿಮೆ ಸಮಯದಲ್ಲಿ ತಯಾರಿಸಿ ಹಸಿವನ್ನು ನೀಗಿಸಬಹುದು.

#ಹಾಲು ಮತ್ತು ಹಾಲಿನ ಉತ್ಪನ್ನಗಳು :ಒಂದು ಲೋಟ ಕೆನೆ ತೆಗೆದ ಮತ್ತು ಟೋನ್ಡ್ ಹಾಲು ತುಂಬಾ ಆರೋಗ್ಯಕರ ಮತ್ತು ಇದು ಹೆಚ್ಚುವರಿ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಹಾಲು ಪ್ರತಿಯೊಂದು ಕಡೆಯಲ್ಲಿ ಸಿಗುವ ಕಾರಣ ಹಸಿವು ನೀಗಿಸಲು ಇದನ್ನು ಉಪಯೋಗಿಸಬಹುದು. ಹಾಲಿನ ಉತ್ಪನ್ನಗಳಾದ ಲಸ್ಸಿ, ಮಿಲ್ಕ್ ಶೇಕ್, ಮೊಸರು, ಮಜ್ಜಿಗೆಯು ಆರೋಗ್ಯಕರ ಉತ್ಪನ್ನಗಳಾಗಿದ್ದು, ಹಸಿವು ನೀಗಿಸಲು ಇದನ್ನು ಬಳಸಬಹುದು ಮತ್ತು ಇದು ದೇಹಕ್ಕೂ ತುಂಬಾ ಒಳ್ಳೆಯದು. ಹಾಲು ಮತ್ತು ಮೊಟ್ಟೆ ಹಸಿವು ನೀಗಿಸಲು ಒಳ್ಳೆಯ ಆಹಾರ. ಮೊಟ್ಟೆಯನ್ನು ಬೇಯಿಸಿ, ಕಾಯಿಸಿ ಅಥವಾ ಸಾಧ್ಯವಾದರೆ ಹಾಗೆಯೇ ಸೇವಿಸಬಹುದು.

#ತಟ್ಟನೆ ತಯಾರಾಗುವ ಸ್ಯಾಂಡ್ವಿಚ್: ಸ್ಯಾಂಡ್ವಿಚ್ ನ್ನು ತುಂಬಾ ಸುಲಭ ಮತ್ತು ವೇಗವಾಗಿ ತಯಾರಿಸಬಹುದು. ಒಂದು ಪ್ಯಾಕೆಟ್ ಬ್ರೆಡ್, ಸ್ವಲ್ಪ ತರಕಾರಿಯಿದ್ದರೆ ಸ್ಯಾಂಡ್ವಿಚ್ ತಯಾರು. ಇದನ್ನು ಖಾರ, ಸಿಹಿ ಮತ್ತು ನಿಮ್ಮ ಇಷ್ಟದ ಎಲ್ಲಾ ತರಕಾರಿಗಳನ್ನು ಬಳಸಿ ಇದನ್ನು ತಯಾರಿಸಬಹುದು. ತೋಫು, ಮಶ್ರೂಮ್ ಮತ್ತು ಪನೀರ್ ನಿಂದ ಸ್ಯಾಂಡ್ವಿಚ್ ನ್ನು ತಯಾರಿಸಬಹುದು. ಹಸಿವನ್ನು ನೀಗಿಸಲು ಸ್ಯಾಂಡ್ವಿಚ್ ತುಂಬಾ ಆರೋಗ್ಯಕರ ಆಹಾರ. ಗೋಧಿಯಿಂದ ಮಾಡದ ಬ್ರೆಡ್ ಮತ್ತು ಹೆಚ್ಚಿನ ಚೀಸ್ ಬಳಸುವುದರಿಂದ ಸ್ಯಾಂಡ್ವಿಚ್ ಕೂಡ ಇತರ ಅನಾರೋಗ್ಯಕರ ಫಾಸ್ಟ್ ಫುಡ್ ನಂತಾಗಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group