ಬಾಳೆಹಣ್ಣು…ಫೇಸ್‌ ಪ್ಯಾಕ್‌ನ್ನು ಹೀಗೇ ಬಳಸಿ ನೋಡಿ!

ಬಾಳೆಹಣ್ಣನ್ನು ಮ್ಯಾಶ್ ಮಾಡಿ ಮತ್ತು ಒಂದು ಚಮಚ ಕಡ್ಲೆ ಹಿಟ್ಟು ಮತ್ತು ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಕಡಲೆ ಹಿಟ್ಟು ಮತ್ತು ನಿಂಬೆಯಿಂದ ಮಾಡಿದ ಈ ಫೇಸ್ ಪ್ಯಾಕ್ ತ್ವಚೆಯನ್ನು ಹಗುರಗೊಳಿಸುತ್ತದೆ.ಬಾಳೆಹಣ್ಣು ಸೇವನೆಯಿಂದ ಆರೋಗ್ಯದ ಮಾತ್ರವಲ್ಲ ತ್ವಚೆಗೂ ಬಹಳ ಉಪಯೋಗ ಇದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಬಾಳೆಹಣ್ಣು, ಚರ್ಮವನ್ನು ಮೃದುವಾಗಿ, ಹೊಳೆಯುವಂತೆ ಮಾಡುತ್ತದೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಬಾಳೆಹಣ್ಣಿನ ಫೇಸ್ ಪ್ಯಾಕ್ ಮುಖದಲ್ಲಿರುವ ಎಣ್ಣೆಯನ್ನು ಹೋಗಲಾಡಿಸುತ್ತದೆ. ಅಲ್ಲದೆ, ಇದು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

#ಡ್ರೈ ಸ್ಕಿನ್‌ ಇರುವವರಿಗೆ:ನಿಮ್ಮದು ಡ್ರೈ ಸ್ಕಿನ್‌ ಆಗಿದ್ದಲ್ಲಿ ಬಾಳೆಹಣ್ಣಿನ ಫೇಸ್ ಮಾಸ್ಕ್ ತಯಾರಿಸಿ ಹಚ್ಚಿಕೊಳ್ಳಿ. ಈ ಫೇಸ್ ಪ್ಯಾಕ್ ಮಾಡಲು ನಿಮಗೆ ಕೇವಲ 2 ವಸ್ತುಗಳು ಸಾಕು. ಬಾಳೆಹಣ್ಣಿನ ಸಿಪ್ಪೆ ತೆಗೆದು ಅದನ್ನು ಮ್ಯಾಶ್‌ ಮಾಡಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಚೆನ್ನಾಗಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷಗಳ ನಂತರ ಬಿಟ್ಟು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

#ಮೊಡವೆಗಳನ್ನು ನಿವಾರಿಸಲು:ಮಾಗಿದ ಬಾಳೆಹಣ್ಣಿಗೆ ಒಂದು ಚಮಚ ಬೇವಿನ ಹೂಗಳನ್ನು ಸೇರಿಸಿ ಪೇಸ್ಟ್‌ ಮಾಡಿ. ಇದಕ್ಕೆ ಚಿಟಿಕೆ ಅರಿಶಿನ ಸೇರಿಸಿ ಇದನ್ನು ಮುಖದ ಸುತ್ತ ಹಚ್ಚಿ. 30 ನಿಮಿಷಗಳ ನಂತರ ತೊಳೆಯಿರಿ. ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಹೊಂದಿರುವ ಈ ಫೇಸ್ ಪ್ಯಾಕ್ ಮೊಡವೆಗಳನ್ನು ಕಡಿಮೆ ಮಾಡುತ್ತದೆ. ವಾರಕ್ಕೆ ಎರಡು ಬಾರಿ ಈ ಫೇಸ್‌ ಪ್ಯಾಕ್‌ ಹಚ್ಚಿದರೆ ಸಾಕು.

#ಕಲೆ, ಟ್ಯಾನ್‌ ತೆಗೆಯಲು:ಬಾಳೆಹಣ್ಣನ್ನು ಮ್ಯಾಶ್ ಮಾಡಿ ಮತ್ತು ಒಂದು ಚಮಚ ಕಡ್ಲೆ ಹಿಟ್ಟು ಮತ್ತು ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಕಡಲೆ ಹಿಟ್ಟು ಮತ್ತು ನಿಂಬೆಯಿಂದ ಮಾಡಿದ ಈ ಫೇಸ್ ಪ್ಯಾಕ್ ತ್ವಚೆಯನ್ನು ಹಗುರಗೊಳಿಸುತ್ತದೆ. ಕಲೆಗಳನ್ನು ಹೋಗಲಾಡಿಸಲು ಬಹಳ ಉಪಯೋಗಕಾರಿ, ಹೊರಗಿನಿಂದ ಮನೆಗೆ ಬಂದು ಈ ಪ್ಯಾಕ್‌ ಹಚ್ಚಿ ಮುಖ ತೊಳೆದರೆ ಟ್ಯಾನ್‌ ಕಡಿಮೆಯಾಗುತ್ತದೆ.

#ಎಣ್ಣೆಯುಕ್ತ ಚರ್ಮ:

ಬಾಳೆಹಣ್ಣು ಹಾಗೂ ಅಷ್ಟೇ ಪ್ರಮಾಣದ ಸೌತೆಕಾಯಿ ಸೇರಿಸಿ ಮ್ಯಾಶ್‌ ಮಾಡಿ ಜೊತೆಗೆ ಸ್ವಲ್ಪ ಪರಂಗಿ ಹಣ್ಣು ಸೇರಿಸಿ. ಈ ಮೂರನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಈ ಪ್ಯಾಕನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ. 20 ನಿಮಿಷಗಳ ನಂತರ ವಾಶ್‌ ಮಾಡಿ. ಈ ಫೇಸ್ ಮಾಸ್ಕ್, ಎಣ್ಣೆಯುಕ್ತ ಚರ್ಮಕ್ಕೆ ಒಳ್ಳೆಯದು ಮತ್ತು ಪಿಗ್ಮೆಂಟೇಶನ್ ಸಮಸ್ಯೆಯಿಂದ ಹೊರ ಬರಬಹುದು. ಇದು ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನು ಕೂಡಾ ನೀಡುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group