ಬೆಳ್ಳುಳ್ಳಿಯ ಸೇವನೆ ಆರೋಗ್ಯಕ್ಕೆ ಎಷ್ಟು ಉಪಯುಕ್ತ, ಅಷ್ಟೇ ಅಪಾಯ!

ಪೋಷಕಾಂಶಗಳಿಂದ ಕೂಡಿದೆ. ಇದರಲ್ಲಿ, ಮ್ಯಾಂಗನೀಸ್, ಸೆಲೆನಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳು ಕಂಡುಬರುತ್ತವೆ. ಬೆಳ್ಳುಳ್ಳಿ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಕೆಲವು ಆರೋಗ್ಯ ಪರಿಸ್ಥಿತಿಗಳಲ್ಲಿ, ಇದರ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
#ಕೆಟ್ಟ ವಾಸನೆ:ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸಿದರೆ ಕೆಟ್ಟ ವಾಸನೆ ಉಂಟಾಗಬಹುದು. ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಅಂಶವೇ ಇದಕ್ಕೆ ಪ್ರಮುಖ ಕಾರಣವಾಗಿದೆ.
#ಜೀರ್ಣಕಾರಿ ಸಮಸ್ಯೆ:ಬೆಳ್ಳುಳ್ಳಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ನಿಮಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ನೀವು ಬೆಳ್ಳುಳ್ಳಿ ತಿನ್ನುವುದನ್ನು ತಪ್ಪಿಸಬೇಕು. ಬೆಳ್ಳುಳ್ಳಿ ಹೊಟ್ಟೆಯ ಕಿರಿಕಿರಿ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
#ಗರ್ಭಿಣಿಗೆ ಹಾಗೂ ನರ್ಸಿಂಗ್ ಮಹಿಳೆಯರಿಗೆ ಒಳ್ಳೆಯದಲ್ಲ:ಗರ್ಭಿಣಿಯರಿಗೆ ಅಥವಾ ಹಾಲುಣಿಸುತ್ತಿರುವ ತಾಯಂದಿರುವ ಆ ವೇಳೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ದೂರವಿರಬೇಕು. ಬೆಳ್ಳುಳ್ಳಿ ತಿನ್ನುವುದರಿಂದ ಗರ್ಭಿಣಿಯರಲ್ಲಿ ಹೆರಿಗೆಯ ಬೇನೆ ಹೆಚ್ಚಾಗಬಹುದು. ಅಲ್ಲದೆ, ಹಾಲಿನ ರುಚಿ ಬದಲಾಗುವ ಸಾಧ್ಯತೆ ಇರುವುದರಿಂದ ನರ್ಸಿಂಗ್ ತಾಯಂದಿರು ಸಹ ಬೆಳ್ಳುಳ್ಳಿಯನ್ನು ತಿನ್ನುವುದನ್ನು ಬಿಡಬೇಕು.
#ರಕ್ತವನ್ನು ತೆಳುಗೊಳಿಸಲು ಕೆಲಸ ಮಾಡುತ್ತದೆ, ಆದ್ದರಿಂದ ಹಾನಿಯಾಗಬಹುದು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಬೆಳ್ಳುಳ್ಳಿಯನ್ನು ತ್ಯಜಿಸಬೇಕು.
#ಅಲ್ಲದೆ, ಗ್ಯಾಸ್ಟ್ರೋಇಸೋಫಿಗಲ್ ರಿಫ್ಲಕ್ಸ್ ರೋಗ ಉಂಟಾಗಬಹುದೆಂದು ಹಾರ್ವಡ್ ಮೆಡಿಕಲ್ ಸ್ಕೂಲ್ ವರದಿ ನೀಡಿದೆ.