ನಿಮಗೂ ಈ ಆರೋಗ್ಯ ಸಮಸ್ಯೆಗಳಿವೆಯೇ? ಹಾಗಿದ್ದರೆ ಅಪ್ಪಿತಪ್ಪಿಯೂ ಬೀಟ್ರೂಟ್ ಸೇವಿಸಬೇಡಿ !

ಹಣ್ಣು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಆರೋಗ್ಯ ಸಮಸ್ಯೆ ಇರುವವರು ತಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು, ಯಾವುದರಿಂದ ದೂರ ಉಳಿಯಬೇಕು ಎಂಬುದನ್ನು ತಿಳಿದಿರುವುದು ಅಗತ್ಯ.
ಬೀಟ್ರೂಟ್ ಆರೋಗ್ಯಕ್ಕೆ ಒಳ್ಳೆಯದು ಎಂಬುದರಲ್ಲಿ ಅನುಮಾನವೇ ಇಲ್ಲ. ಇದರಲ್ಲಿ ವಿಟಮಿನ್-ಬಿ, ವಿಟಮಿನ್-ಸಿ, ಫಾಸ್ಫರಸ್, ಕ್ಯಾಲ್ಸಿಯಂ, ಪ್ರೊಟೀನ್, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಆದರೆ, ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಬೀಟ್ರೂಟ್ ಸೇವನೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು. ಹಾಗಿದ್ದರೆ, ಯಾವ ಆರೋಗ್ಯ ಸಮಸ್ಯೆ ಇರುವವರಿಗೆ ಬೀಟ್ರೂಟ್ ಸೇವನೆ ಹಾನಿಕಾರಕವಾಗಿದೆ. ಇದರ ಅನಾನುಕೂಲಗಳೇನು ಎಂದು ತಿಳಿಯೋಣ.
#ಮಧುಮೇಹ:ಮಧುಮೇಹಿಗಳಿಗೆ ಬೀಟ್ರೂಟ್ ಅಪಾಯಕಾರಿ. ವಾಸ್ತವವಾಗಿ, ಬೀಟ್ರೂಟ್ ನಲ್ಲಿ ಗ್ಲೈಸೆಮಿಕ್ ಸೂಚ್ಯಂಕವು ಅಧಿಕವಾಗಿದ್ದು, ಫೈಬರ್ ತುಂಬಾ ಕಡಿಮೆ ಇದೆ. ಹಾಗಾಗಿ, ಮಧುಮೇಹಿಗಳು ಬೀಟ್ರೂಟ್ ಸೇವಿಸುವುದರಿಂದ ಅದು ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು.
#ಯಕೃತ್ ಸಮಸ್ಯೆ ಇರುವವರು:ಬೀಟ್‌ರೂಟ್‌ನಲ್ಲಿರುವ ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳು ಯಕೃತ್ತಿನಲ್ಲಿ ಸಂಗ್ರಹವಾಗಬಹುದು. ಆದರೆ, ಯಕೃತ್ತಿಗೆ ಸಂಬಂಧಿಸಿದ ಕಾಯಿಲೆ ಇರುವವರಿಗೆ ಇದು ಸಮಸ್ಯೆಯನ್ನು ಹೆಚ್ಚಿಸಬಹುದು.
#ಇದರಿಂದ ಪ್ರತಿದಿನದ ಕಾರ್ಯಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ವ್ಯಾಯಾಮ ಮಾಡುವವರು ಸಂಪೂರ್ಣವಾಗಿ ಆ ಪ್ರಕ್ರಿಯೆಯನ್ನು ಬಿಟ್ಟು ಬಿಡುತ್ತಾರೆ. ದೈಹಿಕವಾಗಿ ಇದರಿಂದ ಸಾಕಷ್ಟು ಅನಾನುಕೂಲ ಉಂಟಾಗಲಿದೆ.
#ಇದಕ್ಕೆ ಸಹಕಾರಿ ಎನ್ನುವಂತೆ ಬೀಟ್ರೂಟ್ ತನ್ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೈಟ್ರೇಟ್ ಅಂಶವನ್ನು ಒಳಗೊಂಡಿದ್ದು, ಸೇವನೆ ಮಾಡಿದ ನಂತರ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗುತ್ತದೆ.ಹೃದಯದ ಅಪಧಮನಿಗಳು ಹಿಗ್ಗಿದಂತಾಗಿ ಸರಾಗವಾದ ರಕ್ತಸಂಚಾರ ಉಂಟಾಗುವ ಮೂಲಕ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.