ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇವುಗಳನ್ನು ಸೇವಿಸಿ!

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಆಹಾರ ಸೇವನೆ, ಆಹಾರ ಪದ್ಧತಿ ಮತ್ತು ಬದಲಾಗುತ್ತಿರುವ ಜೀವನ ಶೈಲಿ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ಮೂಲ ಕಾರಣ. ಅಧಿಕ ಕೊಲೆಸ್ಟ್ರಾಲ್ ಇಡೀ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೊಟ್ಟೆ, ಪೃಷ್ಠ ಮತ್ತು ಸೊಂಟದ ಭಾಗದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಆದರೆ ತೂಕ ಹೆಚ್ಚಾಗುವವರೆಗೆ ಇದು ನಮ್ಮ ಗಮನಕ್ಕೆ ಬರುವುದಿಲ್ಲ. ಇಂತಹ ಸಮಸ್ಯೆಗೆ ಇಲ್ಲಿವೆ ಕೆಲವು ಸಲಹೆ!

ಪಪ್ಪಾಯಿ:ಪಪ್ಪಾಯಿಯಲ್ಲಿ ನಾರಿನಂಶ ಹೇರಳವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯಾಘಾತವನ್ನು ತಡೆಗಟ್ಟಲು, ಹಸಿ ಪಪ್ಪಾಯಿಯನ್ನು ಪ್ರತಿದಿನ ಯಾವುದಾದರೂ ಆಹಾರದ ಜತಗೆ ಮಿಶ್ರಣ ಮಾಡಿ ಸೇವಿಸಬೇಕು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಪಪ್ಪಾಯಿಯು ನಮ್ಮ ದೇಹಕ್ಕೆ ಅಗತ್ಯವಿರುವ ಸಾಕಷ್ಟು ವಿಟಮಿನ್‌ ಮತ್ತು ಖನಿಜಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ವಿಟಮಿನ್ ಬಿ, ಸಿ ಮತ್ತು ಇ ಕೂಡಾ ಹೇರಳವಾಗಿರುತ್ತದೆ. ಪೊಟ್ಯಾಸಿಯಮ್, ಫೈಬರ್ ಮತ್ತು ಮೆಗ್ನೀಸಿಯಮ್ ಸಹ ಇದರಲ್ಲಿದೆ.

#​ಇಡಿಯ ಧಾನ್ಯಗಳು:ಇವುಗಳಲ್ಲಿ ಕರಗದ ನಾರು ಮತ್ತು ಪ್ರಮುಖ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ ಹಾಗೂ ಇವು ಹೃದಯದ ಒತ್ತಡವನ್ಜು ನಿಯಂತ್ರಿಸಲು ನೆರವಾಗುತ್ತವೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ನಿಮ್ಮ ಅಹಾರದಲ್ಲಿ ದ್ವಿದಳ ಧಾನ್ಯಗಳು, ಏಕದಳ ಧಾನ್ಯಗಳು ಹೆಚ್ಚಿರುವಂತೆ ಹಾಗೂ ಬಿಳಿಯ ಸಂಸ್ಕರಿತ ಅಹಾರಗಳು ಆದಷ್ಟೂ ಮಟ್ಟಿಗೆ ಇಲ್ಲದಿರುವಂತೆ ನೋಡಿಕೊಳ್ಳಿ.

#ಕೊಲೆಸ್ಟ್ರಾಲ್ ಕಡಿಮೆ ಮಾಡಲು ಫೈಬರ್ ಸೇವಿಸಿ:ನೀವು ಓಟ್ ಮೀಲ್ ಮತ್ತು ಓಟ್ ಹೊಟ್ಟು, ಸೇಬು, ಬಾಳೆಹಣ್ಣು, ಕಿತ್ತಳೆ, ಪೇರಳೆ ಮತ್ತು ಒಣದ್ರಾಕ್ಷಿ, ಧಾನ್ಯಗಳು, ಕಿಡ್ನಿ ಬೀನ್ಸ್, ಮಸೂರ, ಚಿಕ್ಕ ಬಟಾಣಿ, ಕಪ್ಪು ಕಣ್ಣಿನ ಬಟಾಣಿ ಮತ್ತು ಲಿಮಾ ಬೀನ್ಸ್ಗಳಂತಹ ದ್ವಿದಳ ಧಾನ್ಯ ತಿನ್ನಬೇಕು.

#ಕುಂಬಳಕಾಯಿ, ಆವಕಾಡೊ ಜೊತೆ ಬಾಳೆಹಣ್ಣಿನ ಜ್ಯೂಸ್: ನೀವು ಫೈಬರ್ ಭರಿತ ವಸ್ತುಗಳನ್ನು ಸೇವಿಸಿದರೆ ಅದು ಕೊಲೆಸ್ಟ್ರಾಲ್ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಕುಂಬಳಕಾಯಿ, ಆವಕಾಡೊ ಮತ್ತು ಬಾಳೆಹಣ್ಣುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶ ಇರುತ್ತದೆ. ಇವುಗಳ ಜ್ಯೂಸ್ ತಯಾರಿಸಿ ಕೂಡ ನೀವು ಸೇವಿಸಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group