ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ವಾಂತಿಗೆ ಮನೆ ಮದ್ದು!

ಗರ್ಭಾವಸ್ಥೆಯಲ್ಲಿ ವಾಂತಿ ಕಾಣಿಸಿಕೊಳ್ಳುವುದು ಸಹಜವೇ ಕೆಲ ಔಷಧಿಗಳು ತಕ್ಷಣ ಪರಿಣಾಮ ಬೀರುತ್ತವೆ. ಇಂದು ನಾವು ವಾಂತಿಗೆ ಮನೆ ಮದ್ದುಗಳು ಯಾವುವು ಎಂಬುದನ್ನು ಹೇಳ್ತೇವೆ

#ಒಂದು ಲೋಟ ನೀರಿಗೆ ಹತ್ತು ಹನಿ ನಿಂಬೆರಸ ಮತ್ತು ಅರ್ಧ ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಕಲಕಿ ಕುಡಿದರೆ ಶೀಘ್ರವಾಗಿ ಉಬ್ಬಳಿಕೆ, ವಾಂತಿ ಕಡಿಮೆಯಾಗುವುದು.

#ನಿಂಬೆಹಣ್ಣು ಅರ್ಧ ನಿಂಬೆಹಣ್ಣಿನಿಂದ ರಸವನ್ನು ಹಿಂಡಿ ಮತ್ತು ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ. ಜೇನುತುಪ್ಪ ಸೇರಿಸಿ ಮತ್ತು ನಿಂಬೆ ರಸವನ್ನು ಸೇವಿಸಿ.

# ವಾಂತಿ ಹಾಗೂ ಉಬ್ಬಳಿಕೆ ಕಂಡು ಬಂದಾಗ ಏಲಕ್ಕಿಯ 3–4 ಬೀಜಗಳನ್ನು ಬಾಯಿಯಲ್ಲಿ ಹಾಕಿ ಚೀಪುವುದರಿಂದ ಬಾಯಿಯ ರುಚಿ ಬದಲಾಗಿ ವಾಂತಿಯ ಅನಿಸಿಕೆ ನಿಲ್ಲುವುದು.

#ವಾಂತಿಗೆ ವಿಷಮ ಆಹಾರ ಅಥವಾ ಆಹಾರದ ಗುಣ ಮತ್ತು ಪ್ರಮಾಣದಲ್ಲಿ ಆಗುವ ವ್ಯತ್ಯಯದ ಪರಿಣಾಮವಾಗಿ ಜೀರ್ಣ ಶಕ್ತಿ ಏರುಪೇರಾಗಿ ವಾಂತಿ, ಉಬ್ಬಳಿಕೆ ಕಂಡು ಬಂದರೆ 1–2 ಸಣ್ಣ ಶುಂಠಿ ತುಂಡುಗಳನ್ನು ಚೆನ್ನಾಗಿ ಅಗಿದು ತಿನ್ನಬೇಕು.

#1/4 ಚಮಚ ಜೀರಿಗೆ ಮತ್ತು 1/4 ಚಮಚ ಸೋಂಪು ಹಾಗೂ ಒಂದು ಲೋಟ ನೀರು ಸೇರಿಸಿ ಕುದಿಸಿ ತಯಾರಿಸಿದ ಕಷಾಯದ ಸೇವನೆ ಉತ್ತಮ ಪರಿಣಾಮ ಬೀರುತ್ತದೆ.

# ಮಲಪ್ರವೃತ್ತಿ ಸರಿಯಾಗಿ ಆಗದೆ ಇದ್ದಾಗ ಕಂಡು ಬರುವ ವಾಂತಿ, ವಾಕರಿಕೆಯಲ್ಲಿ ಶುಂಠಿ ಕಷಾಯ ತಯಾರಿಸಿ ಅಲ್ಪ ಪ್ರಮಾಣದಲ್ಲಿ ಪದೇ ಪದೇ ಕುಡಿಯುವುದು ಒಳ್ಳೆಯ ಪರಿಣಾಮ ಬೀರುತ್ತದೆ.

# ಸಮ ಪ್ರಮಾಣದಲ್ಲಿ ನಿಂಬೆರಸ ಹಾಗೂ ಜೇನುತುಪ್ಪ ಅತ್ಯಲ್ಪ ಪ್ರಮಾಣದಲ್ಲಿ ಪುನಃ ಪುನಃ ಸೇವಿಸುವುದರಿಂದ ಉಬ್ಬಳಿಕೆಯಿಂದ ಕಂಡು ಬರುವ ಕಿರಿಕಿರಿ ಕಡಿಮೆಯಾಗುತ್ತದೆ.

# 1 ಚಮಚ ಲಿಂಬೆ ರಸ ಹಾಗೂ 1 ಚಮಚ ಶುಂಠಿ ರಸ ಸೇರಿಸಿ ದಿನದಲ್ಲಿ 3–4 ಬಾರಿ ಅಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ವಾಂತಿ ಹಾಗೂ ಉಬ್ಬಳಿಕೆಯ ಅನಿಸಿಕೆಯನ್ನು ತಡೆಯಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group