ನಿಮ್ಮ ಅತಿಯಾದ ಹಸಿವನ್ನು ನಿಯಂತ್ರಿಸುವ ಆರೋಗ್ಯಕಾರಿ ವಿಧಾನಗಳು!

ಸ್ಥೂಲಕಾಯವನ್ನು ಹೊಂದಿರುವ ಜನರು ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ನಾನಾ ಪಡಿಪಾಟಲುಗಳನ್ನು ಪಡುತ್ತಾರೆ ಕಾರಣ ಅವರು ತಮ್ಮ ತಿನ್ನುವ ಚಪಲವನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಯಾವಾಗ ಒಬ್ಬ ವ್ಯಕ್ತಿಯು ಹೊಟ್ಟೆ ಹಸಿವಿನ ಅನುಭವವನ್ನು ಪಡೆಯುತ್ತಾನೋ, ಆಗ ಅವನು ತನ್ನ ಸುತ್ತ-ಮುತ್ತ ಸಿಗುವ ಅನಾರೋಗ್ಯಕರವಾದ ತಿಂಡಿಗಳನ್ನು ತಿನ್ನಲು ಶುರು ಮಾಡುತ್ತಾನೆ.ಆದರೆ ತೂಕ ಇಳಿಸಿಕೊಳ್ಳುವ ನೀತಿ ಏನನ್ನು ಹೇಳುತ್ತದೆ. ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಬಯಸಿದಲ್ಲಿ, ನಿಮ್ಮ ಅವಶ್ಯಕತೆಗಿಂತ ಕಡಿಮೆ ತಿನ್ನಿ ಎಂದು ಹೇಳುತ್ತದೆ. ಅದನ್ನು ಬಿಟ್ಟು ನಿಮ್ಮ ಪಾಡಿಗೆ ನೀವು ಉಪವಾಸ ಕುಳಿತುಕೊಳ್ಳುವ ಕೆಟ್ಟ ಆಲೋಚನೆಯನ್ನು ಕೈಗೆತ್ತಿಕೊಳ್ಳಬೇಡಿ.

#ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಎಲ್ಲಕ್ಕೂ ನಾರಿನಂಶ:ಹೌದು ಇದೀಗ ಸಮಯ ಬಂದಿದೆ ಊಟ ಕಡಿಮೆ ಮಾಡಲು ಮತ್ತು ನಾರಿನಂಶವನ್ನು ಜೀರ್ಣ ಮಾಡಿಕೊಳ್ಳಲು. ಏಕೆಂದರೆ, ಯಾವಾಗ ನೀವು ಡಯಟೆರಿ ಫೈಬರ್ ಅಂದರೆ ನಾರಿನಂಶವನ್ನು ಹೊಂದಿರುವ ಆಹಾರವನ್ನು ಸೇವಿಸುತ್ತೀರೋ, ಆಗ ನಿಮ್ಮ ಹೊಟ್ಟೆ ತುಂಬಾ ಹೊತ್ತು ಹಸಿಯುವುದಿಲ್ಲ.

#ಚೆನ್ನಾಗಿ ನೀರು ಕುಡಿಯಿರಿ:ಗಂಟೆಗೊಮ್ಮೆ ಒಂದು ಲೋಟ ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹದಲ್ಲಿರುವ ಟಾಕ್ಸಿನ್‍ಗಳನ್ನು ಹೊರಹಾಕಲು ಸಹಾಯವಾಗುತ್ತದೆ. ಹೀಗೆ ಸದಾ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗಿ ಹೊಟ್ಟೆ ಹಸಿಯುವುದಿಲ್ಲ.

#ಪ್ರತಿಯೊಂದಕ್ಕು ಚಕ್ಕೆಯನ್ನು ಹಾಕಿಚಕ್ಕೆಯು ಒಂದು ಆರೋಗ್ಯಕರವಾದ ಮಸಾಲೆ ಪದಾರ್ಥವಾಗಿದೆ. ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ನಿಯಂತ್ರಣದಲ್ಲಿಡುತ್ತದೆ. ಇದರರ್ಥ ನಿಮ್ಮ ಜೀರ್ಣಕ್ರಿಯೆಯು ನಿಧಾನಗೊಳ್ಳುತ್ತದೆ ಮತ್ತು ನೀವು ತುಂಬಾ ಹೊತ್ತಿನವರೆಗೆ ಹೊಟ್ಟೆ ಹಸಿಯದಂತೆ ಕಾಲ ಕಳೆಯಬಹುದು.

#ನಿಧಾನವಾಗಿ ತಿನ್ನಿನೀವು ಬೇಗ ತಿನ್ನಲು ತೊಡಗಿದರೆ ಬಹು ಬೇಗ ನಿಮ್ಮ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹಾಗು ಅಷ್ಟೇ ಬೇಗ ನಿಮ್ಮ ಹೊಟ್ಟೆಯು ಹಸಿಯಲು ಆರಂಭಿಸುತ್ತದೆ. ಆದ್ದರಿಂದ ಆಹಾರ ಸೇವಿಸುವಾಗ ನಿಧಾನವಾಗಿ ಸೇವಿಸಿ. ಇದರಿಂದ ಆಹಾರದ ರುಚಿ ಇನ್ನಷ್ಟು ಸೊಗಸಾಗಿರುತ್ತದೆ ಮತ್ತು ಹೊಟ್ಟೆಯು ನಿಧಾನವಾಗಿ ಹಸಿಯುತ್ತದೆ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group