ಬೆಳಗ್ಗೆ ಹಳಸಿದ ಬಾಯಿಯಲ್ಲಿ ಮಧುಮೇಹ ನಿಯಂತ್ರಿಸಲು ಈ ಪಾನೀಯ ಸೇವಿಸಿ !

ಮಾವಿನ ಎಲೆಗಳು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ ಎಂದು ಹಲವು ಸಂಶೋಧನೆಗಳು ಬಹಿರಂಗಪಡಿಸಿವೆ. ಮಾವಿನ ಎಲೆಗಳಲ್ಲಿ ಮ್ಯಾಂಗಿಫೆರಿನ್ ಕಂಡುಬರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಪ್ರತಿದಿನ ಬೆಳೆಗ್ಗೆ ಮಾವಿನ ಎಲೆಗಳನ್ನು ಹೊಂದಿರುವ ನೀರನ್ನು ಕುಡಿಯುವುದು ಲಾಭವನ್ನು ನೀಡುತ್ತದೆ.
#ಸೀಬೆ ಗಿಡದ ಎಲೆಗಳು:ಸೀಬೆ ಹಣ್ಣಿನ ಗಿಡದ ಎಲೆಗಳು ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಸಹ ಪ್ರಯೋಜನಕಾರಿ ಸಾಬೀತಾಗುತ್ತವೆ. ಇದಕ್ಕಾಗಿ ಸೀಬೆ ಎಲೆಗಳನ್ನು ಹೊಂದಿರುವ ಪಾನೀಯವನ್ನು ಪ್ರತಿದಿನ ಸೇವಿಸಿ. ಇದಕ್ಕಾಗಿ ಎರಡು ಪೇರಲ ಎಲೆಗಳನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ಸೇವಿಸಿ. ಜೇನುತುಪ್ಪವನ್ನು ಸಿಹಿಕಾರಕವಾಗಿ ನೀವು ಬಳಸಬಹುದು.
#ಕರಿಬೇವುಆರೋಗ್ಯ ತಜ್ಞರ ಪ್ರಕಾರ, ಕರಿಬೇವಿನ ಎಲೆಗಳಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಇದರ ಸೇವನೆಯಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಮತ್ತು ಇದು ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಕರಿಬೇವಿನ ಸೊಪ್ಪನ್ನು ಕುದಿಸಿ ಕುಡಿಯಿರಿ. ಇನ್ನೊಂದೆಡೆ, ನೀವು ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಸಹ ಸೇರಿಸಬಹುದು. ಇದು ಆಹಾರದ ರುಚಿಯ ಜೊತೆಗೆ ಸ್ವಾದವನ್ನು ಕೂಡ ಹೆಚ್ಚಿಸುತ್ತದೆ.
#ಸ್ಪೈರಲ್ ಫ್ಲಾಗ್ ಅಥವಾ ಇನ್ಸುಲಿಂಗ್ ಪ್ಲಾಂಟ್ ಎಲೆಗಳುಸ್ಪೈರಲ್ ಫ್ಲಾಗ್ ಎಲೆಗಳು ಸಕ್ಕರೆಯನ್ನು ನಿಯಂತ್ರಿಸಲು ಸಹಾಯಕವಾಗಿವೆ ಎಂದು ಅನೇಕ ಸಂಶೋಧನೆಗಳು ಹೇಳಿವೆ. ಇದರಲ್ಲಿ ಸಪೋನಿನ್, ಫ್ಲೇವನಾಯ್ಡ್, ಸ್ಟೀರಾಯ್ಡ್, ಆಲ್ಕಲಾಯ್ಡ್ ಮತ್ತು ಪ್ರೊಟೀನ್ ಗುಣಗಳಿದ್ದು, ಇವು ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಇದಕ್ಕಾಗಿ ಸ್ಪೈರಲ್ ಫ್ಲಾಗ್ ಎಲೆಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸಿ.
#ಮಾವಿನ ಎಲೆಗಳು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳು ಬಹಿರಂಗಪಡಿಸಿವೆ. ಮಾವಿನ ಎಲೆಗಳಲ್ಲಿ ಮ್ಯಾಂಗಿಫೆರಿನ್ ಕಂಡುಬರುತ್ತದೆ, ಇದು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಮಾವಿನ ಎಲೆಗಳನ್ನು ಹೊಂದಿರುವ ನೀರನ್ನು ಕುಡಿಯಿರಿ. ಮಾವಿನ ಎಲೆಗಳನ್ನು ಕುದಿಸಿ ನಂತರ ಅದರ ನೀರನ್ನು ಸೇವಿಸಬಹುದು.