ತಲೆ ಹೊಟ್ಟನ್ನು ಕಡಿಮೆ ಮಾಡಲು ಇಲ್ಲಿವೆ ಸುಲಭ ಮನೆಮದ್ದುಗಳು

ತಲೆಹೊಟ್ಟಿನ ಸಮಸ್ಯೆ ಇದು ಸಾಮಾನ್ಯವಾಗಿದ್ದು, ಮಕ್ಕಳಿಂದ ಹಿಡಿದು ಎಲ್ಲ ವಯೋಮಿತಿಯವರನ್ನ ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಇದರಿಂದ ಹಲವರು ಹೊರಗೆ ಹೋಗಲೂ ಕೂಡ ಹಿಂಜರಿಯುತ್ತಿದ್ದಾರೆ. ಮಾತ್ರವಲ್ಲ, ತಲೆಹೊಟ್ಟಿನ ಸಮಸ್ಯೆ ಅವರ ಆತ್ಮ ವಿಶ್ವಾಸವನ್ನೂ ಕುಗ್ಗಿಸುತ್ತದೆ. ಆದರೆ ಇದು ಅಂತಹ ದೊಡ್ಡ ಸಮಸ್ಯೆಯೇನಲ್ಲ. ತಲೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಸುಲಭ ಪರಿಹಾರ.

#ಉತ್ತಮ ಪ್ರೋಟಿನ್‌ ಇರುವ ಆಹಾರದ ಜೊತೆಗೆ ಹೆಚ್ಚು ನೀರನ್ನು ಕುಡಿಯುದರಿಂದ ಈ ಸಮಸ್ಯೆಯನ್ನ ಸುಧಾರಿಸಿಕೊಳ್ಳಬಹುದು. ಧೂಳು ಮುಂತಾದ ಮಾಲಿನ್ಯಕಾರಕಗಳಿಂದ ಕೂದಲನ್ನು ರಕ್ಷಿಸಿಕೊಳ್ಳುವುದು ಒಳಿತು. ಇಲ್ಲವಾದರೆ ಕೂದಲು ಉದುರುವ ಸಮಸ್ಯೆಯನ್ನು ಸಹ ಎದುರಿಸಬೇಕಾಗುತ್ತದೆ. ಇದಲ್ಲದೆ, ಮನೆಮದ್ದನ್ನ ಬಳಸುವುದರಿಂದ ಇಂತಹ ಸಮಸ್ಯೆಗಳಿಗೆ ಕ್ರಮೇಣವಾಗಿ ಮುಕ್ತಿ ನೀಡಬಹುದು. ಹಾಗೆಯೇ ದೇಹದ ಉಷ್ಣತೆ ಹೆಚ್ಚಿಸುವ ಪದಾರ್ಥಗಳನ್ನ ಕಡಿಮೆ ಸೇವಿಸುವುದು ಇಂತಹ ಸಮಸ್ಯೆಗಳಿಗೆ ದಾರಿ ಮಾಡಿಕೊಡುವುದಿಲ್ಲ. ಇದಲ್ಲದೆ, ಕೂದಲಿಗೆ ಸರಿಯಾದ ಆರೈಕೆಯಿಂದಲೂ ತಲೆ ಹೊಟ್ಟಿನ ಸಮಸ್ಯೆಯಿಂದ ಪರಿಹಾರ ಪಡೆಯಲು ಸಹಕಾರಿ ಆಗಲಿದೆ.

# ಕರಿಬೇವಿನ ನಾರನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಎಣ್ಣೆಯನ್ನ ದಿನ ನಿತ್ಯ ಉಪಯೋಗಿಸುವುದರಿಂದ ತಲೆ ಹೊಟ್ಟು ಕ್ರಮೇಣ ಕಡಿಮೆಯಾಗಬಹುದು.* ಬೇವು ನೆತ್ತಿಯನ್ನು ಸ್ವಚ್ಚಗೊಳಿಲು ಸಹಾಯ ಮಾಡುತ್ತದೆ. ಹಾಗೆಯೇ ಕೂದಲಿನ ಬೆಳವಣಿಗೆಯನ್ನ ಸುಧಾರಿಸಿ ತಲೆಹೊಟ್ಟಿನ ನಿವಾರಣೆಗೆ ಸಹಕಾರಿಯಾಗುತ್ತದೆ.

#ಕೊಬ್ಬರಿ ಎಣ್ಣೆಯನ್ನ ಬಳಸುವವರು 3 ತಾಸಿಗಿಂತ ಜಾಸ್ತಿ ತಲೆಯಲ್ಲಿ ಎಣ್ಣೆಯನ್ನ ಬಿಡುವುದರಿಂದಲೂ ತಲೆಹೊಟ್ಟು ಉಂಟಾಗುತ್ತದೆ. ಆದ್ದರಿಂದ ತಲೆಯಲ್ಲಿ 3 ತಾಸಿಗಿಂತ ಜಾಸ್ತಿ ತಲೆಯಲ್ಲಿ ಇರದಂತೆ ನೋಡಿಕೊಳ್ಳಬೇಕು.

# ಅಲೋವೇರಾವನ್ನ ಕೂದಲಿನ ಬುಡಕ್ಕೆ ಹಚ್ಚುವುದರಿಂದಲೂ ತಲೆ ಹೊಟ್ಟನ್ನ ನಿವಾರಿಸಬಹುದು. ಇದರಲ್ಲಿ ಆಂಟಿ ಬ್ಯಾಕ್ಟಿರಿಯಾ ಗುಣಗಳಿರುವುದರಿಂದ ಯಾವುದೇ ಸೈಡ್‌ ಎಫೆಕ್ಟ್‌ ಉಂಟಾಗುವುದಿಲ್ಲ.

# ಮೆಂತ್ಯೆ ಕಾಳನ್ನು ರಾತ್ರಿ ನೆನಸಿ ಬೆಳಗ್ಗೆ ಅದರ ಪೇಸ್ಟ್‌ ನ್ನು ತಲೆಯ ಬುಡಕ್ಕೆ ಹಚ್ಚಿ 30 ನಿಮಿಷ ಬಿಟ್ಟು ತಲೆ ತೊಳೆಯುವುದರಿಂದ ತಲೆಹೊಟ್ಟು ನಿವಾರಿಸಬಹುದು.

# ಬೇವಿನ ಪುಡಿಯನ್ನ ತೆಂಗಿನ ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟನ್ನ ನಿವಾರಿಸಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group