ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕಿದೆ ಈ ಪ್ರಯೋಜನಗಳು

ತುಪ್ಪ, ಆಯುರ್ವೇದ ಸೂಚಿಸಿದ ಹಲವಾರು ಗುಣಪಡಿಸುವ ಗುಣಗಳನ್ನು ಹೊಂದಿರುವ ಅಧ್ಭುತ ಆಹಾರವಾಗಿದೆ. ಇದರ ರುಚಿ ಮತ್ತು ಪರಿಮಳ ನಮ್ಮ ಅಹಾರವನ್ನು ಇನ್ನಷ್ಟು ಇಷ್ಟವಾಗುವಂತೆ ಮಾಡುವ ಕಾರಣ ನಮ್ಮ ಹಲವಾರು ಸಾಂಪ್ರಾದಾಯಿಕ ಆಹಾರಗಳಲ್ಲಿ ಸ್ಥಾನ ಪಡೆದಿರುವುದು ಮಾತ್ರವಲ್ಲ, ಆಯುರ್ವೇದ ತುಪ್ಪವನ್ನು ಹಲವು ಕಾಯಿಲೆಗಳಿಗೆ ಔಷಧಿಯ ರೂಪದಲ್ಲಿಯೂ ಸೇವಿಸುವಂತೆ ಸೂಚಿಸಿದೆ.
#ಹಾಲು ಮತ್ತು ತುಪ್ಪದ ಮಿಶ್ರಣವು ಚಯಾಪಚಯ ವೃದ್ಧಿಸುವುದು ಮತ್ತು ದೇಹಕ್ಕೆ ಶಕ್ತಿ ಹಾಗೂ ತ್ರಾಣ ನೀಡುವುದು. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಇದು ತೆಗೆಯುವುದು.
#ದೈಹಿಕ ಶಕ್ತಿಯನ್ನು ಒದಗಿಸುತ್ತದೆ:ತುಪ್ಪ ಬೆರೆಸಿದ ಹಾಲಿನ ಸೇವನೆಯಿಂದ ಜೀರ್ಣಾಂಗಗಳಲ್ಲಿ ಜೀರ್ಣರಸ ಮತು ಕಿಣ್ವಗಳ ಉತ್ಪತ್ತಿ ಹೆಚ್ಚುವ ಮೂಲಕ ಜೀರ್ಣಶಕ್ತಿ ಹೆಚ್ಚುತ್ತದೆ. ಈ ಕಿಣ್ವಗಳು ನಮ್ಮ ಆಹಾರದ ಸಂಯುಕ್ತ ಘಟಕಗಳನ್ನು ಸುಲಭವಾಗಿ ಒಡೆದು ಸರಳ ಅಂಶಗಳನ್ನಾಗಿ ಪರಿವರ್ತಿಸಿ ಶೀಘ್ರ ಜೀರ್ಣಗೊಳ್ಳಲು ಮತ್ತು ದೇಹ ಹೀರಿಕೊಳ್ಳಲು ನೆರವಾಗುತ್ತವೆ. ಒಂದು ವೇಳೆ ನಿಮಗೆ ಮಲಬದ್ದತೆಯ ತೊಂದರೆ ಅಥವಾ ಜೀರ್ಣಾಂಗಗಳ ಕ್ಷಮತೆಯ ಕೊರತೆ ಇದ್ದರೆ ಈ ತೊಂದರೆಯನ್ನು ನೀಗಿಸಲು ನಿಮ್ಮ ಆಹಾರದಲ್ಲಿ ತುಪ್ಪ ಬೆರೆಸಿದ ಹಾಲನ್ನು ನಿತ್ಯವೂ ಸೇರಿಸಿಕೊಂಡರೆ ಉತ್ತಮ ಪರಿಹಾರ ದೊರಕುತ್ತದೆ.
#ಕೀಲು ನೋವು ಸಮಸ್ಯೆಗಳನ್ನು ಹೊಂದಿರುವವರು, ಹಾಲಿನಲ್ಲಿ ತುಪ್ಪವನ್ನು ಬೆರೆಸಿ ಕುಡಿಯುವುದು ಉತ್ತಮ. ಇದು ಕೀಲು ನೋವನ್ನು ಗುಣಪಡಿಸುವುದಲ್ಲದೆ, ಮೂಳೆಗಳು ಮತ್ತು ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ.
#ದೇಹದ ದಾರ್ಢ್ಯತೆಯನ್ನು ಹೆಚ್ಚಿಸುತ್ತದೆ:ಹೆಚ್ಚಿನ ಕೆಲಸದ ಒತ್ತಡದಿಂದ ಸದಾ ಸುಸ್ತಾಗಿರುವ ಅನುಭವವಾಗುತ್ತಿದೆಯೇ? ಹಾಗಾದರೆ ದೇಹದಲ್ಲಿ ಚೈತನ್ಯವನ್ನು ಮೂಡಿಸುವ ಈ ಆಹಾರವನ್ನು ನಿಮ್ಮ ನಿತ್ಯದ ಆಹಾರದ ಅಂಗವಾಗಿಸಿಕೊಳ್ಳಲೇಬೇಕು. ವಿಶೇಷವಾಗಿ ಕಠಿಣ ವ್ಯಾಯಾಮ ಅಥವಾ ದೇಹದಂಡಿಸುವ ಕೆಲಸ ನಿರ್ವಹಿಸುವವರಿಗೆ ಈ ಆಹಾರ ಅದ್ಭುತವಾದ ಪ್ರಯೋಜನವನ್ನು ನೀಡಬಲ್ಲುದು. ಸಾಮಾನ್ಯವಾಗಿ ಕುಸ್ತಿಪಟುಗಳು ಗೂಳಿಯಂತೆ ಬಲಿಷ್ಠರಾಗಿರಲು ಅವರು ಸೇವಿಸುವ ತುಪ್ಪ ಬೆರೆಸಿದ ಹಾಲೇ ಕಾರಣ.