ಪುನರಾವರ್ತಿತ ಬಿಕ್ಕಳಿಕೆಯನ್ನು ತಡೆಯಲು ಕೆಲವು ಸಲಹೆ!

ದೊಡ್ಡ ಪ್ರಮಾಣದ ಆಹಾರವನ್ನು ಒಂದೆ ಸಲ ನುಂಗಲು ಪ್ರಯತ್ನಿಸಿದಾಗ, ಅಥವಾ ಅತಿಯಾಗಿ ತಿನ್ನುತ್ತಿರುವಾಗ ಅದು ನಮ್ಮ ನ್ಯೂಮೋಗ್ಯಾಸ್ಟ್ರಿಕ್ ನರವನ್ನು ಕಿರಿಕಿರಿಗೊಳಿಸುತ್ತದೆ.ಇದರಿಂದಾಗಿ ಬಿಕ್ಕಳಿಕೆ ಬರುತ್ತದೆ.ಕೆಲವೊಮ್ಮೆ ಅವಸರದಲ್ಲಿ ತಿನ್ನುತ್ತ ಬಿಕ್ಕಳಿಕೆ ಬಂದಾಗ ತಿಂದಿದ್ದು ನೆತ್ತಿಗೇರಿತು,ನೀರು ಕುಡಿ ಎಂದು ನಮ್ಮ ಮನೆಯ ಹಿರಿಯರು ಹೇಳಿದ್ದು ನೆನಪು ಇದೆ ತಾನೆ ? ಆದುದರಿಂದ ಎಷ್ಟೆ ಅವಸರದಲ್ಲಿದ್ದರು ನಿಧಾನವಾಗಿ ತಿನ್ನಿ ಇದರಿಂದ ದೀರ್ಘ ಸಮ್ಯದವರೆಗೆ ಬರುವ ಬಿಕ್ಕಳಿಕೆಯ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದು ಈ ಬಿಕ್ಕಳಿಕೆಯನ್ನು ಕಡಿಮೆ ಮಾಡುವ ಉಪಾಯ ಇಲ್ಲಿದೆ ನೋಡಿ.
#
#ಜೇನು ಮತ್ತು ಹರಳೆಣ್ಣೆಆಯುರ್ವೇದ ಬಿಕ್ಕಳಿಕೆಯ ಚಿಕಿತ್ಸೆಗಾಗಿ ಈ ವಿಧಾನವನ್ನು ಸೂಚಿಸುತ್ತದೆ. ಒಂದು ವೇಳೆ ಬಿಕ್ಕಳಿಕೆ ಸತತವಾಗಿ ಮುಂದುವರೆಯುತ್ತಲೇ ಇದ್ದರೆ ಈ ವಿಧಾನವನ್ನು ಅನುಸರಿಸಬಹುದು. ಒಂದು ಚಿಕ್ಕಚಮಚ ಜೇನು ಹಾಗೂ ಒಂದು ಚಿಕ್ಕಚಮಚ ಹರಳೆಣ್ಣೆಯನ್ನು ಬೆರೆಸಿ ಬೆರಳಿನಲ್ಲಿ ಅದ್ದಿ ಬೆರಳನ್ನು ಚೀಪಿ ನುಂಗಬೇಕು. ದಿನಕ್ಕೆ ಎರಡರಿಂದ ಮೂರು ಬಾರಿ ಪುನರಾವರ್ತಿಸಬೇಕು.
#ಒಂದು ಚಮಚ ಸಕ್ಕರೆಯನ್ನು ಸೇವನೆ ಮಾಡಬೇಕು ಅಥವಾ ಸ್ವಲ್ಪ ಪ್ರಮಾಣದಲ್ಲಿ ಸಕ್ಕರೆಯನ್ನು ನಿಮ್ಮ ನಾಲಿಗೆಯ ಕೆಳಭಾಗದಲ್ಲಿ ಇಟ್ಟುಕೊಳ್ಳಬೇಕು.
#ಬಿಕ್ಕಳಿಕೆ ನಿರಂತರವಾಗಿ ಬರುತ್ತಿದೆ, ನಿಮ್ಮ ನಾಲಿಗೆಯನ್ನು(Tongue) ಹೊರತೆಗೆಯುವ ಮೂಲಕ ಬಿಕ್ಕಳಿಕೆಯನ್ನು ನಿಲ್ಲಿಸಬಹುದು.ಇದರ ಹೊರತಾಗಿ ಬಿಕ್ಕಳಿಕೆಯಿಂದ ನಿಮ್ಮ ಗಮನವನ್ನು ಬೇರೆಡೆಗೆ ವರ್ಗಾಯಿಸಿ ಸ್ವಲ್ಪ ಸಮಯದವರೆಗೆ ಬೇರೆ ಯಾವುದನ್ನಾದರೂ ಯೋಚಿಸಿದರೆ ಬಿಕ್ಕಳಿಕೆ ಕೂಡ ಸ್ವಲ್ಪ ಸಮಯದಲ್ಲಿ ನಿಲ್ಲುತ್ತದೆ.
#ಬಿಕ್ಕಳಿಸುವಿಕೆಯು ನಿರಂತರ ಸಮಸ್ಯೆಯಾಗಿದ್ದರೆ ಅಥವಾ ವಿಶ್ರಾಂತಿಯ ಮಾದರಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದ್ದರೆ, ತಿನ್ನುವಲ್ಲಿ ಮಧ್ಯಪ್ರವೇಶಿಸಿದರೆ ಅಥವಾ ಆಹಾರದ ಹಿಮ್ಮುಖ ಹರಿವು ಅಥವಾ ಹಿಮ್ಮೆಟ್ಟುವಿಕೆಯನ್ನು ಉಂಟುಮಾಡುವ ಸಾಧ್ಯತೆಯಿದ್ದರೆ ಒಬ್ಬ ವ್ಯಕ್ತಿಯು ವೈದ್ಯರನ್ನು ಭೇಟಿ ಮಾಡಬೇಕು. ತೀವ್ರವಾದ ಹೊಟ್ಟೆ ನೋವು, ಜ್ವರ, ಉಗುಳುವಿಕೆ, ರಕ್ತವನ್ನು ಎಸೆಯುವುದು ಅಥವಾ ಗಂಟಲು ಸಂಕುಚಿತಗೊಂಡಂತೆ ಭಾಸವಾಗುವುದರೊಂದಿಗೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ಬಿಕ್ಕಳಿಕೆಗಳು ಮುಂದುವರಿದರೆ, ವ್ಯಕ್ತಿಯು ವೈದ್ಯಕೀಯ ಸಹಾಯವನ್ನು ಪಡೆಯಬೇಕು.