ಮೂಲವ್ಯಾಧಿಯಿಂದ ಬಳಲುತ್ತಿರುವವರು ಈ ಆಹಾರಗಳನ್ನು ಸೇವಿಸಲೇಬೇಡಿ!

ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯು ದೇಹದಲ್ಲಿ ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು. ಮೂಲವ್ಯಾಧಿ ಕೂಡ ಹೀಗೆಯೇ ಬರುತ್ತವೆ. ಮಲಬದ್ಧತೆ, ಗ್ಯಾಸ್ಟ್ರಿಕ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ದೀರ್ಘಾವಧಿಯ ಪೈಲ್ಸ್‌ಗೆ ಕಾರಣವಾಗಬಹುದು.
#ನಿಮ್ಮ ಆಹಾರದಲ್ಲಿ ಹಸಿರು ಬಟಾಣಿ, ಹೂಕೋಸು, ಶತಾವರಿ, ಸೇಬು, ಬೆಣ್ಣೆಹಣ್ಣು, ಬಾಳೆಹಣ್ಣು, ಒಣಫಲಗಳು ಹಾಗೂ ಬೀಜಗಳಿರಲಿ. ಮದ್ಯಪಾನ, ಧೂಮಪಾನ ಮತ್ತು ಕೆಫೇನ್ ಸೇವನೆ ನಿಮಗೆ ಸರ್ವಥಾ ಸಲ್ಲದು ಹಾಗೂ ಇವು ಈಗಿರುವ ಸ್ಥಿತಿಯನ್ನು ಉಲ್ಬಣಗೊಳಿಸಬಹುದು.
#ಮಾಂಸಾಹಾರ ಆಹಾರಗಳಿಗೆ ಪರ್ಯಾಯವಾಗಿ ಚೀಸ್ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಆದರೆ ನೀವು ಪೈಲ್ಸ್‌ನಿಂದ ಬಳಲುತ್ತಿದ್ದರೆ ನಿಮ್ಮ ಆಹಾರದಲ್ಲಿ ಚೀಸ್ ಸೇರಿಸಬೇಡಿ. ಇದು ಪೈಲ್ಸ್ ನೋವನ್ನು ಉಲ್ಬಣಗೊಳಿಸುತ್ತದೆ.
#ಎಣ್ಣೆ ಮತ್ತು ಹೆಚ್ಚು ಮಸಾಲೆಯುಕ್ತ ಆಹಾರ ಯಾರಿಗಾದರೂ ಬಾಯಲ್ಲಿ ನೀರೂರಿಸುತ್ತದೆ. ಆದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಈ ಆಹಾರಗಳನ್ನು ಪೈಲ್ಸ್‌ನಿಂದ ರಕ್ತಸ್ರಾವಕ್ಕೆ ಒಳಗಾಗಿರುವವರು ತ್ಯಜಿಸಬೇಕು