ನಿಮ್ಮ ಬ್ಯಾಂಕ್ ಖಾತೆಯಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇದ್ದರೆ ಈ ನಿಯಮ ತಿಳಿದುಕೊಳ್ಳಿ!

ನೀವು ಉಳಿತಾಯ ಬ್ಯಾಂಕ್ ಖಾತೆ (Savings Bank Account) ಹೊಂದಿದ್ದೀರಾ? ಈ ಉಳಿತಾಯ ಖಾತೆಯಲ್ಲಿ ಠೇವಣಿ (Deposit) ಇಟ್ಟಿರುವ ಮೊತ್ತ ಎಷ್ಟು ಸುರಕ್ಷಿತವಾಗಿದೆ ಎಂಬುದು ನಿಮಗೆ ಗೊತ್ತಾ? ಯಾವುದೋ ಕಾರಣದಿಂದ ಬ್ಯಾಂಕ್ ಸಮಸ್ಯೆಗೆ ಸಿಲುಕಿದರೆ ಅಥವಾ ಬ್ಯಾಂಕ್ ಮುಳುಗಿದರೆ ನಿಮ್ಮ ಹಣ ಎಷ್ಟು ಸುರಕ್ಷಿತ? ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) 2020 ರ ಬಜೆಟ್‌ನಲ್ಲಿ ಅಂತಹ ಒಂದು ನಿಯಮವನ್ನು ಬದಲಾಯಿಸಿದ್ದು, 5 ಲಕ್ಷದವರೆಗಿನ ನಿಮ್ಮ ಬ್ಯಾಂಕ್ ಠೇವಣಿ ಸುರಕ್ಷಿತವಾಗಿದೆ. ಇದೀಗ ಈ ನಿಯಮಕ್ಕೆ ಸಂಪುಟದ ಒಪ್ಪಿಗೆಯೂ ಸಿಕ್ಕಿದೆ. ಆದರೆ, ಬ್ಯಾಂಕ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಠೇವಣಿ ಇದ್ದರೆ ಹೇಗೆ? ನಮ್ಮ ಖಾತೆಯಲ್ಲಿ 5 ಲಕ್ಷ ರೂಪಾಯಿಗಿಂತ ಹೆಚ್ಚು ಹಣವನ್ನು ಏಕೆ ಇಡಬಾರದು? ನೋಡೋಣ ಬನ್ನಿ.

ಕ್ಯಾಬಿನೆಟ್ ನಿರ್ಧಾರ:ಬ್ಯಾಂಕ್ ಗ್ರಾಹಕರ (Bank Customers) ಹಿತದೃಷ್ಟಿಯಿಂದ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಒಂದುವೇಳೆ ನೀವು ಠೇವಣಿ (Deposit) ಇಟ್ತ ಬ್ಯಾಂಕ್ ಆರ್ಥಿಕ ತೊಂದರೆಗೀಡಾದರೆ, ಮುಚ್ಚಿಹೋದರೆ ಗ್ರಾಹಕರು ಮೂರು ತಿಂಗಳೊಳಗೆ (90 ದಿನಗಳು) ಠೇವಣಿ ವಿಮೆ ಕ್ಲೈಮ್ ಪಡೆಯಬಹುದು. ಬ್ಯಾಂಕಿನ ಮೇಲೆ ನಿಷೇಧ ಹೇರಿದ್ದರೆ, ಡಿಐಸಿಜಿಸಿ (DICGC) ಕಾನೂನಿನಡಿಯಲ್ಲಿ ಗ್ರಾಹಕರು 90 ದಿನಗಳಲ್ಲಿ 5 ಲಕ್ಷದವರೆಗೆ ಹಿಂಪಡೆಯಲು ಸಾಧ್ಯವಾಗುತ್ತದೆ.

ಇದಕ್ಕಾಗಿ ಸರ್ಕಾರವು ಠೇವಣಿ ವಿಮೆ (Deposit insurance) ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (Credit Guarantee Corporation) (ಡಿಐಸಿಜಿಸಿ) ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದೆ. 2020 ರಲ್ಲಿ, ಸರ್ಕಾರವು ಠೇವಣಿಗಳ ಮೇಲಿನ ವಿಮಾ ರಕ್ಷಣೆಯನ್ನು (ಡಿಐಸಿಜಿಸಿ ವಿಮಾ ಪ್ರೀಮಿಯಂ) 5 ಲಕ್ಷಕ್ಕೆ ಹೆಚ್ಚಿಸಿತು.

2020 ರ ಬಜೆಟ್‌ ನಿಯಮದಲ್ಲಿ ಬದಲಾಗಿದ್ಡೇನು?ವಾಸ್ತವವಾಗಿ, 2020 ರ ಬಜೆಟ್‌ನಲ್ಲಿ ಸರ್ಕಾರವು ಬ್ಯಾಂಕ್ ಗ್ಯಾರಂಟಿ ಮೊತ್ತ (Bank Guarantee Amount) ವನ್ನು 5 ಲಕ್ಷಕ್ಕೆ ಹೆಚ್ಚಿಸಿತ್ತು. ಮೊದಲು ಬ್ಯಾಂಕ್ ಗ್ಯಾರಂಟಿ ಕೇವಲ 1 ಲಕ್ಷ ರೂ. ಇತ್ತು. ಈ ನಿಯಮವನ್ನು 4 ಫೆಬ್ರವರಿ 2020 ರಿಂದ ಜಾರಿಗೆ ತರಲಾಗಿದೆ. ಈಗ ಬ್ಯಾಂಕ್ ಕುಸಿದರೆ, ನಿಮ್ಮ ಖಾತೆಯಲ್ಲಿ ಠೇವಣಿ ಮಾಡಿದ 5 ಲಕ್ಷ ರೂ. ಬ್ಯಾಂಕ್ ನಿಮಗೆ 5 ಲಕ್ಷ ರೂಪಾಯಿ ಹಿಂತಿರುಗಿಸುತ್ತದೆ. ಈ ಮೊತ್ತವನ್ನು ರಿಸರ್ವ್ ಬ್ಯಾಂಕಿನ (Reserve Bank) ಸಂಪೂರ್ಣ ಸ್ವಾಮ್ಯದ ಘಟಕವಾದ ಠೇವಣಿ ವಿಮೆ (Deposit insurance) ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (Credit Guarantee Corporation) (ಡಿಐಸಿಜಿಸಿ) ನೀಡುತ್ತದೆ.

ನಿಮ್ಮ ಹಣವನ್ನು ನೀವು ಹೇಗೆ ಉಳಿಸಬಹುದು?

ತಜ್ಞರ ಪ್ರಕಾರ ಕಳೆದ 50 ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಬ್ಯಾಂಕ್ ದಿವಾಳಿಯಾಗಿಲ್ಲ. ಆದಾಗ್ಯೂ, ನಿಮ್ಮ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಇರಿಸುವ ಮೂಲಕ ಈ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ಠೇವಣಿ ವಿಮಾ ರಕ್ಷಣೆ (Deposit insurance coverage) ಯನ್ನು 1 ಲಕ್ಷದಿಂದ 5 ಲಕ್ಷಕ್ಕೆ ಈಗಾಗಲೇ ಹೆಚ್ಚಿಸಲಾಗಿದೆ. ಸುಮಾರು 27 ವರ್ಷಗಳ ನಂತರ ಅಂದರೆ 1993 ರ ನಂತರ ಮೊದಲ ಬಾರಿಗೆ ಈ ಬದಲಾವಣೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯೂ ಇದೆ. ನಿಮ್ಮ ಹಣವನ್ನು ಸೇಫ್ ಮಾಡಿಕೊಳ್ಳಲು, ಬ್ಯಾಂಕುಗಳು ಈಗ ಪ್ರತಿ 100 ರೂ.ಗೆ 12 ಪೈಸೆಯ ಪ್ರೀಮಿಯಂ ಪಾವತಿಸುತ್ತವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group