ನರ ದೌರ್ಬಲ್ಯ ಸಮಸ್ಯೆಗೆ ಸಲಹೆಗಳು!

ಇತ್ತೀಚಿನ ದಿನಗಳಲ್ಲಿ ನರಗಳ ದೌರ್ಬಲ್ಯ ಅಥವಾ ನರಗಳ ಬಲಹೀನತೆ ಸಮಸ್ಯೆಯಿಂದ ಹೆಚ್ಚಿನ ಜನರು ಬಳಲುತ್ತಿದ್ದಾರೆ. ಉದಾಹರಣೆಗೆ ಕೈ ಕಾಲುಗಳು ಜೋಮು ಹಿಡಿಯುವುದು, ಸಣ್ಣ ಪುಟ್ಟ ಕೆಲಸ ಮಾಡಿದರು ಸಾಕು, ತುಂಬಾನೇ ಸುಸ್ತು ಆಗುವುದು, ಇದೆಲ್ಲಾ ನರ ದೌರ್ಬಲ್ಯ ಕೆಲವು ಲಕ್ಷಣಗಳು. ಬನ್ನಿ ಈ ಸಮಸ್ಯೆಯನ್ನು ಕೆಲವೊಂದು ಯೋಗಾಸನಗಳ ಮೂಲಕ ನಿಯಂತ್ರಿಸಬಹುದು.

#ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ(Raisins Benefits) ಮತ್ತು ಜೇನುತುಪ್ಪವನ್ನು ಒಟ್ಟಿಗೆ ಸೇವಿಸಿದರೆ ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯ ಟೀ-ಕಾಫಿ ಕುಡಿಯುವ ಬದಲು ನೀವು ಒಣದ್ರಾಕ್ಷಿ ಮತ್ತು ಜೇನುತುಪ್ಪವನ್ನು ಸೇವಿಸಿದರೆ, ಈ ಮನೆಮದ್ದು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

#ಪ್ರತಿ ದಿನ ಹಾಲು ಸೇವಿಸುವುದು ನರಗಳ ದೌರ್ಬಲ್ಯ ಇರುವವರಿಗೆ ಒಳ್ಳೆಯದು ಹಾಲಿನಲ್ಲಿರುವ ಕ್ಯಾಲ್ಸಿಯಂ ನಿಂದ ನರಗಳು ಸ್ವಲ್ಪ ಮಟ್ಟಿಗೆ ಬಲವಾಗುತ್ತವೆ ಖಾಲಿ ಹಾಲಿಗಿಂತ ಸ್ವಲ್ಪ ಅರಿಶಿನ ಹಾಕಿ ಸೇವಿಸಿದರೆ ತುಂಬಾ ಒಳ್ಳೆಯದು. ಉಗುರು ಬೆಚ್ಚಗಿನ ನೀರಲ್ಲಿ ಸ್ವಲ್ಪ ಅರಿಶಿನ, ಸ್ವಲ್ಪ ಜೇನು, ಸ್ವಲ್ಪ ನಿಂಬೆರಸ ಬೆರೆಸಿ ಕುಡಿಯುವುದು ನರಗಳ ದೌರ್ಬಲ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿ ನಿತ್ಯ ವಾಕಿಂಗ್ ಹಾಗೂ ಜಾಗಿಂಗ್ ಮಾಡುವುದು ಉತ್ತಮ ಇದರಿಂದಾಗಿ ರಕ್ತ ಪರಿಚಲನೆ ಉತ್ತಮಗೊಂಡು ನರಗಳ ಬಲಹೀನತೆ ಕ್ರಮೇಣ ಕಡಿಮೆಯಾಗುತ್ತದೆ. ಒಂದು ವೇಳೆ ಈ ತರಹದ ನರಗಳ ಬಲಹೀನತೆ ಇದ್ದಲ್ಲಿ ಇದನ್ನು ಪ್ರಯೋಗಿಸಿ ನೋಡಿ ಇದನ್ನು ಕ್ರಮೇಣ ಉಪಯೋಗಿಸುವುದರಿಂದ ನರಗಳ ಬಲಹೀನತೆಗೆ ಪರಿಹಾರ ಸಿಗುತ್ತದೆ.

#ಪೊಟ್ಯಾಶಿಯಂ ಅಂಶದ ಕೊರತೆ ಉಂಟಾದರೆ, ಆಗಾಗ ಕಾಲುಗಳ ಸೆಳೆತ ಕಂಡು ಬರಬಹುದು. ಕಾಲುಗಳ ಸೆಳೆತಕ್ಕೆ ಪರಿಹಾರ ಬೇಕು ಎಂದರೆ ಅತಿ ಹೆಚ್ಚಿನ ಪೊಟ್ಯಾಶಿಯಂ ಅಂಶ ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಆ್ಯಪಲ್ ಸೈಡರ್ ವಿನೇಗರ್.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group