ಕಣ್ಣಿನ ಕೆಳಭಾಗದಲ್ಲಿ ಕಪ್ಪಗಾಗುವ ಸಮಸ್ಯಗೆ ಮನೆಮದ್ದು!

ಸೌಂದರ್ಯವನ್ನು ಹೆಚ್ಚಿಸುವುದು ಆಕೆಯ ಕಣ್ಣು. ಆದರೆ ಅತಿಯಾದ ಒತ್ತಡ ಹಾಗೂ ನಿದ್ರಾಹೀನತೆಯ ತೊಂದರೆ ಇದ್ದಾಗ ಕಣ್ಣಿನ ಕೆಳಭಾಗದಲ್ಲಿ ಕಪ್ಪಗಾಗುತ್ತದೆ. ಇದನ್ನು ಡಾರ್ಕ್ ಸರ್ಕಲ್ ಎನ್ನುತ್ತಾರೆ. ಹಲವು ಬಾರಿ ಇದು ಬಹಳ ಕೆಟ್ಟದಾಗಿ ಕಾಣುತ್ತದೆ. ಹಾಗಾಗಿಯೇ ಮಹಿಳೆಯರು ಇದನ್ನು ಹೋಗಲಾಡಿಸಲು ಹಲವು ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಆದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಇಂದು ನಾವು ನಿಮಗೆ ಕೆಲವು ಮನೆ ಮದ್ದುಗಳನ್ನು ತಿಳಿಸುತ್ತಿದ್ದೇವೆ. ಇವುಗಳನ್ನು ಬಳಸಿ ಕೇವಲ ಎರಡೇ ದಿನದಲ್ಲಿ ನೀವು ನಿಮ್ಮ ಕಣ್ಣ ಸುತ್ತಲಿನ ಡಾರ್ಕ್ ಸರ್ಕಲ್ ತೆಗೆದುಹಾಕಬಹುದು.

#ಸರ್ವಾಂಗಾಸನ: ಸರ್ವಾಂಗಾಸನವು ನಿಮ್ಮ ಚರ್ಮದಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಇದರಿಂದಾಗಿ ಚರ್ಮವು ಹೊಳೆಯುವ ಮತ್ತು ಸುಂದರವಾಗಿ ಕಾಣುತ್ತದೆ. ಇದು ಕಣ್ಣುಗಳ ಕೆಳಗೆ ಕಪ್ಪು ವಲಯ ಹೋಗಲಾಡಿಸಲು ಪ್ರಯೋಜನಕಾರಿಯಾಗಿದೆ.

#ಕೋಲ್ಡ್‌ ಕಂಪ್ರೆಸ್‌ಕೋಲ್ಡ್‌ ಕಂಪ್ರೆಸ್ ಕಣ್ಣಿಗೆ ತುಂಬಾ ಒಳ್ಳೆಯದು. ಕೋಲ್ಡ್‌ ಕಂಪ್ರೆಸ್‌ ಅನ್ನು 10 ನಿಮಿಷ ಕಣ್ಣಿನ ಮೇಲಿಡಿ. ಐಸ್‌ ಪ್ಯಾಕ್‌ ಅನ್ನು ಮಸ್ಲಿನ್‌ ಬಟ್ಟೆಯಲ್ಲಿ ಸುತ್ತಿ ಕಣ್ಣಿನ ಮೇಲೆ ಇಡಿ. ಈ ರೀತಿ ಮಲಗುವ ಮುನ್ನಇಡಿ ಅಥವಾ ರಿಲ್ಯಾಕ್ಸ್ ಆಗಿದ್ದಾಗ ಕಣ್ಣಿನ ಮೇಲಿಡಿ.

# ನೈಸರ್ಗಿಕವಾಗಿ ಸರಿಪಡಿಸಲು ಸೌತೆಕಾಯಿಯ ಚೂರುಗಳನ್ನು ಬಳಸಬಹುದು. ತಾಜಾ ಸೌತೆಕಾಯಿಯನ್ನು ದಪ್ಪ ಹೋಳುಗಳಾಗಿ ಕತ್ತರಿಸಿ ನಂತರ ೩೦ ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿ ತಣ್ಣಗಾಗಲು ಬಿಡಿ. ನಿಮ್ಮ ಕಣ್ಣುಗಳ ಮೇಲೆ ೧೦ ನಿಮಿಷಗಳ ಕಾಲ ಹೋಳುಗಳನ್ನು ಇಟ್ಟು, ನಂತರ ನಿಮ್ಮ ಕಣ್ಣಿನ ಪ್ರದೇಶಗಳಿಂದ ತೆಗೆದು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಈ ವಿಧಾನವನ್ನು ದಿನಕ್ಕೆ ೨ ಬಾರಿ ಪ್ರಯತ್ನಿಸಿ.

#ನಿದ್ದೆಡಾರ್ಕ್‌ ಸರ್ಕಲ್ ಹೋಗಲಾಡಿಸಲು ನಿದ್ದೆ ತುಂಬಾನೇ ಮುಖ್ಯವಾಗಿದೆ. ನೀವು ಮೇಲೆ ಹೇಳಿರುವ ಟಿಪ್ಸ್‌ ಎಲ್ಲಾ ಟ್ರೈ ಮಾಡಿ ಸರಿಯಾಗಿ ನಿದ್ದೆ ಮಾಡಿಲ್ಲ ಎಂದಾದರೆ ಏನೂ ಪ್ರಯೋಜನವಿಲ್ಲ. ದಿನಾ ಸರಿಯಾದ ಸಮಯಕ್ಕೆ ನಿದ್ದೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. 6 ಗಂಟೆ ನಿದ್ದೆ ಅವಶ್ಯಕವಾಗಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group