ಅತಿಯಾದ ಸೀನುವ ಸಮಸ್ಯೆಗೆ ಮನೆಮದ್ದು!

ಸೀನುವ ಸಮಸ್ಯೆ ಅತಿಯಾದರೆ ಕಷ್ಟ. ಅಲ್ಲದೆ, ಅಲರ್ಜಿ ಸಮಸ್ಯೆಯಿಂದಲೂ ಸೀನು ಬರಬಹುದು. ಹೀಗಾಗಿ, ಸೀನು ತೊಂದರೆಗೆ ಮುಕ್ತಿ ನೀಡಲು ಹಲವು ಮನೆ ಮದ್ದುಗಳಿವೆ. ಬನ್ನಿ, ಇವುಗಳನ್ನು ನೋಡೋಣ!

#ಪುದೀನ ಬಳಕೆ: ನಿರಂತರವಾಗಿ ಸೀನುವುದನ್ನು ತಪ್ಪಿಸಲು, ನೀವು ಪುದೀನ ಎಣ್ಣೆಯನ್ನು ಬಳಸಬಹುದು. ಇದಕ್ಕಾಗಿ, ಎರಡು ಗ್ಲಾಸ್ ನೀರನ್ನು ತೆಗೆದುಕೊಂಡು ಅದನ್ನು ಬಾಣಲೆಯಲ್ಲಿ ಕುದಿಸಿ. ಇದಕ್ಕೆ ಕೆಲವು ಹನಿ ಪುದೀನ ಎಣ್ಣೆಯನ್ನು ಸೇರಿಸಿ. ಇದರ ನಂತರ, ಈ ನೀರಿನಿಂದ ಐದು ನಿಮಿಷಗಳ ಕಾಲ ಹಬೆ ತೆಗೆದುಕೊಳ್ಳಿ.

#ಶುಂಠಿಶುಂಠಿಯಲ್ಲಿ ಔಷಧೀಯ ಗುಣಗಳಿದ್ದು, ಶೀತವನ್ನು ಗುಣಪಡಿಸಬಹುದಾಗಿದೆ. 2 ಟೇಬಲ್‌ಸ್ಪೂನ್‌ ಜೇನುತುಪ್ಪಕ್ಕೆ 3 ಅಂಗುಲದಷ್ಟು ಶುಂಠಿ ಚೂರನ್ನು ಕಟ್‌ ಮಾಡಿಕೊಂಡು ಮಿಶ್ರಣ ಮಾಡಿ. ಬಳಿಕ ಅದನ್ನು ಕುದಿಯುತ್ತಿರುಇವ ಬಿಸಿ ನೀರಿಗೆ ಹಾಕಿ, ಪ್ರತಿದಿನ ಮಲಗುವ ಮುನ್ನ ಕುಡಿದರೆ ತಕ್ಷಣ ಪರಿಹಾರ ನೀಡುತ್ತದೆ.

#ದಾಲ್ಚಿನ್ನಿ ಮತ್ತು ಜೇನುತುಪ್ಪ: ದಾಲ್ಚಿನ್ನಿ ಮತ್ತು ಜೇನುತುಪ್ಪದೊಂದಿಗೆ ನೀವು ಸೀನುವಿಕೆಗೆ ಚಿಕಿತ್ಸೆ ಮಾಡಬಹುದು. ಇದಕ್ಕಾಗಿ, ಒಂದು ಲೋಟ ನೀರು ಬಿಸಿ ಮಾಡಿ. ಇದಕ್ಕೆ ಅರ್ಧ ಟೀಸ್ಪೂನ್ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಮತ್ತು ಒಂದು ಟೀಸ್ಪೂನ್ ಜೇನುತುಪ್ಪವನ್ನು ಮಿಶ್ರಣ ಮಾಡಿ. ಈ ನೀರನ್ನು ನಿಧಾನವಾಗಿ ಕುಡಿಯಿರಿ.

#ತುಳಸಿಭಾರತದ ಪವಿತ್ರ ಸಸ್ಯವಾಗಿರುವ ತುಳಸಿಯಿಂದ ಅನೇಕ ಆರೋಗ್ಯದ ಸಮಸ್ಯೆಗಳಿಂದಲೂ ಮುಕ್ತಿ ಪಡೆದುಕೊಳ್ಳಬಹುದು. ತುಳಸಿ ಎಲೆಗಳಲ್ಲಿರುವ ಪ್ರಬಲ ಬ್ಯಾಕ್ಟೀರಿಯ ನಿರೋಧಕ ಗುಣಗಳಿಂದ ಹಲವು ಅಪಾಯಕಾರಿ ಸೋಂಕುಗಳ ವಿರುದ್ಧ ಹೋರಾಡಬಹುದು. 3-4 ತುಳಸಿ ಎಲೆಗಳೊಂದಿಗೆ ಒಂದು ಕಪ್ ನೀರನ್ನು ಕುದಿಸಿ. ಈ ಮಿಶ್ರಣವನ್ನು ಮಲಗುವ ಮುನ್ನ ಸತತವಾಗಿ 2-3 ದಿನ ಸೇವಿಸಿದರೆ ವ್ಯತ್ಯಾಸ ಕಾಣಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group