ಸೊಪ್ಪುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಈ ಸಲಹೆ!

ಆಹಾರ ಪದಾರ್ಥಗಳಾಗಿ ಬಳಸುವ ಸೊಪ್ಪುಗಳು ಒಣಗಿದರೆ ಅಡುಗೆಗೆ ನಿಷ್ಪ್ರಯೋಜಕವಾಗುತ್ತವೆ. ಹಾಗಿದ್ದರೆ ಅವುಗಳನ್ನು ದೀರ್ಘಕಾಲ ತಾಜಾವಾಗಿಡಲು ಹೀಗೆ ಮಾಡಿ..
#ಹಸಿರು ಸೊಪ್ಪು ತರಕಾರಿಗಳಾದ ಕೊತ್ತಂಬರಿ, ಪಾಲಕ್, ಮೆಂತ್ಯೆ ಮುಂತಾದವುಗಳನ್ನು ತಾಜಾವಾಗಿ ಇಡಬೇಕಾದರೆ, ಕರಗಿದ ಬೆಣ್ಣೆ ಅಥವಾ ಎಣ್ಣೆ ಜೊತೆ ಐಸ್ ಟ್ರೇನಲ್ಲಿ ಸಂಗ್ರಹಿಸಿ. ವಾರಗಳವರೆಗೆ ಅವುಗಳನ್ನು ತಾಜಾವಾಗಿರಿಸುತ್ತದೆ.
#ಬೇರು ಸಮೇತ ಇರುವ ಕೊತ್ತಂಬರಿ ಸೊಪ್ಪನ್ನು ಮಾರುಕಟ್ಟೆಯಿಂದ ತನ್ನಿ. ಬೇರುಗಳನ್ನು ಮಾತ್ರ ನೀರಿನಲ್ಲಿ ಇರುವಂತೆ ಇರಿಸಿ. ಕಿಟಕಿಯ ಬಳಿ ಇಡಿ. ಎರಡು ದಿನಗಳ ನಂತರವೂ ಅವು ತಾಜಾವಾಗಿರುತ್ತದೆ. ಅಥವಾ ಕೊತ್ತುಂಬರಿ ಸೊಪ್ಪಿನ ಬೇರನ್ನು ಅರಿಶಿನ ನೀರಿನಲ್ಲಿ 30 ನಿಮಿಷಗಳ ಕಾಲ ಇರಿಸಿ.
#ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಟ್ಯಾಂಗರಿನ್, ನಿಂಬೆಹಣ್ಣುಗಳು ಇತರ ಹಣ್ಣುಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಆದರೆ ನೀವು ಅವುಗಳ ಬಾಳಿಕೆಯನ್ನು ಇನ್ನಷ್ಟು ದೀರ್ಘಗೊಳಿಸಬಹುದು. ಪ್ಲಾಸ್ಟಿಕ್ ಚೀಲವೊಂದರಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿ, ಅವುಗಳನ್ನು ಕತ್ತಲೆ ಕೋಣೆಯಲ್ಲಿ ಇರಿಸಿ, ಹೀಗೆ ಮಾಡೊದರೆ ಒಂದು ವಾರದವರೆಗೆ ಉಳಿಯುತ್ತದೆ.
#ನೀವು ತರುವ ಸೊಪ್ಪನ್ನು ತೊಳೆದು ಇಡಬೇಡಿ. ಗಾಳಿಯಾಡದ ಸ್ಥಳದಲ್ಲಿ ಬುಟ್ಟಿಯಲ್ಲಿ ಇಡಿ. ಅಡುಗೆ ಮಾಡುವ ಮೊದಲು ಅದನ್ನು ತೊಳೆಯಿರಿ.
#ಒಂದು ವೇಳೆ ನೀವು ಫ್ರಿಡ್ಜ್ನಲ್ಲಿಡುವುದಾದರೆ ಸೊಪ್ಪನ್ನು ಅತಿಯಾದ ಫ್ರೀಜ್ನಲ್ಲಿಡಬೇಡಿ
#ಪುದೀನ ಎಲೆಗಳನ್ನು, ಕೊತ್ತುಂಬರಿ ಸೊಪ್ಪನ್ನು ನೆಲದ ಮೇಲೆ ಇರಿಸಬೇಡಿ. ಪೇಪರ್ ಸುತ್ತಿ ಇಡಿ.
#ಕೊತ್ತಂಬರಿ ಸೊಪ್ಪನ್ನು ತಾಜಾವಾಗಿಡಲು ಅದರ ಬೇರುಗಳನ್ನು ಒಂದು ನೀರು ತುಂಬಿರುವ ಪಾತ್ರೆಯಲ್ಲಿ ಹಾಕಿ ಫ್ರಿಜ್ ನಲ್ಲಿಡಿ. ನೀರನ್ನು ಆಗಾಗ ಬದಲಾಯಿಸುತ್ತೀರಿ. ಇದರಿಂದ ಕೊತ್ತಂಬರಿ ಸೊಪ್ಪು ತಾಜಾವಾಗಿರುತ್ತದೆ.