ತೊಂಡೆಕಾಯಿ ಸೇವನೆಯಿಂದ ಸಿಗುವ ಆರೋಗ್ಯ ಲಾಭಗಳು!

ಬಳ್ಳಿಯಲ್ಲಿ ಬೆಳೆಯುವಂತಹ ತೊಂಡೆಕಾಯಿಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇಷ್ಟು ಮಾತ್ರವಲ್ಲದೆ ಇದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ತೊಂಡೆಕಾಯಿ ಮಾತ್ರವಲ್ಲದೆ ಇದರ ಎಲೆಗಳು ಕೂಡ ಮೊಡವೆ, ಮಧುಮೇಹ, ಪಾದಗಳು ಮತ್ತು ಅಂಗೈಯಲ್ಲಿರುವ ಉಷ್ಣತೆ, ಋತುಚಕ್ರದ ನೋವು, ಯೋನಿ ನೋವು ಇತ್ಯಾದಿಗಳನ್ನು ನಿವಾರಣೆ ಮಾಡುವುದು.

#ಅಲ್ಲದೆ ಮಲಬದ್ಧತೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ರೆ, ತೊಂಡೆಕಾಯಿ ಹೆಚ್ಚಾಗಿ ಸೇವಿಸಿ. ಏಕೆಂದರೆ ತೊಂಡೆಕಾಯಿಯ ಬೀಜಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಮಲ ವಿರ್ಸಜನೆ ಸಮಸ್ಯೆಯನ್ನು ದೂರ ಮಾಡುತ್ತದೆ.

#ತೊಂಡೆಕಾಯಿಗಳಿಂದ ಕೇವಲ ಮೇಲಿನ ಸಣ್ಣ ಪುಟ್ಟ ಉಪಯೋಗಗಳು ಮಾತ್ರ ಲಭ್ಯವಾಗುತ್ತವೆ ಎಂದು ನೀವು ತಿಳಿದುಕೊಂಡಿದ್ದರೆ, ಖಂಡಿತ ಅದು ತಪ್ಪು. ಗುಣಪಡಿಸಲಾಗದ ಕ್ಯಾನ್ಸರ್ ರೋಗದ ವಿರುದ್ಧ ಹೊರಡುವಂತಹ ಶಕ್ತಿ ತೊಂಡೆಕಾಯಿಗಳಿಗೆ ಇದೆ ಎಂದು ಕಂಡು ಬಂದಿದೆ.ತೊಂಡೆಕಾಯಿ ಪಲ್ಯ, ಸಾರು, ಸಾಗು ಇತ್ಯಾದಿಗಳನ್ನು ನಿತ್ಯ ನಿಯಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಂಡರೆ ಮನುಷ್ಯನನ್ನು ಕ್ಯಾನ್ಸರ್ ಮಹಾಮಾರಿಯ ಹಾವಳಿಯಿಂದ ತಪ್ಪಿಸುತ್ತದೆ ಎಂದು ನಂಬಲಾಗಿದೆ.

#ಸುಸ್ತು ಕಡಿಮೆ ಮಾಡುತ್ತದೆ. ದೇಹದಲ್ಲಿ ಕಬ್ಬಿಣದಾಂಶ ಕಡಿಮೆ ಆದಾಗ ಸುಸ್ತು ಬೇಗ ಆಗುತ್ತದೆ. ತೊಂಡೆಕಾಯಿಯಲ್ಲಿ ಕಬ್ಬಿಣದಾಂಶ ಸಮೃದ್ಧವಾಗಿದೆ. ಹಾಗಾಗಿ ಫಿಟ್ನೆಸ್ (Fitness) ಬೇಕಾದರೆ ನಿಮ್ಮ ಡಯಟ್ ನಲ್ಲಿ ತೊಂಡೆಕಾಯಿ ಇರಲಿ.

#ಮಧುಮೇಹಕ್ಕೆತೊಂಡೆಕಾಯಿ ಎಲೆಗಳ ರಸ ತೆಗೆದುಕೊಂಡು 20-30 ಮಿ.ಲೀ.ನಷ್ಟು ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಕುಡಿಯಿರಿ. ಹೀಗೆ ಮಾಡಿದರೆ ಮೂರು ತಿಂಗಳಲ್ಲಿ ಸಕ್ಕರೆ ಮಟ್ಟವು ತಗ್ಗುವುದು. ಈ ಎಲೆಗಳಲ್ಲಿರುವ ಅಂಶವು ಕಿಣ್ವ ಗ್ಲೂಕೋಸ್ -6-ಫಾಸ್ಫಟೇಸ್ ಅನ್ನು ಪ್ರತಿಬಂಧಿಸುತ್ತವೆ. ಗ್ಲೂಕೋಸ್ -6-ಫಾಸ್ಫಟೇಸ್ ಯಕೃತ್ ನ ಪ್ರಮುಖ ಕಿಣ್ವವಾಗಿದ್ದು, ಇದು ಸಕ್ಕರೆಯ ಚಯಾಪಚಯವನ್ನು ನಿಯಂತ್ರಿಸುವುದು. ಇದರಿಂದಾಗಿ ಮಧುಮೇಹಿಗಳಿಗೆ ಇದನ್ನು ಸಲಹೆ ಮಾಡಲಾಗಿದೆ.

#ದಿನನಿತ್ಯ ತೊಂಡೆಕಾಯಿ ಸೇವಿಸುವುದರಿಂದ ಕಫದ ಸಮಸ್ಯೆಯನ್ನು ದೂರ ಮಾಡಬಹುದು. ಅಲ್ಲದೆ ಮಲಬದ್ಧತೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ರೆ, ತೊಂಡೆಕಾಯಿ ಹೆಚ್ಚಾಗಿ ಸೇವಿಸಿ. ಏಕೆಂದರೆ ತೊಂಡೆಕಾಯಿಯ ಬೀಜಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಮಲ ವಿರ್ಸಜನೆ ಸಮಸ್ಯೆಯನ್ನು ದೂರ ಮಾಡುತ್ತದೆ. ಹಸಿ ತೊಂಡೆಕಾಯಿಯನ್ನು ಸೇವಿಸುವುದರಿಂದ ನಿಮ್ಮ ಒಣಗಿರುವ ಚರ್ಮಗಳು ಮೃದುವಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group