ಕಡಲೆ ಹಿಟ್ಟನ್ನು ಮುಖದ ಚರ್ಮದ ಆರೈಕೆಗೆ ಹೀಗೆ ಬಳಸಿ ನೋಡಿ!

ರಾಸಾಯನಿಕಗಳ ಪ್ರಭಾವದಿಂದ ಮುಖ ಸ್ವಚ್ಛವಾದಂತೆ ಅನ್ನಿಸಿದರೂ ಇದು ಪರಿಪೂರ್ಣ ಸುರಕ್ಷಿತ ಎನ್ನುವಂತಿಲ್ಲ. ಏಕೆಂದರೆ ಚರ್ಮಕ್ಕೆ ಅತಿ ಚಿಕ್ಕ ಪ್ರಮಾಣದಲ್ಲಿಯಾದರೂ ಒಂದಾದರೂ ಅಡ್ಡ ಪರಿಣಾಮ ಇದ್ದೇ ಇರುತ್ತದೆ. ಇದರ ಬದಲಿಗೆ ಸಂಪೂರ್ಣವಾಗಿ ಸುರಕ್ಷಿತವಾದ, ಸುಲಭವಾಗಿ ಲಭ್ಯವಿರುವ ಕಡಲೆ ಹಿಟ್ಟನ್ನು ಮುಖದ ಚರ್ಮದ ಆರೈಕೆಗೆ ಬಳಸಿದರೆ ರಾಸಾಯನಿಕಗಳಿಗಿಂತ ಉತ್ತಮ ಪರಿಣಾಮವನ್ನೂ ಪಡೆಯಬಹುದು ಹಾಗೂ ರಾಸಾಯನಿಕಗಳಿಂದ ಉಂಟಾಗಬಹುದಾಗಿದ್ದ ಅಲರ್ಜಿ, ತುರಿಕೆ, ಉರಿಗಳಿಂದ ತಪ್ಪಿಸಿಕೊಳ್ಳಲೂಬಹುದು.

#ಮುಖದಲ್ಲಿ ಎಣ್ಣೆಯ ಅಂಶ ಇರುವ ಚರ್ಮಕ್ಕೆ ಕಡಲೆಹಿಟ್ಟು ತುಂಬಾ ಪ್ರಯೋಜನಕಾರಿಯಾಗಿದೆ. ಸ್ವಲ್ಪ ಕಡಲೆ ಹಿಟ್ಟನ್ನು ತೆಗೆದುಕೊಂಡು ರೋಜ್ ವಾಟರ್ ಜೊತೆ ಮಿಕ್ಸ್ ಮಾಡಿ ಇದನ್ನು ಎರಡು ದಿನಕ್ಕೆ ಒಮ್ಮೆ ಹಚ್ಚಿಕೊಳ್ಳುವುದರಿಂದ ಮುಖದಲ್ಲಿ ಎಣ್ಣೆಯಂಶ ನಿವಾರಣೆಯಾಗುತ್ತದೆ. ಈ ರೀತಿಯಾಗಿ ಕೆಲವು ದಿನಗಳ ಕಾಲ ಮಾಡುವುದರಿಂದ ಉತ್ತಮ ಪರಿಣಾಮವನ್ನು ಕಂಡುಕೊಳ್ಳಬಹುದು. ಅಷ್ಟೇ ಅಲ್ಲದೆ ನಮ್ಮ ಮುಖದ ಮೇಲೆ ಆಗಿರುವಂತಹ ಮೊಡವೆಗಳ ನಿವಾರಣೆ ಮಾಡಲು ಕೂಡ ಕಡಲೆಹಿಟ್ಟು ತುಂಬಾ ಪ್ರಯೋಜನಕಾರಿಯಾಗಿದೆ

#ಚರ್ಮದ ಮೇಲಿರುವ ಕಪ್ಪು ಚುಕ್ಕೆಗಳು, ಸೂರ್ಯನ ಕಿರಣಗಳಿಂದ ಹಾನಿಗೊಳಗಾದ ಚರ್ಮ, ಸುಕ್ಕುಗಳನ್ನು ಹೋಗಲಾಡಿಸಲು ಈ ಕಡಲೆ ಹಿಟ್ಟು ಸಹಾಯ ಮಾಡುತ್ತದೆ. ವಾರಕ್ಕೆ 3 ಬಾರಿ ಕಡಲೆ ಹಿಟ್ಟಿನ ಪೇಸ್ಟ್​ ಹಚ್ಚುವುದು ಉತ್ತಮ. ಒಣ ತ್ವಚೆಗೆ: ಒಣ ತ್ವಚೆಗೆ ಕಡಲೆ ಹಿಟ್ಟು ಉತ್ತಮ ಪರಿಹಾರವಾಗಿದೆ. ಕಡಲೆ ಹಿಟ್ಟಿನ ಜೊತೆ ಹಾಲು, ಜೇನುತುಪ್ಪ ಮತ್ತು ಚಿಟಿಕೆ ಅರಿಶಿನವನ್ನು ಸೇರಿಸಿ ಪೇಸ್ಟ್ ಮಾಡಿ.

#ಮಾಯಿಶ್ಚರೈಸ ಮಾಡಲು 1 ಬಾಳೆಹಣ್ಣನ್ನು ಮ್ಯಾಶ್ ಮಾಡಿ, ಅದರಲ್ಲಿ 1 ಚಮಚ ಕಡಲೆ ಹಿಟ್ಟು ಮತ್ತು 1 ಚಮಚ ಜೇನು ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ.

#ನೋಡಲು ಕಪ್ಪು ಕಾಣುವವರು ತಮ್ಮ ಚರ್ಮವನ್ನು ಬೆಳ್ಳಗಾಗಿಸಿಕೊಳ್ಳಲು ಮತ್ತು ಬೇಡದ ಭಾಗಗಳಲ್ಲಿ ಕೂದಲನ್ನು ನಿವಾರಣೆ ಮಾಡಿಕೊಳ್ಳಲು ಕಡಲೆಹಿಟ್ಟನ್ನು ಬಳಕೆ ಮಾಡಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group