ಸೊಳ್ಳೆಗಳ ಕಾಟದಿಂದ ಪಾರಾಗಲು ಹೀಗೆ ಮಾಡಿ!

ಮಳೆಗಾಲ ಬಂತೆಂದರೆ ಸೊಳ್ಳೆಗಳ (Mosquito) ಕಾಟ ಹೆಚ್ಚಾಗಿರುತ್ತದೆ. ಆದರೆ ಬೇಸಿಗೆಯ ಸಮಯದಲ್ಲಿಯೂ ಬೆಳಿಗ್ಗೆ, ಸಂಜೆ ಸೊಳ್ಳೆಗಳು ಹೆಚ್ಚಾಗಿರುತ್ತವೆ. ಸೊಳ್ಳೆ ಕಚ್ಚಿದರೆ ಡೆಂಗ್ಯೂ (Dengue), ಮಲೇರಿಯಾ, ಚಿಕುನ್ ಗುನ್ಯಾದಂಥಹ ಅನೇಕ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಮಾತ್ರವಲ್ಲ ಸೊಳ್ಳೆ ಕಚ್ಚಿದ ಸ್ಥಳದಲ್ಲಿ ತುರಿಕೆ ಕಾಣಿಸಿಕೊಂಡು ಚರ್ಮದ ಅಲರ್ಜಿ ಬಾದಿಸುತ್ತದೆ. ಮನೆಯ ಸುತ್ತ ಮುತ್ತ ಕೆಲವೊಂದು ಸಸ್ಯಗಳನ್ನು ನೆಡುವ ಮೂಲಕ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು.
#ಮನೆ ವಾತಾವರಣ ಶುದ್ಧವಾಗಿರಲಿ. ಕಸ ಕಡ್ಡಿ, ಪೇಪರ್ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳಿಂದ ಮುಕ್ತವಾಗಿದ್ದಷ್ಟು ಸೊಳ್ಳೆಗೆ ಆಯಸ್ಸು ಕಡಿಮೆ. ಮಳೆ ನೀರು ಸುಲಭವಾಗಿ ಹೊರಗಿನ ಚರಂಡಿಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಆದಷ್ಟು ಆ ಜಾಗ ತಗ್ಗಾಗಿದ್ದು, ನೀರು ಸರಾಗವಾಗಿ ಹರಿದು ಹೋಗಲಿ.
#ಇನ್ನು ಹೆಚ್ಚಿನ ಸೊಳ್ಳೆಗಳು ಇದ್ದರೆ ತೆಂಗಿನ ಚಿಪ್ಪನ್ನು ಸ್ವಲ್ಪ ಹೊತ್ತು ಸ್ಟೋವ್ ಮೇಲೆ ಇಟ್ಟು ಅದು ಅರ್ಧ ಸುಟ್ಟಿದ ನಂತರ ಕರ್ಪೂರದಿಂದ ಬೆಂಕಿ ಹಚ್ಚಿದರೆ ಇನ್ನೂ ಹೆಚ್ಚಿನ ಸಮಯ ಹೊಗೆ ಇರುತ್ತದೆ. ಈ ರೀತಿ ಸುಲಭವಾದ ವಿಧಾನಗಳನ್ನು ಅನುಸರಿಸುವುದರಿಂದ ನಾವು ನಮ್ಮ ಮನೆಯ ಸುತ್ತ ಮುತ್ತ ಮತ್ತು ನಮ್ಮ ಮನೆಯೊಳಗೆ ಸೊಳ್ಳೆಗಳು ಬರದಂತೆ ನೋಡಿಕೊಳ್ಳಬಹುದು
#ಒಳಗಿನ ನೀರಿರುವ ವಸ್ತುಗಳು ಮತ್ತು ಹೊರಗೆ ಸ್ವಿಮ್ಮಿಂಗ್ ಪೂಲ್ ಇದ್ದರೆ ಅದು ಶುದ್ಧವಾಗಿರುವಂತೆ ಎಚ್ಚರವಹಿಸಿ. ಆಗಾಗ್ಗೆ ಅದರ ನೀರನ್ನು ಬದಲಾಯಿಸುವುದನ್ನು ಮರೆಯಬೇಡಿ.
#ಸೊಳ್ಳೆಗಳ ಕಾಟ ರಾತ್ರಿ ಹೆಚ್ಚಾಗಿದ್ದಾಗ ಮಲಗುವ ಸಮಯದಲ್ಲಿ ಬೆಡ್ಶೀಟ್ ಅಥಾವ ಪಿಲ್ಲೋ ಗಳ ಮೇಲೆ ಒಂದೆರಡು ಹನಿ ಅಷ್ಟು ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ ಅನ್ನು ಹಾಕಿಕೊಂಡು ಮಲಗಿದರೆ ಇದರ ಸುವಾಸನೆಗೆ ನಿದ್ದೆ ಚೆನ್ನಾಗಿ ಬರುವುದು ಹಾಗೂ ಇದರ ಸುವಾಸನೆ ಸೊಳ್ಳೆಗಳಿಗೆ ಆಗದೆ ಇರುವುದರಿಂದ ಸೊಳ್ಳೆಗಳು ಕೂಡ ಬರುವುದಿಲ್ಲ. ಲ್ಯಾವೆಂಡರ್ ಆಯಿಲ್ ನಮ್ಮ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು