ದೇಹದಲ್ಲಿ ಐರನ್ ಕೊರತೆ ನೀಗಿಸಲು ನೆರವಾಗುವ ಆಹಾರಗಳು!

ರಕ್ತಹೀನತೆಗೆ ಸಮಾನಾರ್ಥಕವಾದ ಕಬ್ಬಿಣದ ಕೊರತೆ ದೇಹದಲ್ಲಿ ಆರೋಗ್ಯಕರ ಕೆಂಪು ರಕ್ತ ಕಣಗಳ ಕೊರತೆಯಿಂದ ಉಂಟಾಗುವ ಒಂದು ಸ್ಥಿತಿಯಾಗಿದೆ. ಕಬ್ಬಿಣದ ಅಂಶದ ಕೊರತೆ ಎದುರಾದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಇದನ್ನು ಆರಂಭದಲ್ಲೇ ಸರಿಪಡಿಸಿಕೊಳ್ಳುವುದು ಒಳ್ಳೆಯದು. ತಲೆ ಸುತ್ತುವುದು, ಆಯಾಸ, ರಕ್ತದ ಕೊರತೆ ಇವೆಲ್ಲವೂ ಕಭ್ಭಿಣಾಂಶದ ಕೊರತೆಯಿಂದ ಉಂಟಾಗುತ್ತವೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಲು ಸೇವಿಸಲೇಬೇಕಾದ ಪ್ರಮುಖ ಆಹಾರಗಳು ಇವು.

ಪಾಲಕ್ : ಪಾಲಕ್ (Palak) ಹಸಿರು ಎಲೆಗಳ ತರಕಾರಿ. ಇದರಲ್ಲಿ ಹಿಮೋಗ್ಲೋಬಿನ್ (himoglobin) ಸಮೃದ್ಧವಾಗಿರುತ್ತದೆ. ಮಾತ್ರವಲ್ಲ, ವಿಟಮಿನ್ ಬಿ 6, ಎ, ಸಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೈಬರ್ ಇತ್ಯಾದಿಗಳು ಸಹ ಇದರಲ್ಲಿ ಕಂಡುಬರುತ್ತವೆ. ಐರನ್ ಕೊರತೆಯನ್ನು ನೀಗಿಸಲು, ನೀವು ಪಾಲಕ್ ಅನ್ನು ಸಲಾಡ್, ಸೂಪ್, ಜ್ಯೂಸ್ ಅಥವಾ ಪಲ್ಯ, ಸಾಂಬಾರ್ ರೂಪದಲ್ಲಿ ನಿಮ್ಮ ಆಹಾರದಲ್ಲಿ ಬಳಸಬಹುದು.

#ಕೋಳಿ: ಕೋಳಿ ಮಾಂಸ ಮತ್ತು ಮೊಟ್ಟೆಗಳಂತಹ ಕೋಳಿ ಉತ್ಪನ್ನಗಳು ಕಬ್ಬಿಣಾಂಶವನ್ನು ಹೊಂದಿದ್ದು, ಇದು ಜನರಲ್ಲಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

#ಸೋಯಾಬೀನ್ ಅನೇಕ ಪೌಷ್ಟಿಕ ಸತ್ವಗಳ ಆಗರ. ಇದರಲ್ಲಿ ಕೇವಲ ಕಬ್ಬಿಣದ ಅಂಶ ಮಾತ್ರವಲ್ಲದೆ ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಸೆಲೆನಿಯಮ್ ಅಂಶ ಕೂಡ ಸಾಕಷ್ಟಿದೆ. ಇದರಿಂದ ಹೃದಯದ ತೊಂದರೆ, ಕ್ಯಾನ್ಸರ್ ಮತ್ತು ಆಸ್ಟಿಯೋಪೋರೋಸಿಸ್ ಸಮಸ್ಯೆ ನಿವಾರಣೆ ಆಗುತ್ತದೆ.ಸದ್ಯಕ್ಕೆ ನಮಗೆ ಲಭ್ಯವಿರುವ ಆಹಾರ ಪದಾರ್ಥಗಳಲ್ಲಿ ಸಂಪೂರ್ಣ ಪ್ರೋಟಿನ್ ಅಂಶವನ್ನು ಹೊಂದಿರುವ ಏಕೈಕ ಸಸ್ಯಾಹಾರ ಎಂದರೆ ಅದು ಸೋಯಾಬೀನ್. ಅಂದರೆ ಸುಮಾರು ಎಂಟು ವಿವಿಧ ಬಗೆಯ ಎಸೆನ್ಸಿಯಲ್ ಅಮೈನೋ ಆಮ್ಲದ ಅಂಶಗಳನ್ನು ಸೋಯಾಬೀನ್ ಒಳಗೊಂಡಿದೆ ಎಂದು ಹೇಳುತ್ತಾರೆ.

#ಬೀಟ್ (ಬೀಟ್ರೂಟ್): ಮ್ಯಾಕ್ರೋಬಯೋಟಿಕ್ ಪೌಷ್ಟಿಕ ತಜ್ಞರು ಮತ್ತು ಆರೋಗ್ಯ ವಿಶ್ಲೇಷಕರಾದ ಶಿಲ್ಪಾ ಅರೋರಾ ಅವರ ಪ್ರಕಾರ, ನಮ್ಮ ದೇಹದಲ್ಲಿನ ಕಬ್ಬಿಣದ ಮಟ್ಟವನ್ನು ತುಂಬಲು ಬೀಟ್​ರೂಟ್​ ಅತ್ಯುತ್ತಮವಾಗಿದೆ. ಇದು ಕಬ್ಬಿಣ, ತಾಮ್ರ, ಪ್ರೋಟೀನ್, ಜೀವಸತ್ವಗಳು, ಕ್ಯಾಲ್ಸಿಯಂ, ಗಂಧಕ ಮುಂತಾದ ಖನಿಜಗಳಿಂದ ಕೂಡಿದ ಚಳಿಗಾಲದ ತರಕಾರಿ. ವಾಸ್ತವವಾಗಿ, ತರಕಾರಿಗಳಲ್ಲಿನ ವಿಟಮಿನ್ ಸಿ ಅಂಶವು ದೇಹದ ಕಬ್ಬಿಣದ ಸೆಲ್​ಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

#ಸಮಸ್ಯೆ ಇರುವ ವ್ಯಕ್ತಿಗಳು ಚಹಾ, ಕಾಫಿ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬಾರದು. ಇವುಗಳಲ್ಲಿ ಫೈಟಿಕ್ ಅಮ್ಲವು ಅಧಿಕ ಪ್ರಮಾಣದಲ್ಲಿ ಇರುತ್ತವೆ. ಫೈಟಿಕ್ ಆಮ್ಲ ಇರುವ ಆಹಾರ ಪದಾರ್ಥಗಳು ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತವೆ. ಆಗ ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶದ ಪೂರೈಕೆಗೆ ಅಡ್ಡಿ ಉಂಟಾಗುವುದು. ಹಾಗಾಗಿ ರಕ್ತ ಹೀನತೆ ಅಥವಾ ಕಬ್ಬಿಣಾಂಶದ ಕೊರತೆ ಇರುವವರು ಫೈಟಿಕ್ ಆಮ್ಲದ ಆಹಾರವನ್ನು ಸೇವಿಸಬಾರದು ಎಂದು ಸಲಹೆ ನೀಡಲಾಗುವುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group