ಕಿವಿ ಸೋರುವಿಕೆ ಸಮಸ್ಯೆಗೆ ಪರಿಹಾರ!

ಕಿವಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಾದ ಕಿವಿ ನೋವು, ಕಿವಿಯಲ್ಲಿ ಶಬ್ಧ ಬರುವುದು, ಕಿವಿ ಸೋರುವಿಕೆ ಸಮಸ್ಯೆಗಳಿಗೆ ಕಾರಣ ಕಿವಿಯ ಕುಗ್ಗಿಯನ್ನು ತೆಗೆಯದೆ ಇರುವುದು. ಸಾಮಾನ್ಯವಾಗಿ ಕಿವಿಯ ಕುಗ್ಗಿಯನ್ನು 3-6 ತಿಂಗಳಿಗೊಮ್ಮೆ ತೆಗೆಯುತ್ತಾರೆ ಆದರೆ ಕಿವಿಯ ಕುಗ್ಗಿಯನ್ನು ಪ್ರತಿದಿನ ಸ್ನಾನವಾದ ನಂತರ ಕಿವಿಯ ಕುಗ್ಗಿ ತೆಗೆಯಲು ಕಡ್ಡಿ ಸಿಗುತ್ತದೆ ಅದರಿಂದ ಎರಡು ಕಿವಿಯ ಕುಗ್ಗಿ ತೆಗೆದು ಹತ್ತಿಯ ಕಡ್ಡಿಯಿಂದ ಕ್ಲೀನ್ ಮಾಡಬೇಕು.
#ಬೆಳ್ಳುಳ್ಳಿ:ಬೆಳ್ಳುಳ್ಳಿ ಪ್ರಕೃತಿಯಲ್ಲಿ ಹೆಚ್ಚು ಆಂಟಿಮೈಕ್ರೊಬಿಯಲ್ ಮತ್ತು ನೈಸರ್ಗಿಕ ನೋವು ನಿವಾರಕ ಗುಣಗಳನ್ನು ಹೊಂದಿದ್ದು, ಇದು ಕಿವಿ ಸೋಂಕನ್ನು ನಿಗ್ರಹಿಸುವ ಅತ್ಯುತ್ತಮ ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ. ತಾಜಾ ಬೆಳ್ಳುಳ್ಳಿಯ 3-4 ಎಸಳನ್ನು ತೆಗೆದುಕೊಂಡು ನೀರಿನಲ್ಲಿ 5-7 ನಿಮಿಷಗಳ ಕಾಲ ಕುದಿಸಿ. ನಂತರ ಇದಕ್ಕೆ ಪುಡಿಮಾಡಿದ ಲವಂಗ ಮತ್ತು ಸ್ವಲ್ಪ ಉಪ್ಪು ಸೇರಿಸಿ. ಈಗ ಈ ಮಿಶ್ರಣವನ್ನು ಸ್ವಚ್ಛವಾದ ಬಟ್ಟೆಯಲ್ಲಿ ಹಾಕಿ ನೋವಿರುವ ಜಾಗದಲ್ಲಿ ಕಿವಿಯ ಮೇಲೆ ಇರಿಸಿ. ನೀವು ಬೆಳ್ಳುಳ್ಳಿ ಎಣ್ಣೆಯನ್ನು ಸಹ ತಯಾರಿಸಬಹುದು. ಹೇಗೆಂದರೆ ಬೆಳ್ಳುಳ್ಳಿಯ 2 ದೊಡ್ಡ ಎಸಳನ್ನು 1-2 ಚಮಚ ಎಳ್ಳೆಣ್ಣೆಯಲ್ಲಿ ಬೇಯಿಸಿ. ಬೆಳ್ಳುಳ್ಳಿ ಎಣ್ಣೆ ಇನ್ನೂ ಬೆಚ್ಚಗಿರುತ್ತದೆ, ಈ ಎಣ್ಣೆಯ 2-3 ಹನಿಗಳನ್ನು ಕಿವಿ ನೋವಿರುವ ಜಾಗದಲ್ಲಿ ಲೇಪಿಸಿ.
#ಸಣ್ಣ ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಕತ್ತರಿಸಿಕೊಳ್ಳಿ. ಮೈಕ್ರೋವೇವ್‌ನಲ್ಲಿ 2 ನಿಮಿಷಗಳಷ್ಟು ಕಾಲ ಬಿಸಿ ಮಾಡಿಕೊಳ್ಳಿ. ಅದು ತಣ್ಣಗಾದ ನಂತರ, ರಸವನ್ನು ಹಿಂಡಿ ತೆಗೆಯಿರಿ. ನೋವಿರುವ ಕಿವಿಗೆ 2-3 ಹನಿ ಹಾಕಿಕೊಳ್ಳಿ. ನಂತರ ಮತ್ತೊಂದು ಬದಿಗೆ ಮಲಗಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಕಿವಿಗೆ ಸರಿಯಾಗಿ ಮದ್ದು ತಲುಪುತ್ತದೆ. ಪರ್ಯಾಯವಾಗಿ, ಈರುಳ್ಳಿಯನ್ನು ಅರ್ಧ ಗಂಟೆಗಳ ಕಾಲ ಹುರಿದುಕೊಳ್ಳಿ. ನಂತರ ಎರಡು ಸಮಾನ ಭಾಗಗಳನ್ನಾಗಿ ಮಾಡಿಕೊಳ್ಳಿ. ಒಂದು ಭಾಗವನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿಕೊಳ್ಳಿ ನೋವಿರುವ ಕಿವಿಯ ಮೇಲ್ಭಾಗಕ್ಕೆ ಇದನ್ನು ಹಿಡಿದುಕೊಳ್ಳಿ. 10 ನಿಮಿಷಗಳ ನಂತರ ಇದೇ ವಿಧಾನವನ್ನು ಪುನರಾವರ್ತಿಸಿ.
#ತುಳಸಿ ಇದು ಹಲವಾರು ರೋಗಗಳಿಗೆ ರಾಮಬಾಣ. ಸಣ್ಣ ಕಿವಿ ಸೋಂಕನ್ನು ಗುಣಪಡಿಸಲು, ಕಿವಿ ನೋವನ್ನು ನಿವಾರಿಸಲು ತುಳಸಿ ಎಲೆಗಳನ್ನು ಬಳಸಬಹುದು. 4-5 ತುಳಸಿ ಎಲೆಗಳಿಂದ ರಸವನ್ನು ಹೊರತೆಗೆಯಿರಿ. ಈ ರಸವನ್ನು ಸೋಂಕಿತ ಕಿವಿಯ ಸುತ್ತಲೂ ನೇರವಾಗಿ ಹಚ್ಚಿ. ಇನ್ನೊಂದು ವಿಧಾನವೆಂದರೆ ಕೆಲವು ತುಳಸಿ ಎಲೆಗಳನ್ನು ಚೆನ್ನಾಗಿ ಒಣಗಿಸಿ ನಂತರ ಪುಡಿಮಾಡಿ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ. ಬೆಚ್ಚಗೆ ಮಾಡಿ. ಈಗ ಈ ತುಳಸಿ ಎಣ್ಣೆ ಮಿಶ್ರಣದಲ್ಲಿ ಹತ್ತಿ ಚೆಂಡನ್ನು ನೆನೆಸಿ ಹೊರಗಡೆ ಮತ್ತು ಕಿವಿಯೊಳಗೆ ಹಚ್ಚಿ. ಇದನ್ನು ದಿನಕ್ಕೆ ಎರಡು ಬಾರಿ ಮಾಡಿ.
#ಕಿವಿಯ ಸೋಂಕಿಗೆ ನಾವು ಮೇಲೆ ತಿಳಿಸಿರುವ ಚಿಕಿತ್ಸೆಯನ್ನು ಪಡೆದುಕೊಳ್ಳುವುದಕ್ಕಿಂತ ಮುಂಚೆ, ಅಥವಾ ಈ ವಿಧಾನವನ್ನು ಅನುಸರಿಸಿ ಕೂಡ ನಿಮ್ಮ ನೋವು ಮತ್ತು ಕಿವಿ ಸೋರಿಕೆ ನಿಯಂತ್ರಣಕ್ಕೆ ಬಾರದಿದ್ದಲ್ಲಿ ನೀವು ತಜ್ಞರನ್ನು ಕಾಣುವುದು ಅತ್ಯವಶ್ಯಕವಾಗಿದೆ. ಕಿವಿಯು ನಮ್ಮ ದೇಹದಲ್ಲಿರುವ ಸೂಕ್ಷ್ಮ ಅಂಗವಾಗಿರುವುದರಿಂದ ಇದರ ಬಗ್ಗೆ ನಿರ್ಲಕ್ಷ್ಯವನ್ನು ತಾಳುವುದು ಸರಿಯಲ್ಲ. ಕಿವಿಯು ನಮ್ಮ ದೇಹದ ಮುಖ್ಯ ಭಾಗವಾಗಿರುವುದರಿಂದ ಮತ್ತು ದೇಹದ ನಿಯಂತ್ರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಕಿವಿಯನ್ನು ಕುರಿತು ಹೆಚ್ಚು ಜಾಗ್ರತೆ ಮತ್ತು ಮುತುವರ್ಜಿಯನ್ನು ವಹಿಸುವುದು ಆವಶ್ಯಕವಾಗಿದೆ