ಕೂದಲಿಗೆ ಎಣ್ಣೆಯನ್ನು ಹಚ್ಚುವುದರಿಂದ ಮೃದು ಮತ್ತು ಕಾಂತಿಯುತ ಕೂದಲನ್ನು ಪಡೆಯಬಹುದು!

ತೆಂಗಿನಕಾಯಿ ಎಣ್ಣೆ ಬಳಸುವುದರರಿಂದ ದೇಹದಲ್ಲಿನ ಸತ್ತ ಚರ್ಮವನ್ನು ತೆಗೆದು ಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ. ಸೋರಿಯಾಸಿಸ್, ಡರ್ಮಟಿಟಿಸ್ ಮತ್ತು ಎಕ್ಸಿಮಾ, ಸುಟ್ಟ ಚರ್ಮಕ್ಕೆ ಉತ್ತಮವಾಗಿದೆ. ತೆಂಗಿನಕಾಯಿ ಎಣ್ಣೆಯಿಂದ ಸ್ಟ್ರೆಚ್ ಮಾರ್ಕ್ ಗಳು ಕೂಡ ಮಾಯವಾಗುತ್ತವೆ.ದಿನ ನಿತ್ಯ ಒಂದು ಚಿಟಿಕೆ ಎಣ್ಣೆಯನ್ನು ತುಟಿಗಳಿಗೆ ಹಚ್ಚುತ್ತಿದರೆ ತುಟಿ ಒಡೆಯುವ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ. ಕೂದಲು ಬೆಳೆಯುವುದಕ್ಕೆ ತೆಂಗಿನ ಎಣ್ಣೆ ಅತ್ಯಂತ ಸಹಕಾರಿಯಾಗಿದೆ, ತೆಂಗಿನ ಎಣ್ಣೆ ನಿಯಮಿತವಾಗಿ ಹಚ್ಚಿ ಮಸಾಜ್ ಮಾಡುವುದರಿಂದ ದೇಹದ ರಕ್ತ ಚಲನೆ ಹೆಚ್ಚಿಸುವುದರ ಜೊತೆಗೆ, ಕಳೆದುಹೋದ ಪೋಷಕಾಂಶಗಳನ್ನು ನೀಡುತ್ತದೆ.

#ಕೆಲವು ಜನರು ಕೂದಲು ತೊಳೆದ ಬಳಿಕ ಕೂಡ ತೈಲ ಹಚ್ಚಿಕೊಳ್ಳುವರು. ಆದರೆ ಹೀಗೆ ಮಾಡುವುದು ಸರಿಯಲ್ಲ. ಯಾಕೆಂದರೆ ಕೂದಲು ಧೂಳು ಮತ್ತು ಕಲುಷಿತ ವಾತಾವರಣದ ಕಣಗಳನ್ನು ಸೆಳೆಯಬಹುದು. ಮನೆಯಲ್ಲೇ ಇದ್ದರೆ ಆಗ ನೀವು ಕೂದಲಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳಬಹುದು. ಕೂದಲು ಬೆಳವಣಿಗೆ ಆಗಬೇಕಿದ್ದರೆ ಆಗ ನೀವು ತಲೆಬುರುಡೆ, ಕೂದಲಿನ ಬುಡ ಹಾಗೂ ಸಂಪೂರ್ಣ ಕೂದಲಿಗೆ ತೈಲ ಹಚ್ಚಿ. ತಲೆಬುರುಡೆಗೆ ತೈಲ ಹಚ್ಚುವ ಮೊದಲು ನೀವು ಸ್ವಲ್ಪ ಬಿಸಿ ಮಾಡಿ. ಆದರೆ ಪಿತ್ತ ಅಸಮತೋಲನ, ತಲೆನೋವು ಅಥವಾ ತಲೆಬುರುಡೆಯಲ್ಲಿ ದದ್ದು ಇದ್ದರೆ ಆಗ ನೀವು ತೈಲದ ಚಿಕಿತ್ಸೆ ಕಡೆಗಣಿಸಿ.

#ಕೂದಲಿಗೆ ಎಣ್ಣೆಯನ್ನು ಹಚ್ಚುವುದರಿಂದ ಮೃದು ಮತ್ತು ಕಾಂತಿಯುತ ಕೂದಲನ್ನು ಪಡೆಯಬಹುದು. ಅದರಲ್ಲಿ ಕೊಬ್ಬರಿ ಎಣ್ಣೆ ಅತಿ ಹೆಚ್ಚು ಉಪಯೋಗಕಾರಿ ಎನ್ನುತ್ತಾರೆ ವೈದ್ಯರು. ವಾರಕ್ಕೊಮ್ಮೆಯಾದರೂ ಕೊಬ್ಬರೆ ಎಣ್ಣೆಯನ್ನು ಕೂದಲಿನ ಬುಡದವರೆಗೆ ಹಚ್ಚಿ ಮಸಾಜ್​ ಮಾಡಿಕೊಳ್ಳಿ. ಇದು ಸೊಂಪಾದ ಕೂದಲನ್ನು ನಿಮಗೆ ನೀಡುತ್ತದೆ.

#ಕೂದಲಿನ ಬೆಳವಣಿಗೆಯು ಸರಿಯಾಗಿದ್ದ ವೇಳೆ, ತುದಿಗಳು ಸೀಳದೆ ಇರುವಾಗ, ನಯ ಹಾಗೂ ಕಾಂತಿಯುತ ಕೂದಲು, ಅಕಾಲಿಕ ಬಿಳಿಯಾಗುವಿಕೆ ಸಮಸ್ಯೆ ಇಲ್ಲದೆ ಇದ್ದರೆ ಆಗ ಕೂದಲಿನ ಗುಣಮಟ್ಟವು ಸುಧಾರಣೆ ಆಗುತ್ತಿದೆ ಎಂದು ಹೇಳಬಹುದು. ರಾತ್ರಿ ಮಲಗುವ ಮೊದಲು ಕೂದಲು ಮತ್ತು ತಲೆಬುರುಡೆಗೆ ಸರಿಯಾಗಿ ಎಣ್ಣೆ ಹಚ್ಚಿಕೊಳ್ಳಬೇಕು. ರಾತ್ರಿಯಿಡಿ ಹಾಗೆ ಬಿಡಬೇಕು ಮತ್ತು ಬೆಳಗ್ಗೆ ಎದ್ದು ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಕೂದಲು ತೊಳೆಯಬೇಕು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group