ಬೆನ್ನು ನೋವಿಗೆ ಸರಳ ಮನೆಮದ್ದು!

ಬೆನ್ನು ನೋವು ಎನ್ನುವುದು ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಆರೋಗ್ಯ ಸಮಸ್ಯೆ ಎಂದು ಹೇಳಬಹುದು. ನಮ್ಮ ಜೀವನ ಶೈಲಿ ಹಾಗೂ ಆರೋಗ್ಯ ಪದ್ಧತಿಯಿಂದಾಗಿ ಇಂದು ಶೇ. 84ರಷ್ಟು ಜನರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಆರೋಗ್ಯ ಸಮಸ್ಯೆಯು ಇದ್ದಕ್ಕಿದ್ದಂತೆ ಕಾಡಬಹುದು. ಇಲ್ಲವೇ ನಿಧಾನವಾಗಿ ಪುನರಾವರ್ತಿತ ಚಲನೆಯೊಂದಿಗೆ ಸಂಭವಿಸಬಹುದು.ಬೆನ್ನು ನೋವು ಸಾಮಾನ್ಯವಾದ ಸಮಸ್ಯೆ ಎನಿಸಬಹುದು. ಆದರೆ ಇದರ ಆಗಮನವು ದಿನನಿತ್ಯದ ನಮ್ಮ ಯೋಜನೆಗಳನ್ನು ಕುಂಠಿತಗೊಳಿಸುವುದು. ಹಾಗಾಗಿ ಈ ಆರೋಗ್ಯ ಸಮಸ್ಯೆಯನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸುವಂತೆಯೂ ಇಲ್ಲ. ಆರಂಭದಲ್ಲಿ ಸಣ್ಣ ಆರೋಗ್ಯ ಸಮಸ್ಯೆ ಎನಿಸುತ್ತದೆಯಾದರೂ ಕಾಲಕ್ರಮೇಣ ಇನ್ನಿತರ ಆರೋಗ್ಯ ಸಮಸ್ಯೆಗಳೊಂದಿಗೆ ಉಲ್ಭಣಗೊಳ್ಳುವುದು.ಹಾಗಾಗಿಯೇ ಇಂದು ಬೆನ್ನು ನೋವಿನಲ್ಲೂ ವಿವಿಧ ಬಗೆಯನ್ನು ಕಾಣಬಹುದು.
#ಶುಂಠಿಯ ಚುರನ್ನು ನೀರಿಗೆ ಸೇರಿಸಿ 30 ನಿಮಿಷ ಕುದಿಸಬೇಕು ಇದರ ನಂತರ ಅದನ್ನು ಸೋಸಿ ತಣ್ಣಗಾಗಲು ಬಿಡಬೇಕು ನಂತರ ಅದನ್ನು ಸೇವಿಸುವುದು ಸೂಕ್ತ. ಸಾಮಾನ್ಯ ಕಾರಣಗಳಿಂದ ಕಾಣಿಸಿಕೊಳ್ಳುವ ಬೆನ್ನುನೋವಿಗೆ ಮನೆಯಲ್ಲೇ ಸೂಕ್ತ ಆರೈಕೆ ಮಾಡುವುದರ ಮೂಲಕ ಸಮಸ್ಯೆಗಳನ್ನು ನಾವು ನಿಯಂತ್ರಣದಲ್ಲಿ ಇಡಬಹುದು ಇಷ್ಟೆಲ್ಲ ಆರೈಕೆಗಳನ್ನು ಮಾಡಿದರು ಸಹ ನಮಗೆ ಬೆನ್ನುನೋವು ಕಡಿಮೆ ಆಗುತ್ತಿಲ್ಲ ಎಂದರೆ ವೈದ್ಯರನ್ನು ಭೇಟಿ ಮಾಡುವುದು ತುಂಬಾ ಸೂಕ್ತ.
#ಬೆನ್ನು ನೋವು ಬಂದಾಗ ವಿಶ್ರಾಂತಿ ಪಡೆಯಿರಿ. ಬೆನ್ನು ನೋವು ಬಂದಾಗ ಬೆನ್ನಿನ ಮೇಲೆ ಬಿಸಿ ನೀರಿನ ಶಾಖವನ್ನು ತೆಗೆದುಕೊಂಡರೆ ಬೆನ್ನು ನೋವು ಕಡಿಮೆ ಆಗುತ್ತದೆ. ಬೆನ್ನು ನೋವು ಇದ್ದಾಗ ಹೆಚ್ಚು ಕುಳಿತುಕೊಂಡು ಕೆಲಸ ಮಾಡುವುದು ಒಳ್ಳೆಯದಲ್ಲ ಹಾಗೆ ಕುಳಿತು ಕೆಲಸ ಮಾಡಲೇಬೇಕು ಎಂದರೆ ಬೆನ್ನಿಗೆ ಏನಾದರೂ ಒತ್ತು ಕೊಟ್ಟುಕೊಂಡು ಅಂದರೆ ದಿಂಬು ಇಲ್ಲ ಇನ್ನೇನಾದರೂ ಗ್ರಿಪ್ ಇಟ್ಟುಕೊಂಡು ಬೆನ್ನು ನೋವು ಬರದ ಹಾಗೆ ಕುಳಿತುಕೊಳ್ಳುವುದು ಒಳ್ಳೆಯದು. ಬೆನ್ನು ನೋವು ಬಂದಾಗ ರಾತ್ರಿಯ ಸಮಯದಲ್ಲಿ ವಿಕ್ಸ್ ಅನ್ನು ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿ ಬೆಳಿಗ್ಗೆ ಬಿಸಿ ನೀರನ್ನು ಬೆನ್ನಿಗೆ ಹಾಕಿದರೆ ಬೆನ್ನು ನೋವು ಕಡಿಮೆ ಆಗುತ್ತದೆ. ಹಾಗಾಗಿ ಬೆನ್ನು ನೋವು ಬಂದಾಗ ಆದಷ್ಟು ಮಾತ್ರೆಗಳ ಸೇವನೆ ಮಾಡುವುದನ್ನು ಬಿಟ್ಟು ವಿಶ್ರಾಂತಿ ಪಡೆಯುವುದು ಒಳ್ಳೆಯದು.
#ನಿಯಮಿತವಾಗಿ ವ್ಯಾಯಾಮ ಮಾಡುವುದು, ಸರಿಯಾದ ಆಹಾರ ತಿನ್ನುವುದು ಮತ್ತು ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಕುಳಿತುಕೊಳ್ಳದೇ ಗಂಟೆಗೆ ಒಂದು ಬಾರಿಯಾದರೂ ಆ ಜಾಗದಿಂದ ಎದ್ದು ಓಡಾಡುವುದು ಇತ್ಯಾದಿಗಳನ್ನು ಮಾಡಬೇಕು. ಆಹಾರದ ವಿಷಯದಲ್ಲಿ, ತಜ್ಞರು ಬೆನ್ನು ನೋವನ್ನು ನಿವಾರಿಸಲು ಅರಿಶಿನ ಶಿಫಾರಸು ಮಾಡುತ್ತಾರೆ.
#ತೆಂಗಿನ ಎಣ್ಣೆ (Coconut Oil) ಮತ್ತು ಕರ್ಪೂರ : ಬೆನ್ನು ನೋವನ್ನು ಕಡಿಮೆ ಮಾಡಲು ಪುರುಷರು ತೆಂಗಿನ ಎಣ್ಣೆ ಮತ್ತು ಕರ್ಪೂರವನ್ನು ಸಹ ಬಳಸಬಹುದು. ಒಂದು ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಅದರಲ್ಲಿ ಕರ್ಪೂರವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವು ತಣ್ಣಗಾದ ನಂತರ ಸೊಂಟವನ್ನು ವಾರಕ್ಕೆ 2 ರಿಂದ 3 ಬಾರಿ ಮಸಾಜ್ ಮಾಡಿ. ಈ ಮಿಶ್ರಣವು ದೇಹಕ್ಕೆ ಉಷ್ಣತೆಯನ್ನು ನೀಡುತ್ತದೆ ಮತ್ತು ಬೆನ್ನು ನೋವನ್ನು ಹೋಗಲಾಡಿಸುತ್ತದೆ.
#ಒಂದು ಬಕೆಟ್ ನಲ್ಲಿ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ನೀವು ಸ್ನಾನ ಮಾಡುವ ಸಂದರ್ಭದಲ್ಲಿ ಅದಕ್ಕೆ ಕೆಲವು ಹನಿಗಳಷ್ಟು ನೀಲಗಿರಿ ಎಣ್ಣೆಯನ್ನು ಹಾಕಿ.ಈ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ನರಮಂಡಲ ಶಾಂತವಾಗುತ್ತದೆ ಮತ್ತು ಉರಿಯೂತ ಕಡಿಮೆಯಾಗುವುದರ ಜೊತೆಗೆ ನೋವು ನಿವಾರಣೆಯಾಗುತ್ತದೆ.