ಎದೆ ಉರಿ ಸಮಸ್ಯೆಗೆ ಕೆಲವೊಂದು ಪರಿಹಾರ!

ಎದೆ ಉರಿ ಉಂಟಾಗಲು ನಾನಾ ಕಾರಣಗಳಿವೆ. ಕೆಲವೊಮ್ಮೆ ನಾವು ಸೇವಿಸುವ ಆಹಾರಗಳಿಂದ ಎದೆ ಉರಿ ಉಂಟಾದರೆ ಇನ್ನೂ ಕೆಲವೊಮ್ಮೆ ನಮ್ಮ ಜೀವನಶೈಲಿ ಕೂಡಾ ಕಾರಣವಾಗಿರುತ್ತದೆ.

ಕೆಲವರಿಗೆ ಅವಲಕ್ಕಿ ತಿಂದರೆ ತುಂಬಾ ಎದೆ ಉರಿ ಕಾಣಿಸಿಕೊಳ್ಳುತ್ತದೆ. ಮತ್ತೆ ಕೆಲವರಿಗೆ ಉಪ್ಪಿಟ್ಟು ತಿಂದರೆ ಎದೆ ಉರಿಯುತ್ತದೆ. ಎದೆ ಉರಿ ಸಮಸ್ಯೆ ಇರುವವರಿಗೆ ಎಲ್ಲಾ ಬಗೆಯ ಆಹಾರಗಳನ್ನು ತಿನ್ನಲು ಸಾಧ್ಯವಿಲ್ಲ. ಗ್ಯಾಸ್ ಉತ್ಪತ್ತಿ ಮಾಡುವ ಆಹಾರಗಳು ಎದೆ ಉರಿ ಬರುವಂತೆ ಮಾಡಿದರೆ, ಈ ಕೆಳಗಿನ ಆಹಾರಗಳು ಎದೆ ಉರಿಯನ್ನು ಕಡಿಮೆ ಮಾಡುತ್ತವೆ:

#ಹಾಲು:ಹಸಿ ಹಾಲನ್ನು ಕುಡಿದರೆ ಎದೆ ಉರಿ, ಹೊಟ್ಟೆ ಉರಿ ಕಡಿಮೆಯಾಗುವುದು ಬರೀ ಹಾಲು ಕುಡಿಯಲು ಇಷ್ಟವಿಲ್ಲದವರು ಅದಕ್ಕೆ ಸ್ವಲ್ಪ ಜೇನು ಹಾಕಿ ಕುಡಿಯಬಹುದು.

#ಸ್ವಲ್ಪ ಸ್ವಲ್ಪ ತಿನ್ನುವುದನ್ನು ರೂಢಿಸಿಕೊಳ್ಳಿ:ಒಂದೇ ಬಾರಿಗೆ ಅತಿಯಾಗಿ ಮತ್ತು ಹೆಚ್ಚು ಪ್ರಮಾಣದಲ್ಲಿ ತಿನ್ನುವುದು ಅನ್ನನಾಳದಿಂದ ಹೊಟ್ಟೆಯನ್ನು ಬೇರ್ಪಡಿಸುವ ಸ್ಪಿಂಕ್ಟರ್ (ಬ್ಲಾಕರ್) ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಸ್ಪಿಂಕ್ಟರ್ ತೆರೆಯುವ ಸಾಧ್ಯತೆಯನ್ನು ಹೆಚ್ಚು ಹೆಚ್ಚಿಸುತ್ತದೆ.ಮತ್ತು ಆಸಿಡ್ ರಿಫ್ಲಕ್ಸ್ ಹರಿವು ಮೇಲಕ್ಕೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ಒಂದೇ ಬಾರಿ ಹೆಚ್ಚು ತಿನ್ನುವ ಬದಲು ಕಡಿಮೆ ಪ್ರಮಾಣದಲ್ಲಿ ತಿನ್ನಿ. ಉದಾಹರಣೆಗೆ, ಮೂರು ಬಾರಿ ತಿನ್ನುವುದಕ್ಕಿಂತ ಐದು ಬಾರಿ ಸಣ್ಣ ಪ್ರಮಾಣದಲ್ಲಿ ತಿನ್ನುವುದು ಉತ್ತಮ.

#ನೆಲ್ಲಿಕಾಯಿ ಪುಡಿಯನ್ನು ಬಳಸಿ ನೀವು ಈ ಸಮಸ್ಯೆಯನ್ನು ತೊಡೆದುಹಾಕಬಹುದು. ಇದನ್ನು ಬಳಸಿದ ನಂತರ ಮೊದಲ ಬಾರಿಗೆ ಪರಿಣಾಮವು ಗೋಚರಿಸುತ್ತದೆ. ಹೊಟ್ಟೆಯ ಸಮಸ್ಯೆಯಾಗಿರಬಹುದು ಅಥವಾ ಎದೆಯುರಿಯಾಗಿರಬಹುದು, ನೆಲ್ಲಿಕಾಯಿ ಪುಡಿ ಈ ಎರಡೂ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಇದು ಎದೆ ಉರಿಯಿಂದ ತ್ವರಿತ ಪರಿಹಾರವನ್ನು ನೀಡುವುದರಿಂದ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಆಮ್ಲಾ ಹಣ್ಣು ಔಷಧೀಯ ಗುಣಗಳಿಂದ ಕೂಡಿದೆ ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಇದನ್ನು ಪ್ರತಿ ಋತುವಿನಲ್ಲೂ ಬಳಸಬಹುದು. ಇದನ್ನು ತಿನ್ನುವುದರಿಂದ, ದೇಹದಲ್ಲಿರುವ ಹೆಚ್ಚಿನ ವಿಷಕಾರಿ ವಸ್ತುಗಳು ತೆಗೆದುಹಾಕಲ್ಪಡುತ್ತವೆ ಮತ್ತು ಕೆಲವೇ ಕ್ಷಣಗಳಲ್ಲಿ ಪರಿಹಾರ ನೀಡುತ್ತದೆ.

#ಸಕ್ಕರೆ ರಹಿತ ಗಮ್ ಅನ್ನು ಜಗಿಯುವುರಿಂದ ಇದು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಲಾಲಾರಸವು ಆಹಾರವನ್ನುನುಂಗಲು ಸಹಾಯ ಮಾಡುತ್ತದೆ. ಹೀಗಾಗಿ ಆಮ್ಲ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಎದೆಯುರಿ ಸಮಸ್ಯೆಯನ್ನು ಪರಿಹರಿಸುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group