ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಈ ಸಮಸ್ಯೆಗಳು ದೂರವಾಗುತ್ತವೆ!

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ (Indian Gooseberry) (ಆಮ್ಲಾ) ತಿನ್ನುವುದು ಅಥವಾ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆ ಪ್ರಯೋಜನೆಗಳು ಏನು ಎಂಬುದರ ಮಾಹಿತಿ ಇಲ್ಲಿದೆ.
#ಬೆಟ್ಟದ ನೆಲ್ಲಿಕಾಯಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ಫ್ಲೇವನಾಯ್ಡ್‌ಗಳು ಮತ್ತು ಆಂಥೋಸಯಾನಿನ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
#ಆರೋಗ್ಯ ತಜ್ಞರ ಪ್ರಕಾರ ಚಳಿಗಾಲದ ಸಮಯದಲ್ಲಿ ನಿಮ್ಮ ಶೀತ, ಕೆಮ್ಮು, ಜ್ವರ, ನೆಗಡಿ, ಬಾಯಿ ಹುಣ್ಣು ಇತ್ಯಾದಿಗಳ ಸಮಸ್ಯೆಗೆ ಅತ್ಯಂತ ಸುಲಭವಾಗಿ ಮನೆ ಮದ್ದಿನ ಮೂಲಕ ಪರಿಹಾರ ಮಾಡಿಕೊಳ್ಳಬೇಕು ಎಂದರೆ 2 ಟೀ ಚಮಚ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ನೊಂದಿಗೆ ಅಷ್ಟೇ ಪ್ರಮಾಣದ ಹಸಿ ಜೇನು ತುಪ್ಪವನ್ನು ಸೇರಿಸಿ ಪ್ರತಿ ದಿನವೂ ಸೇವನೆ ಮಾಡಿ. ಶೀತ ಮತ್ತು ಕೆಮ್ಮಿನ ಸಮಸ್ಯೆಗಳು ಬಹಳ ಬೇಗ ನಿಮ್ಮಿಂದ ದೂರವಾಗುತ್ತವೆ.
#ಮೂತ್ರದಲ್ಲಿ ರಕ್ತ ಹೋಗುತ್ತಿದ್ದರೆ ನೆಲ್ಲಿಚೆಟ್ಟಿನ ಕಷಾಯಕ್ಕೆ ಸಕ್ಕರೆ ಬೆರೆಸಿ 3 ಬಾರಿ ಕುಡಿಯುವುದರಿಂದ ರಕ್ತ ಹೋಗುವುದು ನಿಂತು ಹೋಗುತ್ತದೆ.
#ತಾಜಾ ನೆಲ್ಲಿಕಾಯಿ ತಿನ್ನಲು ಚಟ್ನಿ ಬಳಸಿ. ಕೆಲವರಿಗೆ ಆಮ್ಲಾ ಚಟ್ನಿ ತುಂಬಾ ಇಷ್ಟ. ತಿಳಿ ಹುಳಿ ಚಟ್ನಿ ಆಹಾರದ ರುಚಿ ಹೆಚ್ಚಿಸುತ್ತದೆ. ನೀವು ಯಾವುದೇ ರೀತಿಯಲ್ಲಿ ಆಮ್ಲಾವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
#ಒಣಗಿದ ನೆಲ್ಲಿಕಾಯಿಯನ್ನು ತೆಂಗಿನೆಣ್ಣೆಯಲ್ಲಿ ಬಿಸಿ ಮಾಡಿ ಆ ಎಣ್ಣೆಯನ್ನು ತಲೆಗೆ ಮಸಾಜ್ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ.