ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪಾರಾಗಲು ಕೆಲವು ಸಲಹೆ!

ಸಾಮಾನ್ಯವಾಗಿ ಆಲೂಗಡ್ಡೆ ಬದನೆಕಾಯಿ, ಕಡ್ಲೆಕಾಳು ಇಲ್ಲ ಕಾಬೂಲ್ ಕಡಲೆ ಹೆಚ್ಚಿನ ಜನರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುತ್ತವೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಾಲ್ಕು ಜನರ ಮುಂದೆ ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ದೈಹಿಕ ತೊಂದರೆಗಿಂತ ಗ್ಯಾಸ್ ಹೊರ ಹೋದಾಗ ಅನುಭವಿಸುವ ಮುಜುಗರವೇ ಹೆಚ್ಚು ನಾಚಿಕೆ ಮತ್ತು ತೊಂದರೆ ಉಂಟು ಮಾಡುತ್ತೆ ಅಲ್ವಾ… ಹಾಗಿದ್ರೆ ಈ ಸರಳ ಟಿಪ್ಸ್ಗಳನ್ನು ಪಾಲಿಸಿ ನೋಡಿ..
#ಗ್ಯಾಸ್ಟ್ರಿಕ್ ಅಥವಾ ಗ್ಯಾಸ್ ಸಮಸ್ಯೆಗೆ ಜೀರಿಗೆ ನೀರು ಕುಡಿಯುವುದು ಉತ್ತಮ ಮನೆಮದ್ದು. ಜೀರಾ ಅಥವಾ ಜೀರಿಗೆ ಜೀವಾಣು ಗ್ರಂಥಿಗಳನ್ನು ಉತ್ತೇಜಿಸುವ ಸಾರಭೂತ ತೈಲಗಳನ್ನು ಒಳಗೊಂಡಿರುತ್ತದೆ. ಇದು ಆಹಾರದ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೆಚ್ಚುವರಿ ಅನಿಲದ ರಚನೆಯನ್ನು ತಡೆಯುತ್ತದೆ ಎಂದು ಎಂದು ತಜ್ಞರು ಹೇಳುತ್ತಾರೆ.
#ಹೊಟ್ಟೆಗೆ ಶಮನ ನೀಡಲು ಶುಂಠಿ ತುಂಬಾ ಪರಿಣಾಮಕಾರಿ. ಶುಂಠಿ ಮತ್ತು ಈರುಳ್ಳಿ ರಸವನ್ನು ಸಮ ಪ್ರಮಾಣದಲ್ಲಿ ಸೇರಿಸಿಕೊಂಡು ಪ್ರತಿನಿತ್ಯ ಸೇವಿಸಿದರೆ ಇದರಿಂದ ಉರಿಯೂತ, ವಾಕರಿಕೆ ಮತ್ತು ಹೊಟ್ಟೆಯ ಕಿರಿಕಿರಿ ಕಡಿಮೆಯಾಗುವುದು.
#ಪ್ರತಿನಿತ್ಯ ಉಪಾಹಾರಕ್ಕೆ ಓಟ್ ಮೀಲ್ ಜತೆಗೆ ಜೇನುತುಪ್ಪ ಬೆರೆಸಿಕೊಂಡು ತಿಂದರೆ ತೀವ್ರ ಜಠರದುರಿ ಮತ್ತು ಅಲ್ಸರ್ ಗೆ ಒಳ್ಳೆಯದು.
#ಅಜ್ವಾಯಿನ್ ನೀರು : ನೀವು ಗ್ಯಾಸ್ಟ್ರಿಕ್ ಸಮಸ್ಯೆ ಹೊಂದಿದ್ದರೆ, ಮೊದಲು ಉಪ್ಪು ಮತ್ತು ಅಜ್ವಾಯಿನ್ ತೆಗೆದುಕೊಳ್ಳಿ. ಅಜ್ವೈನ್ ಬೀಜಗಳು ಥೈಮೋಲ್ ಎಂಬ ಸಂಯುಕ್ತವನ್ನು ಹೊಂದಿರುತ್ತವೆ. ಇದು ಗ್ಯಾಸ್ಟ್ರಿಕ್ ರಸವನ್ನು ಸ್ರವಿಸುತ್ತದೆ. ಅಜ್ವೈನ್ ತಿನ್ನುವುದರಿಂದ ಜೀರ್ಣಕ್ರಿಯೆ ವೇಗ ಹೆಚ್ಚುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ನೀಡುತ್ತೆ.