ಬಿಸಿ ನೀರು ಕುಡಿಯುವುದರಿಂದಲೂ ಸಿಗುತ್ತೆ ಹಲವು ಲಾಭ!

ಬಿಸಿ ನೀರು ನೀವು ದಿನನಿತ್ಯ ಕುಡಿಯುವುದರಿಂದ ನಿಮ್ಮ ದೇಹದಲ್ಲಿರುವ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಬಹಳ ಸಹಾಯ ಮಾಡುತ್ತದೆ. ಬಿಸಿ ನೀರು ದೇಹದ ತಾಪಮಾನವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಅದರ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಇದು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
#ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದ ತಾಪಮಾನ ಹೆಚ್ಚಾಗುತ್ತದೆ ಮತ್ತು ನಿಮ್ಮ ದೇಹದಲ್ಲಿ ಬೆವರು ಬರಲು ಪ್ರಾರಂಭವಾಗುತ್ತದೆ.
#ಮಲಬದ್ಧತೆ ನಿವಾರಿಸುತ್ತದೆ:ಬಿಸಿ ನೀರನ್ನು ನೀವು ದೀರ್ಘಕಾಲದವರೆಗೆ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಮಲಬದ್ಧತೆಗೆ ಸಹ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುವುದು. ಹೊಟ್ಟೆ ನೋವು ನಿವಾರಣೆಗೂ ಇದು ಉತ್ತಮವಾಗಿ ಕೆಲಸ ಮಾಡುತ್ತದೆ.
#ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕುತ್ತದೆ!ನೀವು ಗಮನಿಸಿರಬಹುದು ಬಿಸಿ ನೀರು ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚುತ್ತದೆ ಮತ್ತು ಬೆವರುವಿಕೆ ಉಂಟಾಗುತ್ತದೆ. ಈ ರೀತಿಯ ಪ್ರಕ್ರಿಯೆಯಿಂದ ಇದು ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಅಥವಾ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಗೆ ಹಾಕುತ್ತದೆ. ಉದಾಹರಣೆಗೆ ನೀವು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ, ಬೆಚ್ಚಗಿನ ನೀರನ್ನು ಕುಡಿದರೆ ನಿಮ್ಮ ಶೀತ, ಕೆಮ್ಮು ಕಡಿಮೆ ಆಗುತ್ತದೆ. ಅಂದರೆ ನಮ್ಮ ದೇಹದಲ್ಲಿದ್ದ ರೋಗವನ್ನು ಬಿಸಿ ನೀರು ಹೊರಗೆ ಹಾಕುವುದಾಗಿದೆ.
#ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದ ಜೀರ್ಣ ಶಕ್ತಿ ಹೆಚ್ಚುತ್ತದೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಕಾಪಾಡುವುದು ಮಾತ್ರವಲ್ಲದೆ ಹೊಳಪಿನಿಂದ ಹಾಗೂ ಕಾಂತಿಯಿಂದ ಕೂಡಿದ ಚರ್ಮ ನಿಮ್ಮದಾಗುವ ಹಾಗೆ ಮಾಡುತ್ತದೆ.
#ರಾತ್ರಿ ಮಲಗುವಾಗ ಒಂದು ಲೋಟ ಬೆಚ್ಚಗಿನ ನೀರು ಕುಡಿದರೆ ಅದು ತೂಕ ಇಳಿಸಲು ತುಂಬಾ ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಬಿಸಿನೀರು ಕುಡಿಯಲು ವೈದ್ಯರು ಶಿಫಾರಸು ಮಾಡುತ್ತಾರೆ. ಬಿಸಿ ನೀರು ಕುಡಿಯುವುದರಿಂದ ದೇಹದ ಹೆಚ್ಚುವರಿ ಕೊಬ್ಬು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.