ಹಾಲಿಗೆ ತುಪ್ಪ ಬೆರೆಸಿ ಸೇವಿಸುವುದರಿಂದ ಸಿಗುವ ಪ್ರಯೋಜನಗಳು!

ತುಪ್ಪ, ಆಯುರ್ವೇದ ಸೂಚಿಸಿದ ಹಲವಾರು ಗುಣಪಡಿಸುವ ಗುಣಗಳನ್ನು ಹೊಂದಿರುವ ಅಧ್ಭುತ ಆಹಾರವಾಗಿದೆ. ಇದರ ರುಚಿ ಮತ್ತು ಪರಿಮಳ ನಮ್ಮ ಅಹಾರವನ್ನು ಇನ್ನಷ್ಟು ಇಷ್ಟವಾಗುವಂತೆ ಮಾಡುವ ಕಾರಣ ನಮ್ಮ ಹಲವಾರು ಸಾಂಪ್ರಾದಾಯಿಕ ಆಹಾರಗಳಲ್ಲಿ ಸ್ಥಾನ ಪಡೆದಿರುವುದು ಮಾತ್ರವಲ್ಲ, ಆಯುರ್ವೇದ ತುಪ್ಪವನ್ನು ಹಲವು ಕಾಯಿಲೆಗಳಿಗೆ ಔಷಧಿಯ ರೂಪದಲ್ಲಿಯೂ ಸೇವಿಸುವಂತೆ ಸೂಚಿಸಿದೆ.ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪದಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣ, ಬ್ಯಾಕ್ಟೀರಿಯಾ ನಿವಾರಕ ಗುಣ ಮತ್ತು ಶಿಲೀಂಧ್ರನಿವಾರಕ ಗುಣಗಳಿವೆ. ಹಲವಾರು ಅವಶ್ಯಕ ಪೋಷಕಾಂಶಗಳು ಹಾಗೂ ಕೊಬ್ಬಿನ ಆಮ್ಲಗಳನ್ನೂ ಹೊಂದಿರುವ ಕಾರಣ ಇದಕ್ಕೆ ಸುಪರ್ ಫುಡ್ ಅಥವಾ ಅದ್ಭುತ ಆಹಾರವೆಂಬ ಗುಣವಾಚಕವನ್ನೂ ಒದಗಿಸಲಾಗಿದೆ.
#ಆರೋಗ್ಯಕರ ಮತ್ತು ಹೊಳೆಯುವ ಚರ್ಮ:ಆರೋಗ್ಯಕರ ಮತ್ತು ಹೊಳೆಯುವ ಚರ್ಮಕ್ಕಾಗಿ, ತುಪ್ಪ ಮಿಶ್ರಿತ ಹಾಲನ್ನು ಕುಡಿಯಬೇಕು. ಇದು ನಮ್ಮ ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವಾಸ್ತವವಾಗಿ, ತುಪ್ಪ ಮತ್ತು ಹಾಲು ಎರಡೂ ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ಅದು ನೈಸರ್ಗಿಕವಾಗಿ ಚರ್ಮವನ್ನು ತೇವಗೊಳಿಸುತ್ತದೆ. ನಾವು ಪ್ರತಿದಿನ ಹಾಲಿನೊಂದಿಗೆ ಬೆರೆಸಿದ ತುಪ್ಪವನ್ನು ಸೇವಿಸಿದರೆ, ಚರ್ಮದ ವಯಸ್ಸಾಗುವಿಕೆಯು ಕಡಿಮೆಯಾಗುತ್ತದೆ ಮತ್ತು ಶುಷ್ಕತೆಯನ್ನು ತೆಗೆದುಹಾಕುತ್ತದೆ.
#ರಾತ್ರಿ ನಿಮಗೆ ನಿದ್ರೆ ಬರದಿದ್ದರೆ ಮಲಗುವ ಮುನ್ನ ಹಾಲಿಗೆ 1 ಚಮಚ ತುಪ್ಪ ಸೇರಿಸಿ ಕುಡಿಯಿರಿ. ಇದನ್ನು ಸೇವಿಸುವುದರಿಂದ ನರಗಳು ಶಾಂತವಾಗುತ್ತವೆ. ಇದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರುತ್ತದೆ.
#ಕೀಲು ನೋವಿಗೆ ಪರಿಹಾರ:ಕೀಲು ನೋವಿನ ಸಮಸ್ಯೆ ಇರುವವರು ನಿಯಮಿತವಾಗಿ ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಕೀಲು ನೋವಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ ಮತ್ತು ತುಪ್ಪದಲ್ಲಿ ವಿಟಮಿನ್ ಕೆ 2 ಪ್ರಮಾಣವು ಉತ್ತಮವಾಗಿದೆ. ಈ ಜೀವಸತ್ವಗಳು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ. ಹಾಲಿಗೆ ತುಪ್ಪ ಬೆರೆಸಿ ಕುಡಿದರೆ ಕೀಲುನೋವು ನಿವಾರಣೆಯಾಗುತ್ತದೆ.
#ಹಾಲಿನೊಂದಿಗೆ ತುಪ್ಪ ಹಾಕಿಕೊಂಡು ಕುಡಿದರೆ ಅದರಿಂದ ದೇಹವನ್ನುನಿರ್ವಿಷಗೊಳಿಸಲು ಸಾಧ್ಯವಾಗುವುದು ಮತ್ತು ಹಾನಿಕಾರಕ ವಿಷಕಾರಿ ಅಂಶಗಳಿಂದ ದೇಹವು ಹೊರಬರಲು ನೆರವಾಗುವುದು. ಹಾಲು ಮತ್ತು ತುಪ್ಪ ಸೇವಿಸಿದರೆ ಅದರಿಂದ ಚಯಾಪಚಯ ಹೆಚ್ಚಾಗುವುದು ಇದರಿಂದ ಶಕ್ತಿ ಮತ್ತು ಉಲ್ಲಾಸ ಸಿಗುವುದು.