ಕ್ಯಾರೆಟ್ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನ!

ವಿವಿಧ ರೂಪಗಳಲ್ಲಿ ಆಹಾರವಾಗಿ ತೆಗೆದುಕೊಳ್ಳಬಹುದಾದ ತರಕಾರಿಯೆಂದರೆ ಅದು ಕ್ಯಾರೆಟ್. ಕ್ಯಾರೆಟ್‌ಗಳನ್ನು ಹಸಿಯಾಗಿ ತಿನ್ನಬಹುದು, ಇತರ ತರಕಾರಿಗಳ ಜೊತೆ ಸೇರಿಸಿ ಸಾಂಬಾರ್ ಮಾಡಬಹುದು, ಪಲಾವ್ನಂತಹ ತಿಂಡಿಗಳಲ್ಲಿ ಬಳಸಬಹುದು, ಸಿಹಿತಿಂಡಿಗಳಲ್ಲಿ, ಕೇಕ್‌ಗಳಲ್ಲಿ, ಜ್ಯೂಸ್‌ನಲ್ಲಿ ಬಳಸಬಹುದು ಮತ್ತು ಆಹಾರದ ಅಲಂಕಾರವಾಗಿಯೂ ಉಪಯೋಗಿಸಬಹುದು. ಕ್ಯಾರೆಟ್ ತಿನ್ನುವ ಆರೋಗ್ಯ ಪ್ರಯೋಜನಗಳ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ.
#ಚರ್ಮಕ್ಕೆ ಹೊಳಪು ನೀಡುತ್ತದೆ:ಕ್ಯಾರೆಟ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಮತ್ತು ವಿಟಮಿನ್ ಸಿ ಚರ್ಮದ ಕಾಲಜನ್ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ನಲ್ಲಿರುವ ಫೈಬರ್ ಮತ್ತು ಪ್ರೋಟೀನ್ ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುತ್ತದೆ. ವಿಟಮಿನ್ ಸಿ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ. ಕಂಪ್ಯೂಟರ್ ಪರದೆಯ ಹಾನಿ ತಡೆಯುತ್ತದೆ.
#ಸಾಮಾನ್ಯವಾಗಿ ನಾವು ಕತ್ತಲಿನಲ್ಲಿ ಯಾವುದೇ ವಸ್ತುವನ್ನು ನೋಡಲು ಸಾಧ್ಯವಿಲ್ಲ. ಕೆಲವರಿಗೆ ಬೆಳಗಿನ ಸಮಯದಲ್ಲೂ ಕೂಡ ಕಣ್ಣುಗಳಿಗೆ ಮಂಜು ಕವಿದ ಅನುಭವ ಉಂಟಾಗುತ್ತದೆ.ಇದನ್ನು ಕಣ್ಣಿನ ದೃಷ್ಟಿ ಸಮಸ್ಯೆ ಎಂದು ಕರೆಯಬಹುದು. ಆದರೆ ವಿಟಮಿನ್ ಎ ಅಂಶ ಹೆಚ್ಚಾಗಿರುವ ಕ್ಯಾರೆಟ್ ಸೇವನೆಯಿಂದ ಕಣ್ಣಿನ ದೃಷ್ಟಿ ಅಭಿವೃದ್ಧಿ ಆಗುವುದರ ಜೊತೆಗೆ ಕಣ್ಣಿನ ಪೊರೆ ದೂರವಾಗಿ ರಾತ್ರಿ ಕುರುಡು ಸಮಸ್ಯೆ ಇಲ್ಲವಾಗುತ್ತದೆಜೊತೆಗೆ ಕಣ್ಣುಗಳಿಗೆ ಸಂಬಂಧಪಟ್ಟಂತೆ ಕಂಡುಬರುವ ಇತರ ಸಮಸ್ಯೆಗಳು ಕೂಡ ಇರುವುದಿಲ್ಲ. ವಯಸ್ಸಾದ ಮೇಲೆ ಕಂಡುಬರುವ ಕಣ್ಣಿನ ಪೊರೆ ಸಮಸ್ಯೆಗೆ ಈಗಿನಿಂದಲೇ ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳಲು ಕ್ಯಾರೆಟ್ ನೆರವಾಗುತ್ತದೆ.
#ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ:ಕ್ಯಾರೆಟ್ ಸೇವನೆಯಿಂದ ಹಲವಾರು ಬಗೆಯ ಕ್ಯಾನ್ಸರ್ ಗಳು ಆವರಿಸುವ ಸಾಧ್ಯತೆ ತಗ್ಗುತ್ತದೆ. ವಿಶೇಷವಾಗಿ ಶ್ವಾಸಕೋಶ, ಪ್ರಾಸ್ಟೇಟ್, ಕರುಳು ಮತ್ತು ಜಠರದ ಕ್ಯಾನ್ಸರ್ ವಿರುದ್ದ ರಕ್ಷಣೆ ದೊರಕುತ್ತದೆ. ಒಂದು ಅಧ್ಯಯನದ ಪ್ರಕಾರ ಕ್ಯಾರೆಟ್ಟಿನಲ್ಲಿರುವ ಕ್ಯಾರೋಟಿನಾಯ್ಡುಗಳು ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ವಿರುದ್ದ ಹೋರಾಡುತ್ತವೆ. ಇನ್ನೊಂದು ಅಧ್ಯಯನದ ಪ್ರಕಾರ ಕ್ಯಾರೆಟ್ ಸೇವನೆ ಹೆಚ್ಚಿದ್ದಷ್ಟೂ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆ ಇರುತ್ತದೆ.
#ತೂಕ ನಷ್ಟಕ್ಕೆ ಪ್ರಯೋಜನಕಾರಿ:ಕ್ಯಾರೆಟ್ ಒಂದು ಪರಿಪೂರ್ಣ ತೂಕ ನಷ್ಟ ಆಹಾರವಾಗಿದೆ. ಇದು ಕರಗುವ ಮತ್ತು ಕರಗದ ಫೈಬರ್ ಎರಡನ್ನೂ ಹೊಂದಿರುತ್ತದೆ, ಇದರಿಂದಾಗಿ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಇದನ್ನು ಸೇವಿಸಿದ್ರೆ ನೀವು ಬೇಗನೆ ಆಹಾರವನ್ನು ಸೇವಿಸುವುದಿಲ್ಲ. ಈ ಕಾರಣದಿಂದ ತೂಕ ನಷ್ಟವಾಗಲು ಪ್ರಾರಂಭವಾಗುತ್ತದೆ