ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ ಮನೆಮದ್ದು!

ಗ್ಯಾಸ್ಟ್ರಿಕ್ ಸಮಸ್ಯೆ ಮಲಬದ್ಧತೆ ಸಮಸ್ಯೆ ನಿವಾರಣೆಗೆ ಈ ಮನೆ ಮದ್ದು ಸೇವಿಸಿ ಸಾಕು ವೈದ್ಯರೆ ತಿಳಿಸಿದ ಔಷಧ ಇದು.ಸಾಮಾನ್ಯವಾಗಿ ನೂರರಲ್ಲಿ ಶೇಕಡ 90ರಷ್ಟು ಜನ ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಾರೆ ಮಲಬದ್ಧತೆ ಸಮಸ್ಯೆ ಅಜೀರ್ಣ ಸಮಸ್ಯೆಯೂ ಕೂಡ ಇಂತಹ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಇಂದು ಮಲಬದ್ಧತೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಯಾವ ರೀತಿಯಾಗಿ ನಿವಾರಣೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಒಂದು ಅದ್ಭುತವಾದ ಮನೆಮದ್ದನ್ನು ತಿಳಿಸುತ್ತಿದ್ದೇವೆ.

#ಪಪ್ಪಾಯಿ ಬೀಜಗಳನ್ನು ಬಿಸಿಲಿಗೆ ಹಾಕಿ ಒಣಗಿಸಿಕೊಂಡು ಅದನ್ನು ನಿತ್ಯವೂ ಹುಡಿ ಮಾಡಬೇಕು. ಈ ಹುಡಿಯನ್ನು ಒಂದು ತುಂಡು ಅನಾನಸಿಗೆ ಹಾಕಿಕೊಂಡು ದಿನನಿತ್ಯವು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ.

#ಇನ್ನು ನಿಯಮಿತ ಸಮಯಕ್ಕೆ ಆಹಾರ ಸೇವನೆ ಮಾಡುವುದನ್ನು ರೂಢಿ ಮಾಡಿಕೊಳ್ಳುವುದು ಉತ್ತಮ. ಒಂದೊಂದು ದಿನ ಒಂದೊಂದು ಸಮಯದಲ್ಲಿ ಊಟ-ತಿಂಡಿ ಮಾಡಿದರೆ, ಮಾನವನ ಜೀರ್ಣಾಂಗ ವ್ಯೆಹ ಸರಿಯಾಗಿ ಕೆಲಸ ಮಾಡುವುದಿಲ್ಲ. ಆಹಾರ ಸೇವಿಸುವಾಗ ಅವಸರಿಸದೇ ಇರುವುದು ಒಳ್ಳೆಯದು. ಗಬಗಬನೇ ನುಂಗುವುದರಿಂದ,ಇಲ್ಲವೇ ಎಡೆಬಿಡದೇ ಮಾತನಾಡುತ್ತಲೇ ತಿನ್ನುವುದರಿಂದ ಆವಶ್ಯಕತೆಗಿಂತ ಹೆಚ್ಚಿನ ಗಾಳಿ ಜಠರ ಸೇರುತ್ತದೆ. ಆಹಾರದಲ್ಲಿ ಮೊಸರು ಆಥವಾ ಮಜ್ಜಿಗೆಯನ್ನು ಬಳಸುವುದು ಜೀರ್ಣಾಂಗದ ಆರೋಗ್ಯಕ್ಕೆ ಪೂರಕ. ಸೊಪ್ಪು, ತರಕಾರಿ, ಸಾಂಬಾರ ಪದಾರ್ಥಗಳೂ ಜೀರ್ಣಾಂಗದ ಸಮಸ್ಯೆಗಳನ್ನು ನಿವಾರಿಸಲು ಸಹಕರಿಸುತ್ತವೆ

#ಹೊಟ್ಟೆಗೆ ಶಮನ ನೀಡಲು ಶುಂಠಿ ತುಂಬಾ ಪರಿಣಾಮಕಾರಿ. ಶುಂಠಿ ಮತ್ತು ಈರುಳ್ಳಿ ರಸವನ್ನು ಸಮ ಪ್ರಮಾಣದಲ್ಲಿ ಸೇರಿಸಿಕೊಂಡು ಪ್ರತಿನಿತ್ಯ ಸೇವಿಸಿದರೆ ಇದರಿಂದ ಉರಿಯೂತ, ವಾಕರಿಕೆ ಮತ್ತು ಹೊಟ್ಟೆಯ ಕಿರಿಕಿರಿ ಕಡಿಮೆಯಾಗುವುದು.

#ಜೀರಿಗೆ ನೀರು (ಉಗುರು ಬೆಚ್ಚಗಿನ ನೀರು)ಗ್ಯಾಸ್ಟ್ರಿಕ್ ಅಥವಾ ಗ್ಯಾಸ್ ಸಮಸ್ಯೆಗೆ ಜೀರಿಗೆ ನೀರು ಕುಡಿಯುವುದು ಉತ್ತಮ ಮನೆಮದ್ದು. ಜೀರಾ ಅಥವಾ ಜೀರಿಗೆ ಜೀವಾಣು ಗ್ರಂಥಿಗಳನ್ನು ಉತ್ತೇಜಿಸುವ ಸಾರಭೂತ ತೈಲಗಳನ್ನು ಒಳಗೊಂಡಿರುತ್ತದೆ. ಇದು ಆಹಾರದ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೆಚ್ಚುವರಿ ಅನಿಲದ ರಚನೆಯನ್ನು ತಡೆಯುತ್ತದೆ ಎಂದು ಎಂದು ತಜ್ಞರು ಹೇಳುತ್ತಾರೆ.ಎರಡು ಕಪ್ ನೀರಿಗೆ ಒಂದು ಟೀ ಚಮಚ ಜೀರಿಗೆ ಸೇರಿಸಿ, 15-20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಸ್ವಲ್ಪ ಕಾಲ ತಣಿಯಲು ಬಿಡಿ. ಊಟ ಆದ ನಂತರ ಈ ಜೀರಿಗೆ ನೀರನ್ನು ಸೇವಿಸಿ. ಆಗ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ತುಂಬುವ ಪ್ರಕ್ರಿಯೆಯನ್ನು ಸುಲಭವಾಗಿ ತಡೆಯಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group